ಬೆಳೆಗೆ ಬೆಂಬಲ ಬೆಲೆ ಸಿಗಬೇಕು

ವಿಜಯವಾಣಿ ಸುದ್ದಿಜಾಲ ಧಾರವಾಡ

‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು’ ಹಾಗೂ ‘ರೈತ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ’ ಎಂಬ ನಾಣ್ಣುಡಿ ಯೊಂದಿಗೆ ರೈತರು ಯಶಸ್ವಿಯಾಗಬೇಕಾದರೆ ಅವರಿಗೆ ವಿಜ್ಞಾನ, ತಂತ್ರಜ್ಞಾನದ ತಳಹದಿ ಬೇಕು. ಅದಕ್ಕೆ ವಿಜ್ಞಾನಿಗಳ ಸಹಕಾರ ಅಗತ್ಯ ಎಂದು ಕೃಷಿ ವಿವಿ ಆಡಳಿತ ಮಂಡಳಿಯ ಸದಸ್ಯ ಈಶ್ವರಚಂದ್ರ ಹೊಸಮನಿ ಹೇಳಿದರು.

ಚೌಧರಿ ಚರಣಸಿಂಗ್ ಜನ್ಮ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ, ಜಿಲ್ಲಾ ಕೃಷಿಕ ಸಮಾಜ ಆಶ್ರಯದಲ್ಲಿ ನಗರದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದಿಟಛಿ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನ ಆಚರಣೆಯಲ್ಲಿ ಅವರು ಮಾತನಾಡಿದರು. ಉತ್ತಮ ಸಂಶೋಧನೆ ಮೂಲಕ ಕೃಷಿ ವಿಜ್ಞಾನಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಜತೆಗೆ ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕು ಎಂದರು.

ಕುಲಪತಿ ಡಾ. ಎಂ.ಬಿ. ಚೆಟ್ಟಿ ಅವರು, ಇಸ್ರೇಲ್ ಮಾದರಿಯ ಕೃಷಿ ಪದಟಛಿತಿ, ಶೂನ್ಯ ಬಂಡವಾಳ ಕೃಷಿ, ಕೃಷಿ ಉತ್ಪನ್ನಗಳ ಮಾರುಕಟ್ಟೆ, ಬೆಳೆ ವಿಮೆ ಹಾಗೂ ಕೃಷಿಯಲ್ಲಿ ಉದ್ಯಮಶೀಲತೆಯ ಅಭಿವೃದಿಟಛಿ ಕುರಿತು ಮಾತನಾಡಿದರು.

ವಿವಿ ವಿವಿಧ ವಿಭಾಗಗಳ ಡಿಪ್ಲೊಮಾ (ಕೃಷಿ) ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ವಿಸ್ತರಣಾ ನಿರ್ದೇಶಕ ಡಾ. ಆರ್.ಆರ್. ಪಾಟೀಲ, ಡಾ. ಎಂ.ಎನ್. ಶ್ರೀನಿವಾಸ, ಡಾ. ಎಸ್. ಟಿ. ಕಜ್ಜಿಡೋಣಿ, ಎಸ್.ಎಂ. ಹೊನ್ನಳ್ಳಿ, ಆರ್. ಸ್ಮಿತಾ, ಸಿ.ಜಿ. ಮೇತ್ರಿ, ಬಸವರಾಜ ಕುಂದಗೋಳ, ಡಾ. ಬಿ.ಬಿ. ಚನ್ನಪ್ಪಗೌಡರ, ಡಾ. ಡಿ.ಐ. ಜಿರಲಿ ಉಪಸ್ಥಿತರಿದ್ದರು.