ಹಸಿರೆಲೆ ಗೊಬ್ಬರಕ್ಕಾಗಿ ಸೆಣಬು ಕೃಷಿ

ಹಾನಗಲ್ಲ: ಭತ್ತ ನಾಟಿ ಕೈಗೊಳ್ಳುವ ಜಮೀನು ಹಾಗೂ ಅಡಕೆ ತೋಟದಲ್ಲಿ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ತಾಲೂಕಿನ ರೈತರು ಸೆಣಬು ಬೆಳೆಯುತ್ತಿದ್ದು, ಹಸಿರೆಲೆ ಗೊಬ್ಬರ ಪದ್ಧತಿ ಅನುಸರಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ರಾಸಾಯನಿಕ ಗೊಬ್ಬರ ಹಾಗೂ ಕೀಟ, ಕಳೆನಾಶಕಗಳ ವಿಪರೀತ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿ ಬೆಳೆಯ ಇಳುವರಿಯೂ ಕುಂಠಿತವಾಗುತ್ತಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಭೂಮಿಗೆ ತೇವಾಂಶ ದೀರ್ಘಕಾಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ. ಮಣ್ಣಿನ ಫಲವತ್ತತೆಗೆ ಹಾಗೂ ತೇವಾಂಶ ಹಿಡಿದಿಡಲು ಕೃಷಿ ಇಲಾಖೆಯ ಸಲಹೆಯಂತೆ ತಾಲೂಕಿನ ಹಲವು ರೈತರು ಸೆಣಬನ್ನು ಭತ್ತ ಹಾಗೂ ಅಡಕೆ ಬೆಳೆಗೆ ಹಸಿರೆಲೆ ಗೊಬ್ಬರವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ.

ಮುಂಗಾರು ಹಂಗಾಮಿಗಿಂತ ಮೊದಲು ಎಕರೆಗೆ 25 ಕೆಜಿ ಸೆಣಬಿನ ಬೀಜ ಬಿತ್ತನೆ ಮಾಡುತ್ತಾರೆ. 30-40 ದಿನಗಳ ನಂತರ ಜಮೀನುಗಳಲ್ಲಿ ಟ್ರ್ಯಾಕ್ಟರ್ ರೋಟವೇಟರ್ ಯಂತ್ರದ ಮೂಲಕ ಸೆಣಬು ಬೆಳೆ ಕತ್ತರಿಸಿ ಹಾಕಲಾಗುತ್ತದೆ. ಅದು ಕೊಳೆತ ನಂತರ ಭತ್ತ ನಾಟಿ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ರೈತರು ಹಸಿರೆಲೆ ಗೊಬ್ಬರಗಳತ್ತ ಮುಖ ಮಾಡಿರುವುದು ಕೃಷಿ ವಲಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದಂತಾಗಿದೆ.

ಹಸಿರೆಲೆ ಗೊಬ್ಬರದಿಂದ ಭಾರಿ ಪ್ರಯೋಜನ: ಕಡಿಮೆ ಅವಧಿಯಲ್ಲಿ ವೇಗವಾಗಿ ಬೆಳೆಯುವ ಸೆಣಬು ದ್ವಿದಳ ಜಾತಿಗೆ ಸೇರಿದೆ. ಇದು ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಿಸಿ ಫಲವತ್ತತೆ ಹೆಚ್ಚಿಸುತ್ತದೆ. ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಿಸಲು, ಮಣ್ಣಿನ ಫಲವತ್ತತೆ, ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮ ಸುಧಾರಿಸಿ ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗಿದೆ. ಮಣ್ಣಿನಲ್ಲಿ ಲಭ್ಯವಾ ಗದಿರುವ ಪ್ರಧಾನ ಮತ್ತು ಲಘು ಪೋಷಕಾಂಶಗಳನ್ನು ಹಸಿರೆಲೆ ಗೊಬ್ಬರ ಬೆಳೆ ಹೀರಿಕೊಂಡು ಮರಳಿ ಮಣ್ಣಿಗೆ ಸೇರಿಸುತ್ತದೆ. ಸೆಣಬನ್ನು ಹಸಿರು ಗೊಬ್ಬರವನ್ನಾಗಿ ಮಣ್ಣಿನಲ್ಲಿ ಸೇರಿಸುವುದರಿಂದ ಉಪಕಾರಿ ಜೀವಾಣುಗಳು ವೃದ್ಧಿಯಾಗಿ ಜೈವಿಕ ಕ್ರಿಯೆ ತ್ವರಿತಗೊಳಿಸುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಹಸಿರೆಲೆ ಗೊಬ್ಬರ ಬಳಸುವುದರಿಂದ ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಬಹುದು. ಇದರಿಂದ ಮಣ್ಣಿನ ಆರೋಗ್ಯ, ಫಲವತ್ತತೆ ಹಾಗೂ ಉತ್ಪಾದನಾ ಸಾಮರ್ಥ್ಯ ವೃದ್ಧಿಗೊಳ್ಳುವಲ್ಲಿ ಸಹಕಾರಿಯಾಗಲಿದೆ.

| ಸಂಗಮೇಶ ಹಕ್ಲಪ್ಪನವರ, ಕೃಷಿ ಅಧಿಕಾರಿ ಹಾನಗಲ್ಲ

ಭೂಮಿಯ ಸತ್ವ ಹೆಚ್ಚಿಸಲು ಸೆಣಬನ್ನು ಹಸಿರೆಲೆ ಗೊಬ್ಬರವಾಗಿ ಅಡಕೆ ತೋಟ ಹಾಗೂ ಭತ್ತದ ಜಮೀನಲ್ಲಿ ಬೆಳೆಸುತ್ತಿದ್ದೇವೆ. ಹಸಿರೆಲೆ ಗೊಬ್ಬರದ ಬೀಜಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ್ದರಿಂದ ಕೃಷಿ ಇಲಾಖೆ ಶೇ. 50ರ ಸಹಾಯಧನದಲ್ಲಿ ವಿತರಿಸುತ್ತಿರುವುದು ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಈ ಬಾರಿ ರಾಸಾಯನಿಕ ಗೊಬ್ಬರದ ಖರ್ಚು ಕಡಿಮೆಯಾಗುವ ಭರವಸೆಯಿದೆ.

| ಮರಿಗೌಡ ಪಾಟೀಲ, ಚೀರನಹಳ್ಳಿ ರೈತ

Share This Article

ಕರಗಿದ ಮೇಣದಬತ್ತಿಯಿಂದ ಏನೆಲ್ಲಾ ಉಪಯೋಗ; ಬಿಸಾಡುವ ಬದಲು ಮರುಬಳಕೆ ಮಾಡಿ..

ಮನೆಯಲ್ಲಿ ಉಪಯೋಗಿಸುವ ಎಷ್ಟೋ ವಸ್ತುಗಳು ಕೆಲಕಾಲದ ನಂತರ ಹಳೆಯದಾಗುತ್ತದೆ. ಮತ್ತೆ ಕೆಲವು ಬಳಸಿದ ನಂತರ ನಾಶವಾಗುತ್ತದೆ.…

ಈರುಳ್ಳಿ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡಬೇಡಿ! ಸಿಪ್ಪೆ ವೇಸ್ಟ್​ ಎಂದು ಬಿಸಾಡೋ ಬದಲು ಹೀಗೆ ಮಾಡಿ

ಯಾವುದೇ ಅಡುಗೆ ಮಾಡಿದ್ರು ಈರುಳ್ಳಿ ಬೇಕೆ... ಬೇಕು. ಈರುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ…

ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…