ವೃದ್ಧೆಯ ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್​ ಹಾಕಿ ಕೊಲೆಗೈದು ಚಿನ್ನಾಭರಣ ಒಯ್ದ ದುಷ್ಕರ್ಮಿಗಳು!

ಬೆಂಗಳೂರು: ಒಂಟಿಯಾಗಿದ್ದ ವೃದ್ಧೆಯೊಬ್ಬರ ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್​ ಹಾಕಿ ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು, ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯಲ್ಲಿ ಈ ಪ್ರಕರಣ ನಡೆದಿದೆ. ಕಮಲ (80) ಕೊಲೆಗೀಡಾದ ವೃದ್ಧೆ. ಈಕೆಯ ಪತಿ ಆರು ತಿಂಗಳ ಹಿಂದಷ್ಟೇ ಸಾವಿಗೀಡಾಗಿದ್ದರು. ಮೂವರು ಮಕ್ಕಳಿದ್ದರೂ ಅವರು ಪ್ರತ್ಯೇಕವಾಗಿ ನೆಲೆಸಿದ್ದಾರೆ. ಹೀಗಾಗಿ ಕಮಲ ಒಂಟಿಯಾಗಿ ವಾಸವಿದ್ದರು. ಈಕೆಯನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಕೊರಳಲ್ಲಿದ್ದ ಸರ, ಮನೆಯಲ್ಲಿದ್ದ ಚಿನ್ನಾಭರಣ, ಹಣ ದೋಚಿಕೊಂಡು … Continue reading ವೃದ್ಧೆಯ ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್​ ಹಾಕಿ ಕೊಲೆಗೈದು ಚಿನ್ನಾಭರಣ ಒಯ್ದ ದುಷ್ಕರ್ಮಿಗಳು!