Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ಸಿಎಂ ಸಾಧನಾ ಸಂಭ್ರಮಕ್ಕೆ ತೆರೆ

Saturday, 13.01.2018, 3:02 AM       No Comments

ಮಳವಳ್ಳಿ/ ಶ್ರೀರಂಗಪಟ್ಟಣ: ಸರ್ಕಾರದ ಸಾಧನೆಗಳನ್ನು ಪ್ರಚುರಪಡಿಸುವ ನೆಪದಲ್ಲಿ ಮುಂದಿನ ಚುನಾವಣೆ ಪ್ರಚಾರಕ್ಕೆ ಅಡಿಪಾಯ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಮ್ಮಿಕೊಂಡಿದ್ದ ಒಂದು ತಿಂಗಳ ಸಾಧನ ಸಂಭ್ರಮಕ್ಕೆ ಸಕ್ಕರೆ ಜಿಲ್ಲೆಯ ಎರಡು ಸಮಾವೇಶಗಳೊಂದಿಗೆ ಶುಕ್ರವಾರ ತೆರೆಬಿದ್ದಿತು.

ಪ್ರವಾಸ ವೇಳೆ ಜನರಲ್ಲಿ ನಮ್ಮ ಪರ ಒಲವಿರುವುದು ವ್ಯಕ್ತವಾಗಿದೆ. ಅನ್ನಭಾಗ್ಯ, ಕ್ಷೀರಭಾಗ್ಯ ಇತ್ಯಾದಿ ಜನರಿಗೆ ತಲುಪುವ ಯೋಜನೆಗಳಾಗಿವೆ. ಪ್ರವಾಸ ಯಶಸ್ವಿಯಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಮಂಡ್ಯ ಜಿಲ್ಲಾ ಪ್ರವಾಸಕ್ಕೆ ಹೊರಡುವ ಮುನ್ನ ಮೈಸೂರಿನಲ್ಲಿ ಹೇಳಿದರು. ಮೈಸೂರಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್​ಗೆ ಚಾಲನೆ ನೀಡಿದರು.

ಮಳವಳ್ಳಿ, ಶ್ರೀರಂಗಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಣೆಗಾಗಿ ಏರ್ಪಡಿಸಿದ್ದ ಬೃಹತ್ ಸಮಾರಂಭಗಳಲ್ಲಿ ಮಾತನಾಡಿದ ಸಿಎಂ, ಯಥಾ ಪ್ರಕಾರ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ನಾನು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದರಿಂದ ಬಿಜೆಪಿ ಮತ್ತು ಜೆಡಿಎಸ್​ಗೆ ಹತಾಶೆಯಾಗಿದೆ ಎಂದರು.

ಐಟಿ ದಾಳಿ ಉದ್ದೇಶಪೂರ್ವಕ: ನನ್ನ ಆಪ್ತರ ಮೇಲೆ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿಯೇ ಐಟಿ ದಾಳಿ ಮಾಡಿಸುತ್ತಿದೆ. ತೆರಿಗೆ ಇಲಾಖೆ ದುರುಪಯೋಗ ಮಾಡಿಕೊಂಡು ರಾಜಕೀಯ ಎದುರಾಳಿಗಳನ್ನು ಬೆದರಿಸಲು ಮುಂದಾಗಿದ್ದಾರೆ ಎಂದು ದೂರಿದರು. ಬಂಡಾಯ ಶಾಸಕರ ಪಕ್ಷ ಸೇರ್ಪಡೆ ಬಗ್ಗೆ ಹೈಕಮಾಂಡ್ ಜತೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಜ.27ರಿಂದ ಮೂರು ದಿನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು.

ಎರಡೂ ಕಡೆ ನಿದ್ರೆಗೆ ಶರಣು: ಸಿದ್ದರಾಮಯ್ಯ ಎಂದಿನಂತೆ ಶುಕ್ರವಾರ ಮಳವಳ್ಳಿ, ಶ್ರೀರಂಗಪಟ್ಟಣ ಎರಡೂ ಕಾರ್ಯಕ್ರಮಗಳ ವೇದಿಕೆಯಲ್ಲಿ ನಿದ್ರೆಗೆ ಶರಣಾದರು. ಮಳವಳ್ಳಿಯಲ್ಲಿ ಶಾಸಕ ನರೇಂದ್ರಸ್ವಾಮಿ ಎಚ್ಚರಿಸಿದರು.

ಬಾಡೂಟಕ್ಕೆ ಶಾಲೆಗೆ ರಜೆ

ಸಮಾವೇಶಕ್ಕೆ ಆಗಮಿಸುವ ಜನರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡುವ ಸಲುವಾಗಿ ಶ್ರೀರಂಗಪಟ್ಟಣದ ಖಾಸಗಿ ಶಾಲೆಯೊಂದಕ್ಕೆ ರಜೆ ಘೊಷಿಸಲಾಗಿತ್ತು. ಓಂ ಶ್ರೀನಿಕೇತನ (ವಿಜಯ ಭಾರತಿ ಶಾಲೆ) ಆವರಣದಲ್ಲಿ ಸಾವಿರಾರು ಜನರಿಗೆ ಬಾಡೂಟ ತಯಾರಿಸಲು ನಿರ್ಧರಿಸಿದ್ದರಿಂದ ರಜೆ ಘೊಷಿಸಲಾಗಿತ್ತು. ಬಾಡೂಟ ತಯಾರಿಸುವುದಕ್ಕೂ ಪೊಲೀಸರ ಭದ್ರಕೋಟೆ ಏರ್ಪಡಿಸಿದ್ದೇಕೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡಿತು.

90 ಕ್ಷೇತ್ರಗಳಲ್ಲಿ ಸಿದ್ದು ಸಂಚಾರ

ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಡಿಸೆಂಬರ್ 13ರಂದು ಆರಂಭಿಸಿದ್ದ ರಾಜ್ಯ ಪ್ರವಾಸ ಶುಕ್ರವಾರ ಮಂಡ್ಯದಲ್ಲಿ ಕೊನೆಗೊಂಡಿದೆ. ಪ್ರವಾಸದ ಅವಧಿಯಲ್ಲಿ 30 ಜಿಲ್ಲೆಯ 90 ಕ್ಷೇತ್ರಗಳಲ್ಲಿ ಸಂಚರಿಸಿರುವ ಸಿಎಂ, ಆಯಾ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಮೂಲಕ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಪ್ರಚಾರವನ್ನು ಮುಗಿಸಿದಂತಾಗಿದೆ.

ಅಂಬಿ ಗೈರು

ಸಿಎಂ ಸಾಧನಾ ಸಂಭ್ರಮ ಸಮಾವೇಶಕ್ಕೆ ಮಂಡ್ಯದ ಶಾಸಕ ಅಂಬರೀಷ್ ಗೈರಾಗಿದ್ದರು. ಈ ಮೂಲಕ ಸಚಿವ ಸ್ಥಾನ ಹೋದ ಬಳಿಕ ಅಂಬರೀಷ್ ಜಿಲ್ಲೆಯಲ್ಲಿ ನಡೆದ ಯಾವುದೇ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳಲಿಲ್ಲ. ಮತ್ತೊಂದೆಡೆ ಜೆಡಿಎಸ್ ಬಂಡಾಯ ಶಾಸಕರಾದ ಚೆಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ಬಿಜೆಪಿಯವರನ್ನು ಪೊಲೀಸರು ಅರೆಸ್ಟ್ ಮಾಡುವ ಅಗತ್ಯವಿಲ್ಲ. ಜನರ ಮನಸ್ಸಲ್ಲಿ ಕೋಮುಭಾವನೆ ಬಿತ್ತುವವರನ್ನು, ಸಮಾಜದಲ್ಲಿ ಬೆಂಕಿ ಹಚ್ಚುವವರನ್ನು ಜನಸಾಮಾನ್ಯರೇ ಅರೆಸ್ಟ್ ಮಾಡುತ್ತಾರೆ. ಪ್ರಧಾನಿ ಮೋದಿ ಕಾಂಗ್ರೆಸ್ ಶಾಸಕರ ವೈಫಲ್ಯ ಹೇಳೋದಕ್ಕೂ ಮುಂಚೆ ನಾನೇ ಪ್ರಧಾನಿಯವರ ವೈಫಲ್ಯ ಹೇಳುತ್ತೇನೆ.

| ಸಿದ್ದರಾಮಯ್ಯ ಮುಖ್ಯಮಂತ್ರಿ

ದೆಹಲಿಯಲ್ಲಿ ಇಂದು ಕಾಂಗ್ರೆಸ್ ಸಭೆ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಘಟಕದೊಂದಿಗೆ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ನವದೆಹಲಿಯಲ್ಲಿ ಶನಿವಾರ ಮಹತ್ವದ ಸಭೆ ನಡೆಸಲಿದ್ದಾರೆ. ಸಭೆಗೆ ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್. ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಬಿ.ಕೆ. ಹರಿಪ್ರಸಾದ್, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮತ್ತಿತರರು ತೆರಳಲಿದ್ದಾರೆ. ಈವರೆಗೆ ಪಕ್ಷ, ಸರ್ಕಾರದಿಂದ ನಡೆದಿರುವ ಚುನಾವಣಾ ತಯಾರಿ, ಅದರ ಪರಿಣಾಮ ಕುರಿತು ರಾಜ್ಯ ನಾಯಕರು ವಿವರಣೆ ಕೊಡಲಿದ್ದಾರೆ.

ನಾಯಕರಿಗೆ ಹೊಣೆಗಾರಿಕೆ

ಸಿಎಂ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಚಾರ ಸಭೆ ಹಾಗೂ ಪಕ್ಷದ ಅಧ್ಯಕ್ಷ ಪರಮೇಶ್ವರ್ ನೇತೃತ್ವದ ಸಭೆಗಳ ಹೊರತಾಗಿ ವಿವಿಧೆಡೆ ರ್ಯಾಲಿಗಳನ್ನು ನಡೆಸುವುದು ಮತ್ತು ಈ ರ್ಯಾಲಿಗಳಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಕರೆತರುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

Leave a Reply

Your email address will not be published. Required fields are marked *

Back To Top