ವಿದ್ಯಾರ್ಥಿಗಳಲ್ಲಿ ಓದುವ ಗೀಳು ಬೆಳೆಸಿ

blank

ಹುಣಸೂರು: ಮಕ್ಕಳಲ್ಲಿ ಓದುವ ಗೀಳು ಹೆಚ್ಚಿಸುವತ್ತ ಶಿಕ್ಷಕರು ಗಮನಹರಿಸಬೇಕೆಂದು ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ(ಸಿಟಿಇ)ದ ಸಹನಿರ್ದೇಶಕಿ ಗೀತಾಂಬ ಸಲಹೆ ನೀಡಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಮಕ್ಕಳ ಸಾಹಿತ್ಯ ಸಂಭ್ರಮ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಹಿಂದೆ ಸಾಹಿತ್ಯ ಎಂದರೆ ಓದುವುದು ಎಂದಾಗಿತ್ತು. ಆದರೆ ಇಂದು ಸಾಹಿತ್ಯ ಎಂದರೆ ಮೊಬೈಲ್ ಆಗಿದೆ. ಗ್ರಂಥಾಲಯ ಎಂದರೆ ಮೊಬೈಲ್ ಆಗಿದೆ. ಮೊಬೈಲ್ ಬಳಕೆಯಿಂದ ಕಣ್ಣು ಹಾನಿಯಾಗುತ್ತದೆ ಎಂದು ತಿಳಿದಿದ್ದರೂ ಅವಶ್ಯಕತೆಗೂ ಮೀರಿದ ಬಳಕೆ ಆಗುತ್ತಿದೆ. ಇದು ಮಕ್ಕಳಿಂದ ಮಾತ್ರವಲ್ಲ, ದೊಡ್ಡವರಿಂದಲೂ ಆಗುತ್ತಿದೆ. ಮಕ್ಕಳನ್ನು ಓದುವ ಅಭಿರುಚಿ ಬೆಳೆಸಬೇಕಾದ ಶಿಕ್ಷಕರೂ ಓದುವ ಹವ್ಯಾಸದಿಂದ ದೂರವುಳಿದರೆ ಭವಿಷ್ಯ ಕತ್ತಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸ್ವಾತಂತ್ರ್ಯಪೂರ್ವದ ಶಿಕ್ಷಣ, ಬದುಕು ಬವಣೆ ತಿಳಿದುಕೊಳ್ಳಲು ನೀವು ಅಂದಿನ ಸಾಹಿತ್ಯದ ಪುಸ್ತಕಗಳನ್ನೇ ಅವಲಂಬಿಸಬೇಕು. ಬಾನುಲಿ ಕಾರ್ಯಕ್ರಮಗಳು ಸಾಹಿತ್ಯಾಸಕ್ತಿಯನ್ನು ಇಂದಿಗೂ ಬೆಳೆಸುವತ್ತ ಗಮನಹರಿಸಿವೆ. ಆದರೆ ಓದುವ ಮತ್ತು ಬಾನುಲಿ ಕಾರ್ಯಕ್ರಮಗಳನ್ನು ಕೇಳುವವರ ಸಂಖ್ಯೆಯೇ ಇಳಿಮುಖವಾಗಿದೆ. ಮಕ್ಕಳ ಸಾಹಿತ್ಯ ಭವಿಷ್ಯದ ಭಾಷಾ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಬಲ್ಲದು. ಹಾಗಾಗಿ ಮೊದಲು ಶಿಕ್ಷಕರು ಸಾಹಿತ್ಯಾಸಕ್ತರಾಗಿ ಅಧ್ಯಯನಶೀಲರಾಗಿ ಬದಲಾಗಬೇಕು.. ಆಗ ನಿಮ್ಮ ವಿದ್ಯಾರ್ಥಿಗಳಿಗೆ ನೀವು ಸಾಹಿತ್ಯದ ಅಭಿರುಚಿ ಬೆಳೆಸಲು ಸಾಧ್ಯವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ಮಾತನಾಡಿ, ಭಾಷಾ ಶಿಕ್ಷಕರು ಭಾಷಾ ಪಂಡಿತರಾಗಬೇಕು. ಇತ್ತೀಚೆಗೆ ನಮ್ಮನ್ನು ಅಗಲಿದ ಮಕ್ಕಳ ಸಾಹಿತಿ ನಾ.ಡಿಸೋಜ ಅವರಂತಹ ಸಾಹಿತಿ ಮತ್ತೆ ಹುಟ್ಟಲು ಈಗಿಂದಲೇ ಮಕ್ಕಳ ಸಾಹಿತ್ಯ ಗಟ್ಟಿಮುಟ್ಟಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಸೃಜನಶೀಲತೆ ಮತ್ತು ಕ್ರಿಯಾಶೀಲತೆಯೊಂದಿಗೆ ಸಾಹಿತ್ಯವನ್ನು ಕಟ್ಟಿಬೆಳೆಸುವವತ್ತ ಮುಂದಡಿಯಿಡಲಿ ಎಂದರು.

ಡಯಟ್‌ನ ಪ್ರಾಂಶುಪಾಲ ಸಿ.ಆರ್.ನಾಗರಾಜಯ್ಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಕೆ. ಮಹದೇವ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತಾ, ಮಕ್ಕಳ ಸಾಹಿತಿ ಡಾ.ಮಾದುಪ್ರಸಾದ್, ಜಯಪ್ಪ, ಕುಮಾರ್ ಹೊನ್ನೇನಹಳ್ಳಿ, ಕುಮಾರಸ್ವಾಮಿ, ಶಶಿಧರ್, ಬಿಐಇಆರ್‌ಟಿ ತ್ರಿನೇಶ್, ಪ್ರಭಾಕರ್ ಸೇರಿದಂತೆ ಜಿಲ್ಲಾ ವ್ಯಾಪ್ತಿಯ 9 ಬ್ಲಾಕ್‌ಗಳಿಂದ 300ಕ್ಕೂ ಹೆಚ್ಚು ಪ್ರೌಢಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಚಾರಗೋಷ್ಠಿಯ ವಿಷಯ:ಪ್ರೌಢಶಾಲಾ ಹಂತದಲ್ಲಿ ಮಕ್ಕಳ ಸಾಹಿತ್ಯ, ಪ್ರೌಢಶಾಲೆಗಳಲ್ಲಿ ಭಾಷಾ ಸಂಘ, ಮಕ್ಕಳ ಸಾಹಿತ್ಯ ಆಧುನಿಕ ಪರಿಕಲ್ಪನೆಗಳು ಮತ್ತು ತರಗತಿಯಲ್ಲಿ ಕಥಾ ಮತ್ತು ಕಾವ್ಯ ಪ್ರಸ್ತುತಿ ಕುರಿತಾಗಿ ತಜ್ಞರು ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ ಉದ್ಘಾಟಿಸಿದರು. ಗೀತಾಂಬ, ಸಿ.ಆರ್.ನಾಗರಾಜಯ್ಯ, ಸುರೇಶ್, ಡಾ.ಮಾದುಪ್ರಸಾದ್ ಇತರರಿದ್ದರು.

 

 

 

Share This Article

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…