ಬಸವನಹಳ್ಳಿಯ ಬಸವನಹಳ್ಳಿ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇಗುಲದಲ್ಲಿ ರಾಮೋತ್ಸವ ಸಂಪನ್ನ

ಚಿಕ್ಕಮಗಳೂರು: ಕಳೆದ 9 ದಿನಗಳಿಂದ ಬಸವನಹಳ್ಳಿ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯದಲ್ಲಿ ನಡೆದ ರಾಮೋತ್ಸವ ಶನಿವಾರ ಅಲಂಕಾರ, ವಿಶೇಷ ಪೂಜೆ ಮತ್ತಿತರ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ಮೊದಲ ದಿನ ರಾಮನವಮಿಯಂದು ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಪೂಜೆ ಹಾಗೂ ಧಾರ್ವಿುಕ ವಿಧಿ ವಿಧಾನಗಳು ನೆರವೇರಿದವು. ಬಳಿಕ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ ಆಯೋಜನೆಗೊಂಡಿತ್ತು. ನಿತ್ಯ ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು. ಬೆಳಗ್ಗೆ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯದಲ್ಲಿ ಮೂರ್ತಿಗಳಿಗೆ ಪಟ್ಟಾಭಿಷೇಕ, ವಿಶೇಷ ಅಲಂಕಾರ, ಭಜನೆ, ಮಹಾಮಂಗಳಾರತಿ ನಡೆಯಿತು.

ಮಧ್ಯಾಹ್ನ ಭಕ್ತರಿಗೆ ಅನ್ನದಾನ ನೆರವೇರಿಸಲಾಯಿತು. ಸಂಜೆ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪಾಲಂಕಾರದೊಂದಿಗೆ ರಾಜಬೀದಿ ಉತ್ಸವ ನಡೆಸಲಾಯಿತು.

ಕಳೆದ ಐದಾರು ದಶಕಗಳಿಂದ ನಮ್ಮ ಅಜ್ಜ-ಅಜ್ಜಿ ಸಾಂಪ್ರದಾಯಿಕವಾಗಿ ಈ ರಾಮನವಮಿ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ದು, ಇಂದಿಗೂ ಈ ಪರಂಪರೆ ಮುಂದುವರಿದಿದೆ. ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ರಾಮೋತ್ಸವವು ರಾಜಬೀದಿ ಉತ್ಸವದೊಂದಿಗೆ ಮುಕ್ತಾಯಗೊಂಡಿದೆ.

ಶ್ರೀದೇವಿ, ಭೂದೇವಿಯೊಂದಿಗೆ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿಯ ವಿಶೇಷ ಪೂಜೆ ನಡೆಯಿತು. ಕುಂಬಾರ ಬೀದಿ, ಬಸವನಹಳ್ಳಿ, ಅರವಿಂದನಗರ, ಹಾಸನ, ಬೆಂಗಳೂರು ಮತ್ತಿತರ ಭಾಗಗಳಿಂದ ಭಕ್ತರು ಆಗಮಿಸಿದ್ದರು. ವೆಂಕಟ ಶೆಟ್ಟಿ, ರಾಮ ಶೆಟ್ಟಿ, ಕುಮಾರ್, ಶ್ರೀನಿವಾಸ್, ಶೇಖರ್, ಏಕಾಂತರಾಮು, ಚೇತನ್, ದಿನೇಶ್, ಲೋಕೇಶ್, ಟೌನ್ ಕೋಆಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಕಾರ್ಯಕ್ರಮದಲ್ಲಿದ್ದರು.