ಡಿಕೆಶಿ ಆರೋಗ್ಯ ಚೇತರಿಕೆ, ನಾಳೆಯೊಳಗೆ ಬಿಡುಗಡೆ ಸಾಧ್ಯತೆ: ಸಂಸದ ಡಿ.ಕೆ.ಸುರೇಶ್​

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್​ ಅವರದ್ದು ಓಡಿಹೋಗುವ ಜಾಯಮಾನ ಅಲ್ಲ. ಯಾವುದೋ ಭಯದಿಂದ ಬಂದು ಆಸ್ಪತ್ರೆಗೆ ಅಡ್ಮಿಟ್​ ಆಗಿಲ್ಲ. ಭಗವಂತ, ಗುರುಗಳು, ಜನರ ಕೃಪೆ ಡಿಕೆಶಿ ಮೇಲಿದೆ. ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇವೆ ಎಂದು ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್​ ತಿಳಿಸಿದ್ದಾರೆ.

ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಕೆಶಿ ಆರೋಗ್ಯ ಚೇತರಿಸಿಕೊಂಡಿದ್ದು, ಇಂದು ಅಥವಾ ನಾಳೆ ಡಿಸ್ಚಾರ್ಜ್​ ಮಾಡುವ ಸಾಧ್ಯತೆ ಇದೆ. ಅವರಿಗೆ ಅಗತ್ಯವಿರುವ ಎಲ್ಲ ಚಿಕಿತ್ಸೆಗಳನ್ನೂ ನೀಡಲಾಗುತ್ತಿದೆ ಎಂದರು.

ನಮಗೂ ಅವರಿಗೂ ಏನು ಸಂಬಂಧ?
ಮಾಧ್ಯಮದವರು ಜಾರಕಿಹೊಳಿ ಬ್ರದರ್ಸ್​ ಬಗ್ಗೆ ಪ್ರಶ್ನೆ ಕೇಳಿದಾಗ, ನಮಗೂ ಜಾರಕಿಹೊಳಿ ಬ್ರದರ್ಸ್​ಗೂ ಏನ್ರೀ ಸಂಬಂಧ ಎಂದು ಪ್ರಶ್ನಿಸಿದರು.

ಬಿಎಸ್​ವೈ ಅವರನ್ನೇ ಕೇಳಿ
ಬಿಎಸ್​​ವೈ ಅವರ ಪಾನ್​ ಮೂವ್​ ಹೇಳಿಕೆಗೆ ಟಾಂಗ್ ಕೊಟ್ಟ ಸುರೇಶ್​, ಬಿಎಸ್​ವೈ ಅವರೇ ಅಂಪೈರ್​ ಇಲ್ಲದೇ ಆಟವಾಡುತ್ತಿರುವುದು. ಅವರಿಗೆ ಅಂಪೈರ್​ ಯಾರು ಅಂತಲೇ ಗೊತ್ತಿಲ್ಲ. ಇದರ ಬಗ್ಗೆ ಅವರನ್ನೇ ಕೇಳಿ ಎಂದರು. (ದಿಗ್ವಿಜಯ ನ್ಯೂಸ್​)