More

    ಡೇಟಿಂಗ್ ಆಸೆಗೆ ಬಿದ್ದು ಕಳೆದುಕೊಂಡದ್ದು 17 ಲಕ್ಷ ರೂಪಾಯಿ

    ಬೆಂಗಳೂರು : ಡೇಟಿಂಗ್ ವೆಬ್‌ಸೈಟ್‌ನಲ್ಲಿ ಹಣ ಮತ್ತು ಸುಖದ ಆಸೆಯಿಂದೆ ಬಿದ್ದ ವ್ಯಕ್ತಿಯೊಬ್ಬ, ಬರೋಬ್ಬರಿ 17 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾನೆ. ಮಹದೇವಪುರದ 34 ವರ್ಷದ ವ್ಯಕ್ತಿ ವಂಚನೆಗೆ ಒಳಗಾದವ. ಕರೊನಾ ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡಿದ್ದ. ಹೊಸ ನೌಕರಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಸೈಬರ್ ಕಳ್ಳ ಪರಿಚಯವಾಗಿ ಮೊದಲು ಕೆಲಸ ಕೊಡಿಸುವ ಭರವಸೆ ನೀಡಿದ್ದಾನೆ.

    ನಿಧಾನವಾಗಿ ದೂರುದಾನನ್ನು ತನ್ನತ್ತ ಸೆಳೆದುಕೊಂಡ ಸೈಬರ್ ಕಳ್ಳ, ಡೇಟಿಂಗ್ ವೆಬ್‌ಸೈಟ್‌ಗೆ ನೋಂದಣಿ ಮಾಡಿಕೊಂಡರೇ ನಿನಗೆ ಕೈತುಂಬ ಹಣ ಮತ್ತು ಜೀವನದಲ್ಲಿ ಡೇಟಿಂಗ್ ಸುಖ ಸಹ ಸಿಗುತ್ತದೆ ಎಂದು ಮಾತು ಬದಲಾಯಿಸಿದ್ದ. ದೂರುದಾರ ಸಹ ಹಣ ಮತ್ತು ಸುಖದ ಹಿಂದೆ ಬಿದ್ದಾಗ ಅದನ್ನೇ ದುರುಪಯೋಗ ಪಡಿಸಿಕೊಂಡ ಸೈಬರ್ ವಂಚಕ, ‘ಡೇಟಿಂಗ್ ವೆಬ್‌ಸೈಟ್‌ಗೆ ಮೊದಲು ನೋಂದಣಿ ಆಗಲು ಸ್ವವಿವರ ಪರಿಶೀಲನೆ ನಡೆಸಲಾಗುತ್ತದೆ. ಅದಕ್ಕೆ ಹಣ ಪಾವತಿ ಮಾಡಬೇಕೆಂದು ಜ.23ರಂದು ಮೊದಲ ಬಾರಿಗೆ ಶುಲ್ಕದ ರೂಪದಲ್ಲಿ ವಂಚಕ ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡಿದ್ದಾನೆ.

    ಇದಾದ ಮೇಲೆ ದೂರುದಾರನಿಗೆ ಗ್ರೀನ್ ಕಾರ್ಡ್ ಪಡೆದರೇ ಸುಂದರ ಯುವತಿಯರ ಜತೆಗೆ ಡೇಟಿಂಗ್ ಹೋಗಲು ಹೆಚ್ಚಿನ ಅವಕಾಶಗಳು ಸಿಗಲಿದೆ ಎಂದು ಹೇಳಿ ಮತ್ತೆ ಹಣ ಪಡೆದುಕೊಂಡಿದ್ದ. ಇದೇ ರೀತಿ ಡೇಟಿಂಗ್ ಅಗ್ರಿಮೆಂಟ್ ಶುಲ್ಕ, ಸದಸತ್ವ ಶುಲ್ಕ, ಐಡಿ ನಂಬರ್ ಕೊಡಲು ನಾನ ನೆಪದಲ್ಲಿ ವಿವಿಧ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 16.96 ಲಕ್ಷ ರೂ. ಜಮೆ ಮಾಡಿಕೊಂಡಿದ್ದಾನೆ.

    ಪದೇ ಪದೆ ಹಣ ಕೇಳಿದಾಗ ಅನುಮಾನ ಬಂದು ದೂರುದಾರ ತನ್ನ ಹಣ ವಾಪಸ್ ನೀಡುವಂತೆ ಕೇಳಿದ್ದಾನೆ. ಸೈಬರ್ ಕಳ್ಳ, ಸಂಪರ್ಕ ಕಡಿತ ಮಾಡಿಕೊಂಡಿದ್ದು, ನೊಂದ ವ್ಯಕ್ತಿ ದಿಕ್ಕು ತೋಚದೆ ಕೊನೆಗೆ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವೈಟ್‌ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts