More

  ಸಿರಗುಪ್ಪ ಜೆಸ್ಕಾಂ ಕಚೇರಿ ಗ್ರಾಹಕರಿಗೆ ಕರೆಂಟ್ ಬಿಲ್ ಶಾಕ್!

  ಸಿರಗುಪ್ಪ(ಬಳ್ಳಾರಿ): ಕರೆಂಟ್ ಶಾಕ್ ಹೊಡೆಯು ವುದು ಎಲ್ಲರಿಗೂ ಗೊತ್ತು. ಆದರೆ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಜೆಸ್ಕಾಂ ಕಚೇರಿ ಗ್ರಾಹಕರಿಗೆ ಈ ತಿಂಗಳ ಕರೆಂಟ್ ಬಿಲ್ ಕೂಡ ಶಾಕ್ ಕೊಟ್ಟಿದೆ.

  ಮಾಸಿಕ 500 ರಿಂದ 600 ರೂ. ಬರುತ್ತಿದ್ದ ಕರೆಂಟ್ ಬಿಲ್ ಈ ಬಾರಿ 4.5 ಲಕ್ಷ ರೂ.ನಿಂದ 5.78 ಲಕ್ಷ ರೂ.ವರೆಗೆ ಬಂದಿದ್ದು, ಗ್ರಾಹಕರನ್ನು ಅಚ್ಚರಿ ಜತೆಗೆ ಆಘಾತಕ್ಕೀಡುಮಾಡಿತ್ತು. 30 ಗ್ರಾಹಕರಿಗೆ ಇದೇ ರೀತಿಯಲ್ಲಿ ಬಿಲ್ ಬಂದಿದ್ದರಿಂದ ಜನ ಗಾಬರಿಯಾಗಿದ್ದರು. ಆದರೆ ಬಿಲ್ಲಿಂಗ್ ಮಷಿನ್​ನಲ್ಲಿನ ತಾಂತ್ರಿಕ ದೋಷದಿಂದ ಎಡವಟ್ಟಾಗಿದೆ ಎಂದು ಗೊತ್ತಾದ ಮೇಲೆ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

  ಹೊಸ ಬಿಲ್ಲಿಂಗ್ ಮಷಿನ್​ನ ತಾಂತ್ರಿಕ ದೋಷಗಳಿಂದಾಗಿ ತಪ್ಪಾಗಿದೆ. ಅದನ್ನು ಈಗಾಗಲೆ ಸರಿಪಡಿಸಿ ಗ್ರಾಹಕರಿಗೆ ಬೇರೆ ಬಿಲ್ ಕೊಟ್ಟಿದ್ದೇವೆ.

  | ಶ್ರೀನಿವಾಸ ಜೆಸ್ಕಾಂ ಎಇಇ, ಸಿರಗುಪ್ಪ

  ಪ್ರತಿ ತಿಂಗಳು 500 ರಿಂದ 600 ರೂ.ವರೆಗೆ ಬಿಲ್ ಬರು ತ್ತಿತ್ತು. ಈ ತಿಂಗಳು ಲಕ್ಷಾಂತರ ರೂ. ಬಿಲ್ ಬಂದಿದೆ. ಇದನ್ನು ನೋಡಿ ಶಾಕ್ ಆಗಿತ್ತು. ಇಲಾಖೆ ಅಧಿಕಾರಿಗಳನ್ನು ಸಂರ್ಪಸಿದೆ. ಅವರು ಸರಿಪಡಿಸಿಕೊಟ್ಟಿದ್ದಾರೆ.

  | ರಾಜೇಶ ಗ್ರಾಹಕ, ಸಿರಗುಪ್ಪ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts