ಮಹಾರಾಷ್ಟ್ರ: ಹೊಟ್ಟೆ ತುಂಬ ಬೇಕಾದ್ದನ್ನು ತರಿಸಿಕೊಂಡು ತಿಂದ ಕಿಡಿಗೇಡಿಗಳು ಊಟದ ಬಿಲ್ ಪಾವತಿ ಮಾಡಿ ಎಂದು ವೈಟರ್ ಕೇಳಿದ್ದೇ ತಡ ಹೋಟೆಲ್ನಿಂದ ಕಾಲ್ಕಿತ್ತಿದ್ದಾರೆ. ಪರಾರಿಯಾಗಲು ಯತ್ನಿಸಿದ ಮೂವರು ಗ್ರಾಹಕರನ್ನು ತಡೆಯಲು ಹೋದ ವೈಟರ್ನನ್ನು ಒಂದು ಕಿ.ಮೀ ದೂರ ಕಾರಿನಲ್ಲಿ ಎಳೆದೊಯ್ದ ಅಮಾನವೀಯ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಆಸಕ್ತಿಯ ವಿಷಯ ಕಲಿಕೆಗೆ ಪ್ರೋತ್ಸಾಹ : ಉಪನ್ಯಾಸಕಿ ವಸಂತಿ ಕುಲಮರ್ವ ಕಿವಿಮಾತು
ಸ್ಥಳೀಯ ಹೋಟೆಲ್‌ನಲ್ಲಿ ಊಟ ಮಾಡಿದ ಮೂವರು ಗ್ರಾಹಕರಿಗೆ ವೈಟರ್ ಬಿಲ್ ಪಾವತಿ ಮಾಡುವಂತೆ ಹೇಳಿ, ಒಳಗಿದ್ದ ಫೋನ್ ಸ್ಕ್ಯಾನರ್ ತಂದುಕೊಟ್ಟಿದ್ದಾನೆ. ಈ ವೇಳೆ ವೈಟರ್ ಮತ್ತು ಯುವಕರ ಗುಂಪಿನ ಮಧ್ಯೆ ಕೆಲ ಸಮಯ ಮಾತಿನ ಜಟಾಪಟಿ ನಡೆದಿದೆ. ಸ್ಥಳದಿಂದ ಪರಾರಿಯಾಗಲು ಕಾರು ಹತ್ತಿದ ಕಿಡಿಗೇಡಿಗಳನ್ನು ಹಿಡಿಯಲು ಯತ್ನಿಸಿದ ವೈಟರ್ನ ಸುಮಾರು 1 ಕಿಮೀ ದೂರ ಎಳೆದೊಯ್ದು ಥಳಿಸಲಾಗಿದೆ. ಯುವಕನ ಜೇಬಿನಲ್ಲಿದ್ದ 11,500 ರೂ. ಹಣ ಕದ್ದು, ಕಣ್ಣಿಗೆ ಬಟ್ಟೆ ಕಟ್ಟಿ, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ರಾತ್ರೋರಾತ್ರಿ ಬಂಧನದಲ್ಲಿಟ್ಟಿದ್ದರು ಎನ್ನಲಾಗಿದೆ.
ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈಟರ್ ನೀಡಿದ ದೂರಿನ ಮೇರೆಗೆ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಖಾರಾಮ್ ಜನಾರ್ದನ್ ಮುಂಡೆ ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳು ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).
26 ವರ್ಷ ಸೇವೆ, 10 ವರ್ಷದಿಂದ ಅದೇ ಸಂಬಳ! 1 ರೂ. ಹೆಚ್ಚಾಗಲಿಲ್ಲ: ಈ ಸರ್ಕಾರದ ವಿರುದ್ಧ ವೈದ್ಯ ಕಿಡಿ
ಆ ಪ್ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ! ಈಗಲೂ ಕಣ್ಣಿನಲ್ಲಿ ಕಟ್ಟಿದಂತಿದೆ: ‘ಕಿಂಗ್’ ಕೊಹ್ಲಿ ಮನದಾಳ