ಸಚಿವ ಡಿಕೆಶಿ ವಿರುದ್ಧ ನೀಡಿದ್ದ ದೂರು ವಾಪಸ್​ ಪಡೆದ ಬಿಬಿಎಂಪಿ ಅಧಿಕಾರಿ

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಅವರ ವಿರುದ್ಧ ದೂರು ದಾಖಲಿಸಿದ್ದ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಮುತ್ತುರಾಜ್​ ತಾವು ನೀಡಿದ್ದ ದೂರನ್ನು ಹಿಂಪಡೆದಿದ್ದಾರೆ.

ಹೈಕೋರ್ಟ್​ ಆದೇಶದಂತೆ ಅನಧಿಕೃತ ಜಾಹೀರಾತು ಫಲಕ ತೆರವು ಮಾಡದ ಹಿನ್ನೆಲೆಯಲ್ಲಿ ಮುತ್ತುರಾಜ್​ ಅವರು ಬ್ಯಾಟರಾಯನಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರನ್ನು ಆಧರಿಸಿ ಸಚಿವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿತ್ತು.

ಆದರೆ ದೂರು ದಾಖಲಿಸಿದ ಒಂದೇ ದಿನಕ್ಕೆ ಉಲ್ಟಾ ಹೊಡೆದಿರುವ ದೂರುದಾರ ಮುತ್ತರಾಜ್​ ಅವರು ಪೊಲೀಸರಿಗೆ ಮರು ಹೇಳಿಕೆ ನೀಡಿದ್ದು, ಜಾಹೀರಾತು ಫಲಕ ಇದ್ದ ಜಾಗಕ್ಕೆ ಡಿಕೆಶಿ ಮಾಲೀಕರೇ ಅಲ್ಲ, ತಪ್ಪಾಗಿ ದೂರು ಕೊಟ್ಟಿದ್ದೆ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ಈ ಕುರಿತು ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ ಮುತ್ತುರಾಜ್​ ಅವರು ನಾನು ದೂರು ನೀಡಿಯೇ ಇರಲಿಲ್ಲ ಎಂದು ತಿಳಿಸಿದ್ದಾರೆ.

ಸಚಿವ ಡಿಕೆಶಿ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್​ಐಆರ್​ !