More

    ಬೆಳೆ ವಿಮೆ ಮಾಡಿಸಲು ವ್ಯಾಪಕ ಪ್ರಚಾರ

    ಸಂಡೂರು: ಮಳೆಯಿಂದ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಚೋರನೂರು ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಮೆಕ್ಕೆಜೋಳ, ಜೋಳ, ತೊಗರಿ ಬಿತ್ತನೆ ಬೀಜಗಳ ಮಾರಾಟ ಜೋರಾಗಿದೆ.

    ಇದನ್ನು ಓದಿ: ಪಾವತಿಯಾಗದ ಬೆಳೆ ವಿಮೆ ಹಣ, ರೈತ ಸಂಪರ್ಕ ಕೇಂದ್ರದಲ್ಲಿ ದಿಢೀರ್ ಪ್ರತಿಭಟನೆ

    ಸಹಾಯಕ ಕೃಷಿ ನಿರ್ದೇಶಕ ರಮೇಶ ಮಾತನಾಡಿ, 34.66 ಟನ್ ಮೆಕ್ಕೆಜೋಳ ಬಿತ್ತನೆ ಬೀಜದಲ್ಲಿ 8 ಟನ್ ಮಾರಾಟವಾಗಿದೆ. 116 ಕ್ವಿಂಟಾಲ್ ಜೋಳದಲ್ಲಿ 2.6 ಕ್ವಿಂಟಾಲ್ ರೈತರು ಖರೀದಿಸಿದ್ದು, 65 ಕ್ವಿಂಟಾಲ್ ತೊಗರಿಯಲ್ಲಿ 9 ಕ್ವಿಂ. ಉಳಿದಿದೆ. ಮಳೆಯಾಶ್ರಿತ, ನೀರಾವರಿ ಬೆಳೆವಿಮೆ ಕುರಿತು ವ್ಯಾಪಕ ಪ್ರಚಾರ ಮಾಡಲಾಗಿದೆ.

    ತೊಗರಿ, ನವಣೆ, ನೆಲಗಡಲೆ (ಶೇಂಗಾ), ಸೂರ್ಯಕಾಂತಿ, ಸಜ್ಜೆ, ಜೋಳ, ಹತ್ತಿ, ಮೆಕ್ಕೆಜೋಳಗಳಿಗೆ ಬೆಳೆವಿಮೆ ಮಾಡಿಸಬಹುದು. ಕಳೆದ ಬಾರಿ ಮಳೆ ಅಭಾವದಿಂದ ಬಿತ್ತನೆಗೆ ಹಿನ್ನೆಡೆಯಾಗಿತ್ತು. ಆದರೆ ಈ ಬಾರಿ ಮಳೆ ಉತ್ತಮವಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಜೋಳ, ತೊಗರಿ ಬಿತ್ತನೆ ಮುಗಿಯುವ ಹಂತಕ್ಕೆಬಂದಿದೆ. ಮತ್ತೆ ಮಳೆ ಬಂದರೆ ರೈತರು ಮೆಕ್ಕೆಜೋಳ ಬಿತ್ತನೆ ಮಾಡಲಿದ್ದಾರೆ ಎಂದರು.


    See also  2023ರ ಆಸ್ಕರ್​ ನಾಮಿನೇಷನ್ ಪಟ್ಟಿ ಪ್ರಕಟ; ಆರ್​ಆರ್​ಆರ್​ ಸೇರಿ ಆಸ್ಕರ್​ಗೆ ಮೂರು ಭಾರತೀಯ ಸಿನಿಮಾಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts