ಸರಗೂರು: ತಾಲೂಕಿನ ಎಂಸಿ ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪುರ ಮತ್ತು ಸಿದ್ದಾಪುರ ವ್ಯಾಪ್ತಿಯಲ್ಲಿ 15 ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಯೊಂದು ರೈತರ ತೋಟಗಳ ಮೇಲೆ ದಾಳಿ ಮುಂದುವರಿಸಿದೆ.

ಸಿದ್ದಾಪುರ ಗ್ರಾಮದ ರೈತ ವೆಂಕಟರಾಮು ಅವರು ಬೆಳೆದಿದ್ದ ಮೂರು ಎಕರೆ ರಾಗಿ ಕಟ್ಟಾವಿಗೆ ಬಂದಿದ್ದು, ಅದನ್ನು ಸೋಮವಾರ ರಾತ್ರಿ ಸಂಪೂರ್ಣ ನಾಶ ಮಾಡಿದೆ. ಅಲ್ಲದೆ ಹತ್ತಿ, ರಾಗಿ, ರಾಗಿ ಮೆದೆಗಳನ್ನೂ ಹಾಳು ಮಾಡಿದೆ.
ಒಂದು ಆನೆ ಗುಂಪು ಚಿಕ್ಕಬರಗಿ ಕಾಡಿನಿಂದ ಬಂದು ಬೀಡು ಬಿಟ್ಟಿದ್ದರೆ, ಮತ್ತೊಂದು ಗುಂಪು ಶಿವಪುರ ಗುಡ್ಡದಲ್ಲಿಯೇ ತಂಗಿವೆ. ರಾತ್ರಿ ವೇಳೆ ಮತ್ತಷ್ಟು ಬೆಳೆ ನಾಶ ಮಾಡುವ ಸಂಭವವಿದೆ ಎಂದು ರೈತ ವೆಂಕಟರಾಮು ಆತಂಕ ವ್ಯಕ್ತಪಡಿಸಿದರು.