More

    ಮುಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ

    ಹುಬ್ಬಳ್ಳಿ : ಪ್ರಸಕ್ತ 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇದರಿಂದಾಗಿ ರೈತರು ತಾವು ಬೆಳೆದ ಬೆಳೆಗಳನ್ನು ಅತ್ಯುತ್ತಮ ಬೆಲೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿದಂತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಿಳಿಸಿದ್ದಾರೆ.

    ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್​ಗೆ ಗುಣಮಟ್ಟದ ಭತ್ತಕ್ಕೆ 2,183 ರೂ.ಗೆ, ಜೋಳಕ್ಕೆ 3,180 ರೂ.ಗೆ, ರಾಗಿಗೆ 3,846 ರೂ.ಗೆ, ಗೋವಿನ ಜೋಳಕ್ಕೆ 2,090 ರೂ., ತೊಗರಿಗೆ 7,000 ರೂ., ಹೆಸರುಕಾಳುಗೆ 8,558 ರೂ., ಉದ್ದಿಗೆ 6,950 ರೂ., ಶೇಂಗಾಕ್ಕೆ 6,377 ರೂ., ಸೂರ್ಯಕಾಂತಿಗೆ 6,760 ರೂ., ಸೋಯಾಬಿನ್​ಗೆ 4,600 ರೂ., ಸಜ್ಜೆಗೆ 2,500 ರೂ. ನಿಗದಿಪಡಿಸಲಾಗಿದೆ,

    ಎಳ್ಳುಗೆ 8,635 ರೂ. ಹುಚ್ಚೆಳ್ಳುಗೆ 7,734 ರೂ., ಹತ್ತಿ (ಮಧ್ಯಮ)ಗೆ 6,620 ರೂ., ಹತ್ತಿ (ಉತ್ತಮ)ಗೆ 7,020 ರೂ. ನಿಗದಿಪಡಿಸಲಾಗಿದೆ.

    ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ರೈತರಿಂದ ಹಿಂಗಾರು ಬೆಳೆಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಮಹತ್ವದ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಅವರಿಗೆ ಸಚಿವ ಪ್ರಲ್ಹಾದ ಜೋಶಿ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts