ಹನಗೋಡು ಅಣೆಕಟ್ಟೆ ಹಿನ್ನೀರಿನಲ್ಲಿ ಮುಳುಗಿದ ಬೆಳೆಗಳು

ಹನಗೋಡು: ಕಳೆದ ಒಂದು ವಾರದಿಂದ ಕೊಡಗಿನ ಇರ್ಪು ಭಾಗ ಸೇರಿದಂತೆ ಹನಗೋಡು ಭಾಗದಲ್ಲಿ ಜಡಿಮಳೆ ಹಿಡಿದಿದ್ದು, ಲಕ್ಷ್ಮಣತೀರ್ಥ ನದಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರವಾಹ ಹೆಚ್ಚುತ್ತಲೇ ಇದ್ದು, ನದಿ ಪಾತ್ರದ ಜಮೀನು ಹಾಗೂ ಹನಗೋಡು ಅಣೆಕಟ್ಟೆ ಹಿನ್ನೀರಿನಲ್ಲಿ ಸಾಕಷ್ಟು ಬೆಳೆಗಳು ಮುಳುಗಿ ರೈತರನ್ನು ಆತಂಕಕ್ಕೀಡು ಮಾಡಿದೆ.

ಬೆಳೆಗಳಿಗೆ ನುಗ್ಗಿದ ನೀರು: ಲಕ್ಷ್ಮಣತೀರ್ಥ ನದಿಯಲ್ಲಿ ಪ್ರವಾಹ ಹೆಚ್ಚುತ್ತಲೇ ಇದ್ದು, ಹನಗೋಡು ಹೋಬಳಿಯ ಹತ್ತಾರು ಹಳ್ಳಿಗಳಲ್ಲಿ ನದಿಯ ಹಿನ್ನೀರಿನಿಂದ ಹಲವಾರು ಬೆಳೆ ಬೆಳೆದಿದ್ದ ಪ್ರದೇಶಗಳಿಗೆ ನೀರು ನುಗ್ಗಿದ್ದು, ಬಹುತೇಕ ಶುಂಠಿ ಬೆಳೆ ನೀರಿನಲ್ಲಿ ಮುಳುಗಿ, ಕೊಳೆಯುವ ಭೀತಿ ಉಂಟಾಗಿದೆ. ತಂಬಾಕು ಬೆಳೆ ನಿಂತ ನೀರಿನಿಂದ ಒಮ್ಮೆಲೆ ಎಲೆಗಳೆಲ್ಲ ಹಣ್ಣಾಗಿವೆ. ಮಳೆ ಹೀಗೆ ಮುಂದುವರಿದಲ್ಲಿ ನದಿಯಲ್ಲಿ ಪ್ರವಾಹ ಹೆಚ್ಚಾಗಿ ಹನಗೋಡು ಅಣೆಕಟ್ಟೆ ಹಿನ್ನೀರು ಬೆಳೆಗಳನ್ನು ಆವರಿಸಲಿದೆ.

ಮನೆಗಳಿಗೆ ಹಾನಿ: ನಿರಂತರ ಮಳೆಯಿಂದಾಗಿ ಕಿರಂಗೂರಿನ ಕುಳ್ಳೇಗೌಡರ ವಾಸದ ಮನೆ, ನೇರಳಕುಪ್ಪೆಯ ಬಿ.ಹಾಡಿಯ ಶಾರದಾ ಅವರಿಗೆ ಸೇರಿದ ಮನೆ ಗೋಡೆೆ ಕುಸಿದಿದೆ. ಹಾಡಿಯ ಕೆಂಪಮ್ಮ ಅವರ ಮನೆ ಪಕ್ಕದಲ್ಲಿದ್ದ ದೊಡ್ಡ ಆಲದ ಮರ ಬುಡಸಮೇತ ಉರುಳಿ ಬಿದ್ದಿದೆ. ಮರದ ರೆಂಬೆ-ಕೊಂಬೆಗಳು ಕೆಂಪಮ್ಮ ಅವರ ಮನೆ ಮೇಲೆ ಬಿದ್ದು ಭಾಗಶಃ ಹಾನಿಯಾಗಿದೆ.

ಬೆಳೆಗಳು ಜಲಾವೃತ: ಹನಗೋಡು ಹೋಬಳಿಯ ಕೋಣನಹೊಸಹಳ್ಳಿ ಸ್ವಾಮಿನಾಯಕ, ಕಚುವಿನಹಳ್ಳಿಯ ಲೊಕೇಶ್, ಕೆ.ಟಿ.ಮಂಜುನಾಥ್, ಬಿಲ್ಲೇನಹೊಸಹಳ್ಳಿಯ ಸ್ವಾಮಿಗೌಡ, ಮಹದೇವಮ್ಮ, ಜಾನ್ಸನ್, ಸಹದೇವ್, ನೇರಳಕುಪ್ಪೆಯ ಮನುಕುಮಾರ್ ಮಾದೇಗೌಡ, ಹರಳಳ್ಳಿಯ ಶಿವು ಸೇರಿದಂತೆ ಹಲವು ರೈತರ ಶುಂಠಿ ಬೆಳೆ ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಹಾನಿಯಾಗಿದೆ. ಇದಲ್ಲದೆ ಬಿಲ್ಲೇನಹೊಸಳ್ಳಿ ಕೆ.ಜಿ.ಹೆಬ್ಬಮಕುಪ್ಪೆ, ನೇಗತ್ತೂರು, ಸಿಂಡೇನಹಳ್ಳಿ, ಅಬ್ಬೂರು, ಹನಗೋಡು, ಕೊಳುವಿಗೆ, ಮುದಗನೂರು, ಚಿಕ್ಕೆಹೆಜ್ಜೂರು, ದೊಡ್ಡಹೆಜ್ಜೂರು, ದಾಸನಪುರ, ಹಿಂಡಗುಡ್ಲು, ಕಿರಂಗೂರು ಹರಳಳ್ಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ಮಳೆ ಹಾಗೂ ನದಿ ನೀರಿನಿಂದ ಬೆಳೆಗಳೆಲ್ಲ ಜಲಾವೃತಗೊಂಡಿವೆ. ಅಲ್ಲದೆ ಕೆಲ ರೈತರ ಮುಸುಕಿನಜೋಳ ಬೆಳೆ ಬರಿ ಗಾಳಿಯ ಹೊಡೆತಕ್ಕೆ ಸಿಲುಕಿ ನೆಲಸಮ ಮಲಗಿ ಪ್ರವಾಹದ ನೀರಿನಲ್ಲಿ ತೋಯ್ದು ಹೋಗಿವೆ.

ತಹಸೀಲ್ದಾರ್ ಭೇಟಿ: ಮಳೆಯಿಂದ ಹಾನಿಗೊಳಗಾಗಿರುವ ಹನಗೋಡು ಭಾಗದ ಗ್ರಾಮಗಳಿಗೆ ತಹಸೀಲ್ದಾರ್ ಜೆ.ಮಂಜುನಾಥ್ ಗುರುವಾರ ಭೆೇಟಿ ನೀಡಿ ಪರಿಶೀಲಿಸಿದರು. ಮನೆ ಹಾಗೂ ಬೆಳೆ ಹಾನಿಗೊಳಗಾದವರ ಬಗ್ಗೆ ವರದಿ ನೀಡಬೇಕೆಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…