ಕಲಬುರಗಿ : ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದ ಹಾನಿಗೊಳಗಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಪೈಕಿ ಪರಿಹಾರ ತಂತ್ರಾಂಶದ ಮೂಲಕ ನಮೂದಿಸಿದ ರೈತರಿಗೆ ಎನ್.ಡಿ.ಆರ್.ಎಫ್/ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ಮೊದಲನೇ ಹಂತದಲ್ಲಿ 33,718 ರೈತ ಫಲಾನುಭವಿಗಳಿಗೆ 13.02 ಕೋಟಿ ರೂ. ಇನ್ಪುಟ್ ಸಬ್ಸಿಡಿ ಬಿಡುಗಡೆಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅನುಮೋದನೆ ನೀಡಿದ್ದಾರೆ.
ಇನ್ ಪುಟ್ ಸಬ್ಸಿಡಿ ಹಣ ನೇರವಾಗಿ ಆಧಾರ ಸಂಖ್ಯೆಗೆ ಜೋಡಣೆ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಮುಂದಿನ 3-4 ದಿನದಲ್ಲಿ ಜಮೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.