ತೆಲಸಂಗ: ಸಾಂಸ್ಕೃತಿಕ, ಎನ್‌ಎಸ್‌ಎಸ್ ಕಾರ್ಯಕ್ರಮ

ತೆಲಸಂಗ: ಅಂಕ ಗಳಿಕೆ ಹೊರತುಪಡಿಸಿ ಜ್ಞಾನಕ್ಕಾಗಿ ಕಲಿಯದಿರುವುದು ಭಯಾನಕ ಬೆಳವಣಿಗೆ ಎಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಉದಯಕುಮಾರ ಕುಲಕರ್ಣಿ ಹೇಳಿದ್ದಾರೆ.

ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಡ್ಸ್ ಮತ್ತು ಗೈಟ್ಸ್, ಯುವ ರೆಡ್‌ಕ್ರಾಸ್ ಘಟಕ, ಐಕ್ಯುಎಸಿ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಪ್ರಾಂಶುಪಾಲ ಡಾ.ಉದಯಕುಮಾರ ದೊಡ್ಡಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎಸ್.ಎಂ.ದಂಡ್ಯಾಗೋಳ, ಸಾಂಸ್ಕೃತಿಕ ವೇದಿಕೆ ಕಾರ್ಯಾಧ್ಯಕ್ಷ ಪ್ರೊ.ವಿಲಾಸ ಕಾಂಬಳೆ, ಗೋದಾವರಿ ಪಾಟೀಲ, ಹನುಮಂತರಾಯ ಹರವಾಳ, ಶಿವಾನಂದ ಹಾಲೊಳ್ಳಿ, ರಾಜಕುಮಾರ ಹುದ್ದಾರ, ಡಾ.ಜ್ಯೋತಿ ಕೆ., ಸುವರ್ಣಾ ಇಂಗಳೇಶ್ವರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *