ವೀರಯೋಧರ ಸೋಗಿನಲ್ಲಿ ಸೈಬರ್ ಟೋಪಿ! ಮೂರೂವರೆ ತಿಂಗಳಲ್ಲಿ 77 ಜನರಿಗೆ ವಂಚನೆ, ಲಕ್ಷಾಂತರ ರೂ. ಲೂಟಿ

ಬೆಂಗಳೂರು: ಜೀವದ ಹಂಗು ತೊರೆದು ದೇಶ ಕಾಯುವ ಸೈನಿಕರ ಸೋಗಿನಲ್ಲಿ ಟೋಪಿ ಹಾಕುವ ಸೈಬರ್ ಖದೀಮರ ಉಪಟಳ ಎಲ್ಲೆ ಮೀರಿದೆ. ಸಿಐಡಿ ಸೈಬರ್ ಕ್ರೖೆಂ ಪೊಲೀಸರ ಜನಜಾಗೃತಿ ಹೊರತಾಗಿಯೂ ರಾಜ್ಯದಲ್ಲಿ ಕಳೆದ ಮೂರೂವರೆ ತಿಂಗಳಲ್ಲಿ 77 ಜನರಿಗೆ ವಂಚಿಸಿ, ಲಕ್ಷಾಂತರ ರೂ. ಲೂಟಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುವಂಥ ಸೈನಿಕರ ಫೋಟೋ, ಹೆಸರು, ಗುರುತಿನ ಚೀಟಿ ಹಾಗೂ ಸೇನಾ ಶಿಬಿರ, ಕಚೇರಿಗಳ ಫೋಟೋ ಬಳಸಿಕೊಂಡು ಸಾರ್ವಜನಿಕರನ್ನು ವಂಚಿಸುವುದು ಸೈಬರ್ ಕಳ್ಳರ ಹೊಸ ಟ್ರೆಂಡ್. ಯೋಧರ ಬಗ್ಗೆ ಗೌರವ ಹಾಗೂ ಹೆಮ್ಮೆ ಹೊಂದಿರುವ ಕಾರಣಕ್ಕೆ ನಾಗರಿಕರು ಸುಲಭವಾಗಿ ವಂಚನೆಗೆ ಒಳಗಾಗುತ್ತಿದ್ದಾರೆ ಎನ್ನುತ್ತಾರೆ ಸೈಬರ್ ಪೊಲೀಸರು.

ವಂಚನೆ ಹೇಗೆ?

# ಒಎಲ್​ಎಕ್ಸ್ ಮತ್ತು ಕ್ವಿಕರ್​ನಲ್ಲಿ ಕಾರು, ಬೈಕು ಮಾರಾಟಕ್ಕೆ ಇಟ್ಟು ಮೊಬೈಲ್ ನಂಬರ್ ಅಪ್​ಲೋಡ್.

# ಕರೆ ಮಾಡುವ ಜನರಿಗೆ ತಮ್ಮ ನಕಲಿ ಐಡಿ ಕಾರ್ಡ್​ನ್ನು ವಾಟ್ಸ್​ಆಪ್ ಮಾಡಿ ಸೈನಿಕನೆಂದು ಪರಿಚಯ.

# ಸೇನಾ ಕ್ಯಾಂಪ್​ನಿಂದ ಹೊರಬರಲು ಸಾಧ್ಯವಿಲ್ಲ. ಕಡಿಮೆ ಬೆಲೆಗೆ ಕಾರು ಮಾರುತ್ತಿದ್ದೇನೆ ಎಂದು ಸುಳ್ಳು ಆಮಿಷ

# ಕಡಿಮೆ ಬೆಲೆಗೆ ಕಾರು ಸಿಗುತ್ತದೆಂದು ಖರೀದಿಗೆ ಮುಂದಾದರೆ ಹಣ ಆನ್​ಲೈನ್ ವರ್ಗಾವಣೆಗೆ ಸೂಚನೆ

# ಖಾತೆಗೆ ಹಣ ಬಂದ ಕೂಡಲೇ ಡ್ರಾ ಮಾಡಿಕೊಂಡು ಮೊಬೈಲ್ ಸಂಪರ್ಕ ಕಡಿತಗೊಳಿಸುವ ಆರೋಪಿಗಳು.

ಈ ಬಗ್ಗೆ ಎಚ್ಚರವಿರಲಿ

# ಒಎಲ್​ಎಕ್ಸ್, ಕ್ವಿಕರ್​ನಲ್ಲಿ ವಾಹನ ಖರೀದಿಸುವ ಮುನ್ನ ಪರಿಶೀಲಿಸಿ.

# ವಾಹನವನ್ನು ಖುದ್ದಾಗಿ ನೋಡದೆ ಯಾವ ಕಾರಣಕ್ಕೂ ಹಣ ವರ್ಗಾಯಿಸಬೇಡಿ.

# ಡೆಬಿಟ್/ಕ್ರೆಡಿಟ್ ಕಾರ್ಡ್ ವಿವರ ಮತ್ತು ಒಟಿಪಿ ಮಾಹಿತಿ ಕೇಳಿದರೆ ಕೊಡಬೇಡಿ,ಅನುಮಾನವಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ.

ಎಲ್​ಎಲ್​ಎಕ್ಸ್, ಕ್ವಿಕರ್, ಫೇಸ್​ಬುಕ್​ನಲ್ಲಿ ವಸ್ತುಗಳನ್ನು ಮಾರಾಟಕ್ಕೆ ಇಟ್ಟಾಗ ಪರಿಶೀಲಿಸದೆ ಖುದ್ದು ವಸ್ತು ನೋಡದೆ ಹಣವನ್ನು ವರ್ಗಾವಣೆ ಮಾಡಬೇಡಿ.

| ಶರತ್ ಡಿವೈಎಸ್​ಪಿ, ಸಿಐಡಿ ಸೈಬರ್

Leave a Reply

Your email address will not be published. Required fields are marked *