26.8 C
Bangalore
Friday, December 13, 2019

ಬೆಳೆ ವಿಮೆ ರೈತರಿಗೆ ಲಾಭ ಜಾಸ್ತಿ

Latest News

ಶಬರಿಮಲೆ ವಿಚಾರದಲ್ಲಿ ಸದ್ಯ ಯಾವುದೇ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್​

ನವದೆಹಲಿ: ಪೊಲೀಸ್​ ರಕ್ಷಣೆಯೊಂದಿಗೆ ಶಬರಿಮಲೆ ಅಯ್ಯಪ್ಪನ ಸನ್ನಿಧಿಯನ್ನು ಮಹಿಳೆಯರು ಸುರಕ್ಷಿತವಾಗಿ ಪ್ರವೇಶಿಸಲು ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಇಬ್ಬರು ಮಹಿಳಾ ಕಾರ್ಯಕರ್ತರು ಸಲ್ಲಿಸಿದ್ದ...

ತುಮಕೂರು ಸ್ಮಾರ್ಟ್‌ಸಿಟಿ ಜೆಎಂಡಿ ಎತ್ತಂಗಡಿ!

ತುಮಕೂರು: ಸ್ಮಾರ್ಟ್‌ಸಿಟಿ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್ ಅವರನ್ನು ಎತ್ತಂಗಡಿ ಮಾಡಲಾಗಿದೆ. 3 ತಿಂಗಳ ಹಿಂದೇ ಸ್ಮಾರ್ಟ್‌ಸಿಟಿ ಎಂಡಿ ಜವಾಬ್ದಾರಿ ಹೊಣೆ ಹೊತ್ತಿದ್ದ ಮಹಾನಗರ...

ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಜಾತ್ರೆಗೆ ಸಿಎಂ ಯಡಿಯೂರಪ್ಪ ಚಾಲನೆ

ಚಿಕ್ಕನಾಯಕನಹಳ್ಳಿ: ಸುಕ್ಷೇತ್ರ ಕುಪ್ಪೂರು ಶ್ರೀಮರುಳಸಿದ್ದೇಶ್ವರ ಗದ್ದುಗೆ ಜಾತ್ರೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಗುರುವಾರ ಚಾಲನೆ ನೀಡಿದ್ದು, ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಜಾತ್ರೆಗೆ ಬಂದಿದ್ದರು. ಶ್ರೀಮಠದ ಆವರಣದಲ್ಲಿ ಗುರುವಾರ...

ಬಲರಾಮ್ ಕುಣಿಗಲ್ ಬಿಜೆಪಿ ಅಧ್ಯಕ್ಷ

ಕುಣಿಗಲ್: ತಾಲೂಕು ಬಿಜೆಪಿ ನೂತನ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ಬಲರಾಮ್ ಗುರುವಾರ ಅವಿರೋಧ ಆಯ್ಕೆಯಾದರು. ಪಟ್ಟಣದ ದಿಶಾ ಪಾರ್ಟಿ ಹಾಲ್‌ನಲ್ಲಿ ರಾಜ್ಯ ಬಿಜೆಪಿ...

ಭಾರತದ ಪ್ರಗತಿಗೆ ಬೇಕು ವೈಜ್ಞಾನಿಕ ಶಿಕ್ಷಣ: ಡಾ.ಡಿ.ವಿ.ಗೋಪಿನಾಥ್

ದಾವಣಗೆರೆ: ಭಾರತದ ಪ್ರಗತಿಗೆ ವೈಜ್ಞಾನಿಕ ಶಿಕ್ಷಣ ಅತ್ಯವಶ್ಯ ಎಂದು ಮುಂಬೈನ ಭಾಭಾ ಅಣು ಸಂಶೋಧನಾ ಕೇಂದ್ರದ ಜೀವ ವೈದ್ಯಕೀಯ ವಿಭಾಗದ ನಿವೃತ್ತ ನಿರ್ದೇಶಕ ಡಾ.ಡಿ.ವಿ.ಗೋಪಿನಾಥ್ ಹೇಳಿದರು. ಪಾರ್ವತಮ್ಮ...

ಪಿ.ಬಿ.ಹರೀಶ್ ರೈ ಮಂಗಳೂರು
ರೈತರ ಹಿತರಕ್ಷಣೆಗೆ ಸರ್ಕಾರ ಜಾರಿ ಮಾಡಿರುವ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಪ್ರಗತಿ ಕಳೆದ ಸಾಲಿನ ನೋಂದಣಿ ಸಂಖ್ಯೆಗೆ ಹೋಲಿಸಿದರೆ ಈ ಸಾಲಿನಲ್ಲಿ ಉತ್ತಮವಾಗಿದೆ. ಆದರೆ, ದ.ಕ. ಜಿಲ್ಲೆಯ ಒಟ್ಟು ರೈತರ ಸಂಖ್ಯೆಯನ್ನು ಪರಿಗಣಿಸಿದರೆ ಈ ಸಾಲಿನ ನೋಂದಣಿಯೂ ತೃಪ್ತಿಕರವಾಗಿಲ್ಲ.

ಕಳೆದ ಸಾಲಿನಲ್ಲಿ 8,765 ರೈತರು ಅಡಕೆ ಹಾಗೂ ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ವಿಮಾ ಕಂತು ಪಾವತಿಸಿದ್ದರು. ಈ ಸಾಲಿನಲ್ಲಿ ಯೋಜನೆಯ ಪ್ರಯೋಜನ ಪಡೆಯಲು ರೈತರು ಜೂ.30ರ ಒಳಗಾಗಿ ತಮ್ಮ ಹೆಸರನ್ನು ಬ್ಯಾಂಕ್ ಅಥವಾ ಸಹಕಾರಿ ಸಂಘಗಳ ಮೂಲಕ ನೋಂದಾಯಿಸಲು ತಿಳಿಸಲಾಗಿತ್ತು. ಜಿಲ್ಲೆಯಲ್ಲಿ 90 ಸಾವಿರಕ್ಕೂ ಅಧಿಕ ರೈತರಿದ್ದು ನಿಗದಿತ ಅವಧಿಯಲ್ಲಿ ವಿಮಾ ಕಂತು ಪಾವತಿಸಿದವರು 18,179 ಮಾತ್ರ.

ರೈತರಿಗೆ ವರದಾನ: ಈ ಯೋಜನೆಯಡಿ ರೈತರು ವಿಮಾ ಪರಿಹಾರ ಪಡೆಯಲು ಬೆಳೆ ನಷ್ಟ ಪರಿಗಣನೆಯಾಗುವುದಿಲ್ಲ. ಹವಾಮಾನ ವೈಪರೀತ್ಯ ದಾಖಲಾದರೆ ಆ ಪ್ರದೇಶದ ರೈತರು ವಿಮಾ ಪರಿಹಾರಕ್ಕೆ ಅರ್ಹರಾಗುತ್ತಾರೆ. ಉದಾಹರಣೆಗೆ, ಜುಲೈ 1ರಿಂದ ಸೆ.31ರ ಅವಧಿಯಲ್ಲಿ ಒಮ್ಮೆ ಸತತ 4 ದಿನ 115 ಮಿ.ಮೀ. ಮಳೆಯಾದರೆ ಅಲ್ಲಿನ ಅಡಕೆ ಬೆಳೆಗಾರರಿಗೆ ಪರಿಹಾರ ದೊರೆಯುತ್ತದೆ. ಮಳೆಯ ಪ್ರಮಾಣ ಹೆಚ್ಚಾದರೆ ಪರಿಹಾರದ ಪ್ರಮಾಣ ಹೆಚ್ಚಾಗುತ್ತದೆ. ಇದೇ ರೀತಿ ಹಮಾಮಾನ ಇಲಾಖೆಯಲ್ಲಿ ದಾಖಲಾಗುವ ಉಷ್ಣಾಂಶದ ಮಾನದಂಡದ ಮೇಲೆಯೂ ವಿಮೆ ಪರಿಹಾರ ಪಡೆಯಬಹುದು.

ಏನಿದು ಹವಾಮಾನ ಆಧಾರಿತ?: ರೈತರು ಬೆಳೆ ನಷ್ಟವಾದರೆ ಸರ್ಕಾರದಿಂದ ಪರಿಹಾರ ಕೋರುತ್ತಾರೆ. ಸರ್ಕಾರ ನೀಡುವ ಪರಿಹಾರ ಅತ್ಯಲ್ಪ. ಇದರ ಬದಲು ಹವಾಮಾನ ವೈಪರೀತ್ಯದಿಂದಾಗುವ ಬೆಳೆಗಳ ಹಾನಿ ಭರಿಸಲು ಸರ್ಕಾರ ಮೂರು ವರ್ಷದ ಹಿಂದೆ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಅಡಕೆ ಮತ್ತು ಕಾಳುಮೆಣಸು ಬೆಳೆಗಳನ್ನು ಈ ಯೋಜನೆಗೆ ಸೇರ್ಪಡೆ ಮಾಡಲಾಗಿದೆ. ಪ್ರತಿ ಹೆಕ್ಟೇರ್‌ಗೆ ಪ್ರೀಮಿಯಂ ಮೊತ್ತ ನಿಗದಿಯಾಗಿದ್ದು, ರೈತರು ವಿಮಾ ಕಂತಿನ ಶೇ.5ರಷ್ಟು ಪಾವತಿಸಿದರೆ, ಉಳಿದ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಭರಿಸುತ್ತವೆ.

ಬೆಳೆ ಸಾಲಕ್ಕೆ ವಿಮೆ ಕಡ್ಡಾಯ: ರೈತರು ಬೆಳೆ ಸಾಲ ಪಡೆದಿದ್ದರೆ ಬೆಳೆ ವಿಮೆ ಕಡ್ಡಾಯ. ಬೆಳೆ ಸಾಲ ಹೊಂದದ ರೈತರಿಗೆ ಐಚ್ಛಿಕ. ಆದರೆ ದ.ಕ.ಜಿಲ್ಲೆಯಲ್ಲಿ 50 ಸಾವಿರಕ್ಕೂ ಅಧಿಕ ರೈತರು ಬೆಳೆ ಸಾಲ ಪಡೆದಿದ್ದರೂ ವಿಮಾ ಕಂತು ಭರಿಸದ ಕಾರಣ ಸೌಲಭ್ಯದಿಂದ ವಂಚಿತರಾಗಿದ್ದಾರೆ. 2016-17ರಲ್ಲಿ ದ.ಕ. ಜಿಲ್ಲೆಯ 5,295 ರೈತರು 2.31 ಕೋಟಿ ರೂ. ವಿಮಾ ಕಂತು ಪಾವತಿಸಿದ್ದು, 6.73 ಕೋಟಿ ರೂ. ಪರಿಹಾರ ದೊರೆತಿತ್ತು. 2017-18ರಲ್ಲಿ 945 ರೈತರು ಮಾತ್ರ 42 ಲಕ್ಷ ರೂ. ಕಂತು ಪಾವತಿಸಿದ್ದರು. 3.52 ಕೋಟಿ ರೂ.ಪರಿಹಾರ ಬಂದಿತ್ತು ಎಂದು ಅಧಿಕಾರಿಗಳು ವಿವರ ನೀಡುತ್ತಾರೆ.
ಉಡುಪಿ ಜಿಲ್ಲೆಯಲ್ಲಿ 2,940 ರೈತರು ಮಾತ್ರ ನೋಂದಣಿ: ಉಡುಪಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ರೈತ ಕುಟುಂಬಗಳಿವೆ. ಆದರೆ 2019-20ನೇ ಸಾಲಿನಲ್ಲಿ ಕುಂದಾಪುರ 1556, ಉಡುಪಿ 585, ಕಾರ್ಕಳ 799 ಸೇರಿದಂತೆ ಒಟ್ಟು 2940 ರೈತರು ಮಾತ್ರ ವಿಮಾ ನೋಂದಣಿ ಮಾಡಿಸಿಕೊಂಡಿದ್ದಾರೆ. ಜುಲೈ 1 ವಿಮಾ ಕಂತು ಪಾವತಿಗೆ ಕೊನೇ ದಿನವಾಗಿತ್ತು, ಪಾವತಿಸಿದ ರೈತರ ಮಾಹಿತಿಯನ್ನು ಬ್ಯಾಂಕ್‌ನವರು ಸಂರಕ್ಷಣೆ ತಂತ್ರಾಂಶದಲ್ಲಿ ದಾಖಲಿಸಿ ವಿಮಾ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಲು ಬ್ಯಾಂಕ್‌ನವರಿಗೆ ಜುಲೈ 14ರ ವರೆಗೆ ಸಮಯವಿದೆ. ಅಷ್ಟರೊಳಗೆ ಈ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಸಹಾಯಕ ತೋಟಗಾರಿಕೆ ಅಧಿಕಾರಿ ನಿಧೀಶ್ ಹೊಳ್ಳ. 2016-17ನೇ ಸಾಲಿನಲ್ಲಿ ಒಟ್ಟು 3097 ವಿಮೆಗೆ ನೋಂದಣಿ ಮಾಡಿಸಿದ್ದು, ಒಟ್ಟು 6098 ಪ್ರಕರಣಗಳಲ್ಲಿ 1.15 ಕೋಟಿ ರೂ. ವಿಮಾ ಕಂತನ್ನು ಪಾವತಿಸಿದ್ದಾರೆ. ಇದರಲ್ಲಿ 5224 ಪ್ರಕರಣಗಳಲ್ಲಿ 1.84 ಕೋಟಿ ರೂ. ಪರಿಹಾರ ರೈತರಿಗೆ ಪಾವತಿಯಾಗಿದೆ. 20.64 ಲಕ್ಷ ರೂ. ತಾಂತ್ರಿಕ ಸಮಸ್ಯೆಗಳಿಂದ ಪಾವತಿಗೆ ಬಾಕಿ ಇದೆ. 2017-18ನೇ ಸಾಲಿನಲ್ಲಿ ಒಟ್ಟು 991 ವಿಮೆಗೆ ನೋಂದಣಿ ಮಾಡಿಸಿದ್ದು, 1731 ಪ್ರಕರಣಗಳಲ್ಲಿ 1.11 ಕೋಟಿ ರೂ. ಪರಿಹಾರ ಮೊತ್ತ ಸಿಕ್ಕಿದೆ. 2018-19ನೇ ಸಾಲಿನಲ್ಲಿ 1844 ರೈತರು ವಿಮೆಗೆ ನೋಂದಣಿ ಮಾಡಿಸಿದ್ದು, 3068 ಪ್ರಕರಣಗಳಲ್ಲಿ 50 ಲಕ್ಷ ರೂ. ವಿಮೆ ದೊರೆತಿದೆ.

ಯೋಜನೆ ಜಾರಿಯಾಗಿ ಮೂರು ವರ್ಷ ಆಗಿದೆ. ಇಲಾಖೆ ವತಿಯಿಂದ ರೈತರಿಗೆ ಮಾಹಿತಿ ನೀಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ವಿಮಾ ಕಂತು ಪಾವತಿಸಿದ ರೈತರ ಸಂಖ್ಯೆ 10 ಸಾವಿರ ಅಧಿಕವಾಗಿದೆ. 2018-19ರ ಸಾಲಿನಲ್ಲಿ ಕಂತು ಪಾವತಿಸಿದವರಿಗೆ ಮುಂದಿನ 2-3 ತಿಂಗಳಲ್ಲಿ ಪರಿಹಾರ ಬರಬಹುದು. ಹವಾಮಾನ ಅಂಶಗಳ ಮಾಹಿತಿಯ ಆಧಾರದಲ್ಲಿ ಬೆಳೆ ವಿಮೆ ನಷ್ಟ ಪರಿಹಾರ ಇತ್ಯರ್ಥ ಪಡಿಸುವ ಕಾರಣ ಕೃಷಿಕರಿಗೆ ಇದರಲ್ಲಿ ಲಾಭ ಇದೆ.
|ಎಚ್.ಆರ್ ನಾಯಕ್ ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ ದ.ಕ.
ಹವಾಮಾನ ಆಧಾರಿತ ಬೆಳೆ ವಿಮೆ ಉತ್ತಮ ಯೋಜನೆ. ಈ ಹಿಂದೆ ನಾನು 3 ಹೆಕ್ಟೇರ್‌ಗೆ 5,400 ರೂ.ಕಂತು ಪಾವತಿಸಿದ್ದೆ. 43 ಸಾವಿರ ರೂ. ಪರಿಹಾರ ದೊರೆತಿತ್ತು. ಯೋಜನೆ ಬಗ್ಗೆ ಈಗ ರೈತರಲ್ಲಿ ಅರಿವು ಮೂಡುತ್ತಿದೆ. ಸುಳ್ಯ, ಪುತ್ತೂರು ತಾಲೂಕಿನಲ್ಲಿ ಹೆಚ್ಚಿನ ರೈತರು ಈ ಬಾರಿ ವಿಮಾ ಕಂತು ಪಾವತಿಸಿದ್ದಾರೆ.
|ಶಶಿಕುಮಾರ್ ರೈ, ನಿರ್ದೇಶಕರು, ಎಸ್‌ಸಿಡಿಸಿಸಿ ಬ್ಯಾಂಕ್

Stay connected

278,748FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....