ಹಾವೇರಿ: 2024-&25ನೇ ಸಾಲಿನ ಮಧ್ಯಂತರ ಬೆಳೆ ವಿಮೆಗೆ ರೈತ ಸಂ ಕರೆ ನೀಡಿದ ಹಿನ್ನೆಲೆ ಹಾವೇರಿ ಜಿಲ್ಲೆಯೊಂದರಲ್ಲೇ 82 ಸಾವಿರ ಅಜಿರ್ಗಳು ಸ್ವೀಕೃತಿಯಾಗಿದ್ದು, ರಾಜ್ಯಕ್ಕೆ ಮಾದರಿಯಾಗಿದೆ. ಕಳೆದ ವಾರ ಅಹೋರಾತ್ರಿ ಹೋರಾಟ ನಡೆಸಿದ ಫಲವಾಗಿ ರೈತರಿಗೆ ಅಜಿರ್ ಸ್ವೀಕೃತಿ ಹಾಗೂ ಆಕ್ಷೇಪಣೆ ಮೆಸೆಜ್ಗಳು ಬರುತ್ತಿದ್ದು, ಹೋರಾಟಕ್ಕೆ ಸಂದ ಜಯವಾಗಿದೆ. ಶೀಘ್ರದಲ್ಲೆ ರೈತರಿಗೆ ಪರಿಹಾರ ಬರಲಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಂತರ ಬೆಳೆವಿಮೆ ಪರಿಹಾರಕ್ಕೆ ಪ್ರಸಕ್ತ ವರ್ಷ ಇಡೀ ರಾಜ್ಯದಲ್ಲಿ 90 ಸಾವಿರ ಅಜಿರ್ ಸಲ್ಲಿಕೆಯಾದರೆ, ಅದರಲ್ಲಿ 82 ಸಾವಿರ ಅಜಿರ್ಗಳು ಹಾವೇರಿ ಜಿಲ್ಲೆಗೆ ಸೇರಿದ್ದಾಗಿವೆ. ಅಜಿರ್ ಸಲ್ಲಿಸಿದ ರೈತರಿಗೆ 6-8 ದಿನಗಳ ಒಳಗಾಗಿ ಹಣ ಜಮಾ ಮಾಡಲಾಗುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದರು. ಅದೇ ರೀತಿ ಈಗ ಅಜಿರ್ ಸ್ವೀಕೃತಿ ಮತ್ತು ಆಕ್ಷೇಪಣೆ ಮೇಸೆಜ್ಗಳು ಬರುತ್ತಿದ್ದು, ಶೀಘ್ರದಲ್ಲೇ ರೈತರ ಖಾತೆಗೆ ಹಣ ಜಮೆಯಾಗಲಿದೆ. ಜಿಲ್ಲೆಯ 8 ತಾಲೂಕಿನ ರೈತರು 12 ದಿನ ಹೋರಾಟ ನಡೆಸಿದ ಫಲವಾಗಿ ನ್ಯಾಯ ಸಿಕ್ಕಿದೆ. ಜಿಲ್ಲಾಧಿಕಾರಿಗಳು ಬೆಳೆ ಹಾನಿ ಪರಿಹಾರ ಒಂದು ವಾರದೊಳಗಾಗಿ ಜಮಾ ಮಾಡುವುದಾಗಿ ಭರವಸೆ ಕೊಟ್ಟಿದ್ದು, ಅದರಂತೆ ಜಿಲ್ಲಾಡಳಿತ ರೈತರಿಗೆ ನ್ಯಾಯ ಒದಗಿಸಲು ಸಿದ್ದತೆ ನಡೆಸಿದೆ ಎಂದರು.
ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಬದಲಾಗಿ ಕೆಸಿಸಿ ಬ್ಯಾಂಕಿನ ಪ್ರಾದೇಶಿಕ ಕಚೇರಿಯನ್ನು ಜನವರಿ ತಿಂಗಳಲ್ಲಿ ಪ್ರಾರಂಭಿಸುವುದಾಗಿ ಮಾತು ಕೊಟ್ಟಿದ್ದಾರೆ. 2023ಕ್ಕೂ ಮೊದಲು ಟಿ.ಸಿಗೆ ಹಣ ಸಂದಾಯ ಮಾಡಿದ ರೈತರಿಗೆ ಅತಿ ಶೀಘ್ರದಲ್ಲೇ ಟೆಂಡರ್ ಕರೆದು ಟಿ.ಸಿ ಹಾಕುವುದು, 50 ರೂ., ತುಂಬಿ ತಾತ್ಕಾಲಿಕ ಆರ್.ಆರ್ ನಂಬರ್ ಪಡೆದ ರೈತರು ಎಸ್ಟಿಮೇಂಟ್ ಮಾಡಿಸಿ ಹಣ ಸಂದಾಯ ಮಾಡಿದರೆ ಟಿ.ಸಿ ಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಬೇಡ್ತಿ ವರದಾ ನದಿ ಜೋಡಣೆ ಬಗ್ಗೆ ಸದನದಲ್ಲಿ ಚರ್ಚೆ, ಎಫ್ಪಿಓ ಕಂಪನಿಗಳಿಗೆ ಅನುದಾನ ಬಿಡುಗಡೆ ಚರ್ಚೆ ಮಾಡಿದ್ದು ಕೂಡ ರೈತ ಸಂಘದ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದಶಿರ್ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, 2023&-24ನೇ ಮುಂಗಾರು ಹಂಗಾಮಿಗೆ ಹಾವೇರಿ ಜಿಲ್ಲೆಯಲ್ಲಿ 27.63 ಕೋಟಿ ರೂ. ವಿಮಾ ಹಣ ತುಂಬಿದ್ದು, ರಾಜ್ಯ ಸರ್ಕಾರದ ವಂತಿಕೆ ಹಣ 113.91 ಕೋಟಿಯಾದರೆ, ಕೇಂದ್ರದ ವಂತಿಕೆ 113.91 ಕೋಟಿ ರೂ. ರೈತರ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಒಟ್ಟು ವಂತಿಕೆ 255.45 ಕೋಟಿ ರೂ. ಆದರೆ ಅದರಲ್ಲಿ 187.42 ಕೋಟಿ ರೂ., ರಿಲಯನ್ಸ್ ವಿಮಾ ಕಂಪನಿ ಪರಿಹಾರ ಕೊಟ್ಟು 68.03 ಕೋಟಿ ಲಾಭ ಮಾಡಿಕೊಂಡಿದೆ.
ಅದೇ ರೀತಿ ಹಿಂಗಾರಿನಲ್ಲಿ ಜಿಲ್ಲೆಯಲ್ಲಿ 7.63 ಕೋಟಿ ರೂ., ವಿಮಾ ಹಣ ತುಂಬಿದ್ದು, ರಾಜ್ಯ ಸರ್ಕಾರದ್ದು 31.65 ಕೋಟಿ ವಂತಿಕೆಯಾದರೆ, ಕೇಂದ್ರದ ವಂತಿಕೆ 31.65 ಕೋಟಿ ರೂ. ರೈತರ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಒಟ್ಟು ವಂತಿಕೆ 70.93 ಕೋಟಿ ರೂ. ಆದರೆ ಅದರಲ್ಲಿ 21.16 ಕೋಟಿ ರೂ., ರಿಲಯನ್ಸ್ ವಿಮಾ ಕಂಪನಿ ಪರಿಹಾರ ಕೊಟ್ಟು 49.77 ಕೋಟಿ ಲಾಭ ಮಾಡಿಕೊಂಡಿದೆ. ಒಟ್ಟಾರೆ ಹಿಂಗಾರು ಮತ್ತು ಮುಂಗಾರಿನಲ್ಲಿ 117.80 ಕೋಟಿ ರೂ.,ಹಣವನ್ನು ಇನ್ಸೂರೆನ್ಸ್ ಕಂಪನಿ ಲಾಭ ಮಾಡಿಕೊಂಡು ರೈತರಿಗೆ ಪರಿಹಾರ ನೀಡಿದೆ ವಂಚನೆ ಮಾಡಿದೆ ಎಂದು ಆರೋಪಿಸಿದರು.
ಪ್ರಮುಖರಾದ ಶಿವಬಸಪ್ಪ ಗೋವಿ, ಸುರೇಶ ಚಲವಾದಿ, ಶಂಕ್ರಣ್ಣ ಶಿರಗಂಬಿ, ಶಿವಯೋಗಿ ಹೊಸಗೌಡ್ರ, ದಿಳ್ಳೆಪ್ಪ ಮಣ್ಣೂರ, ಗುಡ್ಡನಗೌಡ ಪ್ಯಾಟಿಗೌಡ್ರ, ಯಶವಂತ ಯಡಗೋಡಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಬೆಳೆ ವಿಮೆ ಪರಿಹಾರ ಶ್ರೀದಲ್ಲಿಯೆ ರೈತರ ಖಾತೆಗೆ; ಕೆಂಚಳ್ಳೇರ

You Might Also Like
ಹೋಟೆಲ್ ಸ್ಟೈಲ್ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe
ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್ಗೆ ಹೋಗಿ ಊಟ ಮಾಡಲು…
ಚಿನ್ನದ ಮೇಲೆ ಲೋನ್ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan
Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…
ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips
ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…