ಸರ್ಕಾರದಿಂದಲೇ ಬೆಳೆ ವಿಮೆ

Latest News

ಪ್ರಧಾನಿ ಮೋದಿ ಭೇಟಿಯಾಗಲಿರುವ ಶರಾದ್​ ಪವಾರ್: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ನಡುವೆ ಕುತೂಹಲ ಮೂಡಿಸಿದ ನಾಯಕರ ಭೇಟಿ!

ನವದೆಹಲಿ: ಮಹಾರಾಷ್ಟ್ರದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಹಗ್ಗಜಗ್ಗಾಟದ ನಡುವೆಯೂ ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ನ್ಯಾಷನಲ್​ ಕಾಂಗ್ರೆಸ್​ ಪಾರ್ಟಿಯ ಮುಖ್ಯಸ್ಥ ಶರಾದ್​ ಪವಾರ್...

ಸಾಲ ಮರುಪಾವತಿಸದ ಮಹಿಳೆಯರ ಮನೆಗೆ ಬೀಗ ಜಡಿದ ಹಣಕಾಸು ಸಂಸ್ಥೆ: ಛಾವಣಿ ಏರಿ ಮನೆ ಪ್ರವೇಶಿಸುತ್ತಿರುವ ಮಹಿಳೆಯರು

ಮೈಸೂರು: ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಗ್ರಾಮಶಕ್ತಿ ಮೈಕ್ರೋ ಫೈನಾನ್ಸ್​ ಸಂಸ್ಥೆ ಇಬ್ಬರು ಬಡ ಮಹಿಳೆಯರ ಮನೆಗೆ ಬೀಗ ಜಡಿದಿದೆ. ಪಡೆದಿದ್ದ ಸಾಲದ ಎರಡು...

ಕುರಿಯ ಡಬಲ್ ಮರ್ಡರ್ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸಿದ ಪುತ್ತೂರು ಪೊಲೀಸರು

ಪುತ್ತೂರು: ಕುರಿಯ ಗ್ರಾಮದ ಅಜಲಾಡಿಯಲ್ಲಿ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದ ಜೋಡಿ ಕೊಲೆ ಕೃತ್ಯದ ಆರೋಪಿಯನ್ನು ಕೇವಲ 24 ಗಂಟೆಯಲ್ಲಿ ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ...

ಮಾಜಿ ಸಿಎಂ ಸಿದ್ದು ವಿರುದ್ಧ ಗುಡುಗಿದ ಸಿಎಂ ಬಿಎಸ್​ವೈ ಸಂಸದೆ ಸುಮಲತಾ ಬೆಂಬಲ ಕುರಿತು ಹೇಳಿದ್ದು ಹೀಗೆ…

ಬೆಂಗಳೂರು: ಉಪಚುನಾವಣೆಯ ಕದನ ದಿನೇ ದಿನೇ ಕುತೂಹಲ ಕೆರಳಿಸುತ್ತಿದೆ. ಹಾಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತಿನ ಚಾಟಿ...

ಶಾಸಕ ತನ್ವೀರ್​ ಸೇಠ್​ಗೆ ಭದ್ರತೆ ಹೆಚ್ಚಳ ಮಾಡಿದ ಸರ್ಕಾರ: 24 ತಾಸು 3 ಪಾಳಿಗಳಲ್ಲಿ ಗನ್​ಮ್ಯಾನ್​ ಭದ್ರತೆ

ಮೈಸೂರು: ತೀವ್ರ ಹಲ್ಲೆ ಹಿನ್ನೆಲೆಯಲ್ಲಿ ಶಾಸಕ ತನ್ವೀರ್​ ಸೇಠ್​ಗೆ ಒದಗಿಸಿದ್ದ ಭದ್ರತೆಯನ್ನು ಮೂರುಪಟ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದಿನದ 24 ತಾಸು...

| ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ಕೃಷಿ ಬೆಳೆ ವಿಮೆಯಲ್ಲಿ ರೈತರಿಗೆ ಮೋಸ ಮಾಡುತ್ತ ಲಾಭ ಮಾಡಿಕೊಳ್ಳುತ್ತಿರುವ ಖಾಸಗಿ ಸಂಸ್ಥೆಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪ್ರತಿ ವರ್ಷ ಉಂಟಾಗುವ ಗೊಂದಲಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ರೈತಸ್ನೇಹಿ ನಿರ್ಧಾರವನ್ನು ಹೊಸವರ್ಷದ ಕೊಡುಗೆಯಾಗಿ ನೀಡಲು ಮುಂದಾಗಿದೆ.

ಖಾಸಗಿ ವಿಮಾ ಸಂಸ್ಥೆಗಳು ಕೋಟ್ಯಂತರ ರೂ. ಕೊಡದೆ ವಂಚಿಸುತ್ತಿವೆ. ಆದ್ದರಿಂದ ಸರ್ಕಾರ ತನ್ನದೆ ಆದ ವಿಮಾ ಸಂಸ್ಥೆಯೊಂದನ್ನು ಹುಟ್ಟು ಹಾಕಲು ಆಲೋಚಿಸಿದೆ. ಈ ಮೊದಲು ಬಿಹಾರ ಮಾದರಿ ವಿಮಾ ಯೋಜನೆ ಜಾರಿಗೆ ಚರ್ಚೆ ನಡೆಸಿತ್ತು. ಈಗ ರಾಜ್ಯ ಸರ್ಕಾರಿ ನೌಕರರ ವಿಮಾ ಇಲಾಖೆ ಮಾದರಿಯಲ್ಲಿ ಪ್ರತ್ಯೇಕ ಸಂಸ್ಥೆ ಆರಂಭಿಸುವ ಬಗ್ಗೆ ಅಧ್ಯಯನ ನಡೆಸಲು ಮುಂದಾಗಿದೆ.

ಫಲಾನುಭವಿಗಳ ಸಂಖ್ಯೆ ಇಳಿಕೆ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಖಾಸಗಿ ವಿಮಾ ಸಂಸ್ಥೆಗಳು ನಿಯಮಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಂಡಿವೆ. ಇದರಿಂದ ಪ್ರೀಮಿಯಂ ಪಾವತಿಸಿರುವ ರೈತರಿಗೆ ವಿಮಾ ಮೊತ್ತ ಸಿಗುತ್ತಿಲ್ಲ. ಈ ವರ್ಷ ಮುಂಗಾರು ಹಂಗಾಮಿನಲ್ಲಿಯೇ ಖಾಸಗಿ ವಿಮಾ ಸಂಸ್ಥೆಗಳಿಗೆ ರಾಜ್ಯವೊಂದರಲ್ಲಿಯೇ 1,500 ಕೋಟಿ ರೂ.ಗಳಿಗೂ ಹೆಚ್ಚಿನ ಲಾಭವಾಗಿದೆ. ಅಂದಾಜಿನ ಪ್ರಕಾರ, ಕಳೆದ 4 ವರ್ಷಗಳಲ್ಲಿ ಖಾಸಗಿ ವಿಮಾ ಸಂಸ್ಥೆಗಳು ಮಾಡಿಕೊಂಡಿರುವ ಲಾಭ 10 ಸಾವಿರ ಕೋಟಿ ರೂ. ದಾಟುತ್ತದೆ! ರೈತರಿಗೆ ಕೆಲ ಪ್ರಕರಣಗಳಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಹಣ ಸಿಕ್ಕರೆ, ಅನೇಕ ಪ್ರಕರಣಗಳಲ್ಲಿ ಹಣವೇ ಸಿಗುತ್ತಿಲ್ಲ. ಇದರಿಂದಾಗಿ ಇಡೀ ದೇಶದಲ್ಲಿ ಫಸಲ್ ಬಿಮಾ ಯೋಜನೆ ಫಲಾನುಭವಿಗಳ ಸಂಖ್ಯೆಯಲ್ಲಿ ಕುಸಿತವಾಗುತ್ತಿದೆ. 2016-17ರಲ್ಲಿ 5.7 ಕೋಟಿ ಇದ್ದ ಫಲಾನುಭವಿಗಳ ಸಂಖ್ಯೆ 2017-18ರಲ್ಲಿ 4.9 ಕೋಟಿಗೆ ಇಳಿಕೆ ಕಂಡಿದೆ. ಶೇ.15 ಫಲಾನುಭವಿಗಳು ಕಡಿಮೆಯಾಗಿದ್ದಾರೆ.

ತರಳುಬಾಳು ಶ್ರೀ ಒತ್ತಾಯಿಸಿದ್ದರು: ಫಸಲ್ ಬಿಮಾ ಯೋಜನೆಯಲ್ಲಿ ಆಗುತ್ತಿರುವ ಮೋಸದ ಬಗ್ಗೆ ತರಳಬಾಳು ಶ್ರೀಗಳು ಬೆಂಗಳೂರಿನಲ್ಲಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು.

ಸರ್ಕಾರ ಏನು ಮಾಡುತ್ತದೆಯೋ ಗೊತ್ತಿಲ್ಲ? ಫಸಲ್ ಬಿಮಾದಿಂದ ಆಗುತ್ತಿರುವ ಮೋಸಕ್ಕೆ ಮುಕ್ತಿ ಕಾಣಿಸಬೇಕಾಗಿದೆ. ಬಿಹಾರ ಮಾದರಿಯಾದರೂ ಆಗಲಿ, ಪ್ರತ್ಯೇಕ ವಿಮಾ ಸಂಸ್ಥೆಯಾದರೂ ಆಗಲಿ, ರೈತರಿಗೆ ಅನುಕೂಲವಾಗಲಿ.

| ಮಾರುತಿ ಮಾನ್ಪಡೆ, ಅಧ್ಯಕ್ಷ, ಪ್ರಾಂತ ರೈತ ಸಂಘ

ಕಂಪನಿ ಹೇಗೆ

ರಾಜ್ಯದಲ್ಲಿಯೇ ರೈತರು ಕಟ್ಟುವ ಪ್ರೀಮಿಯಂ ಹಾಗೂ ಸರ್ಕಾರ ನೀಡುವ ಮ್ಯಾಚಿಂಗ್ ಹಣ ಪ್ರತಿ ವರ್ಷ 800ರಿಂದ 1,000 ಕೋಟಿ ರೂ. ಆಗುತ್ತದೆ. ಆನಂತರ ಕೇಂದ್ರ ಸರ್ಕಾರ ಸಹ ಅದರ ಪಾಲು ನೀಡುತ್ತದೆ. ಈ ಹಣದ ಜತೆಗೆ ಷೇರು ಬಿಡುಗಡೆ ಮಾಡಿ ಪ್ರತ್ಯೇಕ ಕಂಪನಿ ಮೂಲಕ ರೈತರಿಗೆ ಸಕಾಲದಲ್ಲಿ ವಿಮೆ ಹಣ ಯಾವುದೇ ಸಮಸ್ಯೆ ಇಲ್ಲದೇ ದೊರಕುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

ಬಿಹಾರದಲ್ಲೂ ಅಧ್ಯಯನ

ಬಿಹಾರ ಸರ್ಕಾರ ಕೇಂದ್ರದ ಫಸಲ್ ಬಿಮಾ ಯೋಜನೆ ಒಪ್ಪಿಕೊಂಡಿಲ್ಲ. ಅಲ್ಲಿ ತನ್ನದೇ ಪ್ರತ್ಯೇಕ ವಿಮಾ ನೀತಿ ಅಳವಡಿಸಿಕೊಂಡಿದೆ. ರೈತರ ಬೆಳೆ ಯಾವ ಪ್ರಮಾಣದಲ್ಲಿ ನಷ್ಟವಾಗಿರುವುದೋ ಅಷ್ಟು ಪ್ರಮಾಣದ ಹಣವನ್ನು ರೈತರ ಖಾತೆಗೆ ಜಮಾ ಮಾಡುವ ಪದ್ಧತಿ ಇದೆ. ಆ ಬಗ್ಗೆ ಅಧ್ಯಯನಕ್ಕೆ ತಂಡವೊಂದನ್ನು ಕಳುಹಿಸುವ ಬಗ್ಗೆಯೂ ಜ.3ರಂದು ನಿರ್ಧಾರ ಕೈಗೊಳ್ಳಲಾಗುತ್ತದೆ.

ಸಾವಿರ ಕೋಟಿ ರೂ. ಬಾಕಿ

2017-18ನೇ ಸಾಲಿಗೆ ಸಂಬಂಧಿಸಿದಂತೆ ವಿಮಾ ಮೊತ್ತ ಬಾಕಿ ಇರುವ ಬಗ್ಗೆ ರಾಜ್ಯ ಸರ್ಕಾರ ಕೇಂದ್ರದ ಜತೆ ಚರ್ಚೆಸಿದೆ. 300 ಕೋಟಿ ರೂ. ಭರಿಸಲು ಕೇಂದ್ರ ವಿಮಾ ಸಂಸ್ಥೆಗಳನ್ನು ಒಪ್ಪಿಸಿದೆ. ಇನ್ನೂ 1,000 ಕೋಟಿ ರೂ. ಬಾಕಿ ಇರುತ್ತದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

3ಕ್ಕೆ ಅಧಿಕಾರಿಗಳ ಸಭೆ

ಫಸಲ್ ಬಿಮಾ ಯೋಜನೆಯಲ್ಲಿರುವ ಲೋಪಗಳ ಹಿನ್ನೆಲೆಯಲ್ಲಿ ಪ್ರತ್ಯೇಕ ವಿಮಾ ನೀತಿ, ರಾಜ್ಯ ಸರ್ಕಾರ ಮಾಲೀಕತ್ವದ ಪ್ರತ್ಯೇಕ ವಿಮಾ ಸಂಸ್ಥೆ ರಚನೆ ಬಗ್ಗೆ ರ್ಚಚಿಸಲು ಜ.3ರಂದು ಅಧಿಕಾರಿಗಳ ಸಭೆ ಕರೆದಿದ್ದಾರೆ. ಆ ಸಭೆಗೆ ವಿಮಾ, ಕೃಷಿ ತಜ್ಞರನ್ನು ಆಹ್ವಾನಿಸಿದ್ದಾರೆ. ಸಭೆಯಲ್ಲಿ ಬಂದ ಅಭಿಪ್ರಾಯವನ್ನು ಸಂಪುಟದ ಮುಂದೆ ಮಂಡಿಸಿ ಮುಂದಿನ ಬಜೆಟ್​ನಲ್ಲಿ ಘೋಷಣೆ ಮಾಡುವ ಉದ್ದೇಶವಿದೆ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ಜೀವ ವಿಮೆ ಹಾಗೂ ವಾಹನ ವಿಮೆ ರೀತಿ ಪ್ರತಿ ಬೆಳೆಗಳಿಗೆ ಪ್ರತ್ಯೇಕ ವಿಮಾ ಪದ್ಧತಿ ಜಾರಿಗೆ ತಂದರೆ ಅನುಕೂಲವಾಗುತ್ತದೆ.

| ಸಚಿನ್ ಮಿಗಾ, ಅಧ್ಯಕ್ಷ, ಕೆಪಿಸಿಸಿ ಕಿಸಾನ್ ಸೆಲ್

- Advertisement -

Stay connected

278,614FansLike
572FollowersFollow
610,000SubscribersSubscribe

ವಿಡಿಯೋ ನ್ಯೂಸ್

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​ ಸೇಠ್​ ಹಲ್ಲೆ ಪ್ರಕರಣ: ಪೊಲೀಸ್​ ವಿಚಾರಣೆ...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಲಖನ್​, ಸತೀಶ್​ ನಾಮಪತ್ರ ಸಲ್ಲಿಕೆ;...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಬಳಸಿದ ಪರಿಸರಸ್ನೇಹಿ ಕಾರು...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​ ಪಿಸಿ ThinkPadX1: ಚೀನಾದಲ್ಲಿ ಲೆನೊವೊ ಟೆಕ್...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ ಬಿರ್ಲಾರ ಕೋಪಕ್ಕೆ ಕಾರಣವಾದ ರಾಣಿ ಮುಖರ್ಜಿ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇಗುಲದ ಗರ್ಭಗುಡಿ ಓಪನ್​: 2...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ ಲತಾ ಮಂಗೇಶ್ಕರ್​ ಆರೋಗ್ಯದ ವದಂತಿಗಳಿಗೆ ಕಿವಿಗೊಡಬೇಡಿ:...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...