ಅಧಿಕಾರಿಗಳಿಂದ ಬೆಳೆ ಹಾನಿ ವೀಕ್ಷಣೆ

ಗುಂಡ್ಲುಪೇಟೆ: ಮುಂಗಾರು ಮಳೆ ಕೊರತೆಯಿಂದ ಬೆಳೆ ಹಾನಿಯಾಗಿರುವ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿ ಪರಿಶೀಲಿಸಿತು.

ತಾಲೂಕಿನ ಬೇಗೂರು ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದಾಗಿ ಹತ್ತಿ, ನೆಲಗಡಲೆ ಸೂರ್ಯಕಾಂತಿ, ಜೋಳ ಮುಂತಾದ ಬೆಳೆಗಳು ನಾಶವಾಗಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು.

ತಾಲೂಕಿನ ಹಂಗಳ ಹೋಬಳಿ ಹೊರತುಪಡಿಸಿ ಕಸಬಾ, ತೆರಕಣಾಂಬಿ ಹಾಗೂ ಬೇಗೂರು ಹೋಬಳಿಯಲ್ಲಿ ಬೆಳೆಗಳು ಬಹುತೇಕ ಒಣಗಿವೆ. ಈ ಹಿನ್ನೆಲೆಯಲ್ಲಿ ಜು.23ರಿಂದ ಎಲ್ಲ ಹೋಬಳಿಗಳಲ್ಲಿನ ರೈತರ ಜಮೀನುಗಳಿಗೆ ತೆರಳಿ ಬೆಳೆ ನಾಶದ ವರದಿಯನ್ನು ಸಮಗ್ರವಾಗಿ ತಯಾರಿಸಲಾಗುವುದು. ಇದರಿಂದ ರೈತರಿಗೆ ಪರಿಹಾರ ನೀಡಲು ಹಾಗೂ ಬೆಳೆ ವಿಮೆ ಬಗ್ಗೆ ಖಚಿತ ಮಾಹಿತಿ ನೀಡಲು ಸಹಕಾರಿ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಕೃಷಿ ಇಲಾಖೆ ಉಪ ನಿರ್ದೇಶಕ ಡಾ.ಮುತ್ತುರಾಜ್, ಸಹಾಯಕ ನಿರ್ದೇಶಕ ವೆಂಕಟೇಶ್, ತಹಸೀಲ್ದಾರ್ ನಂಜುಂಡಯ್ಯ, ಬೇಗೂರು ನಾಡಕಚೇರಿಯ ಭೈರಯ್ಯ, ಕಂದಾಯಾಧಿಕಾರಿ ಮಹದೇವಪ್ಪ ಇತರರು ಇದ್ದರು.

Leave a Reply

Your email address will not be published. Required fields are marked *