ಭಾರತ ಮತ್ತು ಪಾಕಿಸ್ತಾನ ಜಾಹೀರಾತಿಗೆ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಬೇಸರ ವ್ಯಕ್ತಪಡಿಸಿ, ಹೇಳಿದ್ದೇನು?

ನವದೆಹಲಿ: ಯಾವುದೇ​ ಟೂರ್ನಿಯಾಗಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ಎಲ್ಲರು ಎದುರು ನೋಡುತ್ತಿರುತ್ತಾರೆ. ಅದೇ ರೀತಿ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯಲ್ಲಿಯೂ ಜೂನ್​ 16 ರಂದು ಉಭಯ ದೇಶಗಳು ಸೆಣಸಾಡಲಿದ್ದು, ಪಂದ್ಯದ ಉತ್ತೇಜನಕ್ಕಾಗಿ ಉಭಯ ರಾಷ್ಟ್ರಗಳು ಬಿಡುಗಡೆ ಮಾಡಿರುವ ಜಾಹೀರಾತು ಇದೀಗ ಭಾರತದ ಟೆನ್ನಿಸ್​ ತಾರೆ ಹಾಗೂ ಪಾಕ್​ ಸೊಸೆ ಸಾನಿಯ ಮಿರ್ಜಾ ಕೆಂಗಣ್ಣಿಗೆ ಗುರಿಯಾಗಿದೆ.

ಭಾರತ ಮತ್ತು ಪಾಕ್​ ಬಿಡುಗಡೆ ಮಾಡಿರುವ ಜಾಹೀರಾತು ಕುರಿತು ಟ್ವೀಟ್​ ಮೂಲಕ ಬೇಸರ ವ್ಯಕ್ತಪಡಿಸಿರುವ ಸಾನಿಯಾ ಮಿರ್ಜಾ, ಉಭಯ ರಾಷ್ಟ್ರಗಳು ಬಿಡುಗಡೆ ಮಾಡಿರುವ ಜಾಹೀರಾತುಗಳೆರಡು ನೋಡಲು ಕಿರಿಕಿರಿ ಉಂಟು ಮಾಡುವಂತಿದೆ. ಮಾರುಕಟ್ಟೆಯಲ್ಲಿ ಈ ಜಾಹಿರಾತುಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡುವ ಅವಶ್ಯಕತೆ ಇಲ್ಲ. ಇದೊಂದು ವ್ಯರ್ಥ ಪ್ರಯತ್ನವಾಗಿದೆ. ಈಗಾಗಲೇ ಉಭಯ ದೇಶಗಳ ಪಂದ್ಯ ಸಾಕಷ್ಟು ಗಮನಸೆಳೆದಿದ್ದು, ಇದೇ ಸಾಕಾಗಿದೆ ಎಂದು ತಿಳಿಸಿದ್ದಾರೆ.

ವಿಶ್ವಕಪ್​ ಟೂರ್ನಿ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮೌಕಾ…ಮೌಕಾ ಜಾಹಿರಾತಿಗೆ ಟಕ್ಕರ್​ ಕೊಡಲು ವಿಂಗ್​ ಕಮಾಂಡರ್​ ಅಭಿನಂದನ್​ ರೀತಿಯ ತದ್ರೂಪಿಯನ್ನು ಬಳಸಿಕೊಂಡು ಭಾರತವನ್ನು ಅಣಕಿಸಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಜಾಹೀರಾತು ವಿಡಿಯೋ ಮಾಡಿದೆ. ಎರಡು ವಿಡಿಯೋಗಳು ಸಾಕಷ್ಟು ವೈರಲ್​ ಆಗಿದ್ದು, ಚರ್ಚೆಗೂ ಗ್ರಾಸವಾಗಿದೆ.

ಹೈದಾರಾಬಾದ್​ ಮೂಲದವರಾಗಿರುವ ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್​ ಮಲ್ಲಿಕ್​ರನ್ನು ವಿವಾಹವಾಗಿದ್ದು, ಪ್ರಸ್ತುತ ದುಬೈನಲ್ಲಿ ವಾಸವಿದ್ದಾರೆ. (ಏಜೆನ್ಸೀಸ್​)

ಸಿಟ್ಟಿಗೆ ಕಾರಣವಾಯ್ತು ಅಭಿನಂದನ್​ ತದ್ರೂಪಿ​ ಜಾಹೀರಾತು: ಟ್ವೀಟ್​ ಮೂಲಕ ಪಾಕ್​ಗೆ ಭಾರತೀಯರು ತಿವಿದಿದ್ದು ಹೀಗೆ…

VIDEO: ಭಾರತದ ಮೌಕಾ, ಮೌಕಾ… ಜಾಹೀರಾತಿಗೆ ಪಾಕ್​ ಸೆಡ್ಡು: ವಿಂಗ್​ ಕಮಾಂಡರ್​ ಅಭಿನಂದನ್​ ತದ್ರೂಪಿ ಬಳಸಿ ಪ್ರತಿ ಜಾಹೀರಾತು!

Leave a Reply

Your email address will not be published. Required fields are marked *