22.5 C
Bengaluru
Sunday, January 19, 2020

ಲಂಕೆ ಕನಸಿಗೆ ಆಫ್ರಿಕಾ ವಿಘ್ನ

Latest News

400 ಲೀಟರ್ ಹಾಲು ಮಣ್ಣು ಪಾಲು

ಬಸರಾಳು: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಲಾರಿ ಉರುಳಿಬಿದ್ದ ಪರಿಣಾಮ 300 ರಿಂದ 400 ಲೀಟರ್ ಹಾಲು ಮಣ್ಣುಪಾಲಾಗಿದೆ.ನಾಗಮಂಗಲ, ಬಸರಾಳು ಹೋಬಳಿಯ ವಿವಿಧ...

ಪಲ್ಸ್ ಪೋಲಿಯೋದಲ್ಲಿ ಶೇ.95ರಷ್ಟು ಸಾಧನೆ

ಮಂಡ್ಯ: ಜಿಲ್ಲಾದ್ಯಂತ ಭಾನುವಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮೊದಲ ದಿನವೇ 1,18663 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗಿದೆ. ಜ.19ರಿಂದ 22ರವರೆಗೆ ಪಲ್ಸ್ ಪೋಲಿಯೋ...

ಬಲೆಯಲ್ಲಿ ಸಿಲುಕಿದ್ದ ಹೆಬ್ಬಾವು ರಕ್ಷಣೆ

ಕೆ.ಎಂ.ದೊಡ್ಡಿ: ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಹೆಬ್ಬಾವು ಸಿಲುಕಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಮದ್ದೂರಿನ ಉರಗ ಸಂರಕ್ಷಕ ಮಾ.ನ. ಪ್ರಸನ್ನಕುಮಾರ್ ಹಾವನ್ನು ರಕ್ಷಿಸಿ...

ವೇಮನ ಒಬ್ಬ ಸಮಾಜ ಸುಧಾರಕ

ವಿಜಯಪುರ : ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಮಹಾಯೋಗಿ ವೇಮನ ಅವರು ಒಬ್ಬ ಸಮಾಜ ಸುಧಾರಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ನಗರದ ಕಂದಗಲ್...

ಪ್ರಾಚಾರ್ಯರ ಧೋರಣೆ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆಗೆ ನಿರಾಕರಿಸಿದ್ದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಶನಿವಾರ...

ಚೆಸ್ಟರ್ ಲೀ ಸ್ಟ್ರೀಟ್: ಏಕದಿನ ವಿಶ್ವಕಪ್ ಟೂರ್ನಿಯ ಪ್ರಶಸ್ತಿ ರೇಸ್​ನಿಂದ ಈಗಾಗಲೇ ಹೊರಬಿದ್ದಿರುವ ದಕ್ಷಿಣ ಆಫ್ರಿಕಾ ತಂಡ 1996ರ ಚಾಂಪಿಯನ್ ಶ್ರೀಲಂಕಾ ತಂಡದ ಆಸೆಗೂ ಬೆಂಕಿಇಟ್ಟಿದೆ. ನಿಣಾರ್ಯಕ ಹೋರಾಟದಲ್ಲಿ ಎಡವಿದ ಶ್ರೀಲಂಕಾ ತಂಡದ ಸೆಮಿಫೈ ನಲ್ ಆಸೆ ತೂಗುಯ್ಯಾಲೆಯಲ್ಲಿ ಉಳಿಯಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ನೀರಸ ನಿರ್ವಹಣೆ ತೋರಿದ ಶ್ರೀಲಂಕಾ ತಂಡ 9 ವಿಕೆಟ್​ಗಳಿಂದ ಫಾಫ್ ಡು ಫ್ಲೆಸಿಸ್ ಪಡೆಗೆ ಶರಣಾಯಿತು. ಮುಂದಿನ ಎರಡೂ ಪಂದ್ಯಗಳಲ್ಲೂ ಗೆದ್ದರೂ ಇತರ ತಂಡಗಳ ಫಲಿತಾಂಶ ಹಾಗೂ ಲೆಕ್ಕಾಚಾರದ ಮೇಲೆ ಶ್ರೀಲಂಕಾ ತಂಡದ ಭವಿಷ್ಯ ಅಡಗಿದೆ.

ರಿವರ್ ಸೈಡ್ ಕೌಂಟಿ ಗ್ರೌಂಡ್​ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಎದುರಾಳಿ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ನಾಯಕನ ಲೆಕ್ಕಾಚಾರವನ್ನು ಹುಸಿಗೊಳಿಸದ ವೇಗಿಗಳಾದ ಡ್ವೈನ್ ಪ್ರಿಟೋರಿಯಸ್ (25ಕ್ಕೆ 3) ಹಾಗೂ ಕ್ರಿಸ್ ಮಾರಿಸ್ (46ಕ್ಕೆ 3) ಜೋಡಿ ಮಾರಕ ದಾಳಿಗೆ ಕುಸಿದ ಶ್ರೀಲಂಕಾ 49.3 ಓವರ್​ಗಳಲ್ಲಿ 203 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ ಹಾಶಿಂ ಆಮ್ಲ (80*ರನ್, 105 ಎಸೆತ, 5 ಬೌಂಡರಿ) ಹಾಗೂ ಫಾಫ್ ಡು ಪ್ಲೆಸಿಸ್ (96*ರನ್, 103 ಎಸೆತ, 10 ಬೌಂಡರಿ, 1 ಸಿಕ್ಸರ್) ಜೋಡಿ 2ನೇ ವಿಕೆಟ್​ಗೆ ಪೇರಿಸಿದ 175 ರನ್ ಜತೆಯಾಟದ ಫಲವಾಗಿ 37.2 ಓವರ್​ಗಳಲ್ಲಿ 1 ವಿಕೆಟ್​ಗೆ 206 ರನ್ ಬಾರಿಸಿ ಗೆಲುವಿನ ನಗೆ ಬೀರಿತು.

ಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಕ್ವಿಂಟನ್ ಡಿಕಾಕ್ (15ರನ್, 16 ಎಸೆತ, 3 ಬೌಂಡರಿ) ಆರಂಭದಲ್ಲೇ ಬಿರುಸಿನ ಆರಂಭ ನೀಡಿದರೂ ಬೇಗನೆ ನಿರ್ಗಮಿಸಿದರು. ಮಾಲಿಂಗ ಎಸೆದ ಯಾರ್ಕರ್ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ವಿಫಲರಾದ ಡಿಕಾಕ್ ಬೌಲ್ಡ್ ಆಗಿ ನಿರ್ಗಮಿಸಿದರು. ಇದರಿಂದ ದಕ್ಷಿಣ ಆಫ್ರಿಕಾ ತಂಡ 31 ರನ್​ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಅನುಭವಿ ಹಾಶಿಂ ಆಮ್ಲ ಜತೆಯಾದ ನಾಯಕ ಫಾಫ್ ಡು ಪ್ಲೆಸಿಸ್ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದರು. ಪರಸ್ಪರ ಕ್ರೀಸ್ ಬದಲಿಸಿಕೊಳ್ಳುವ ಮೂಲಕ ಲಂಕಾ ಬೌಲರ್​ಗಳ ಹಿಡಿತ ತಪ್ಪಿಸಿದರು. ಆಮ್ಲ ಟೂರ್ನಿಯಲ್ಲಿ 2ನೇ ಅರ್ಧಶತಕ ಪೂರೈಸಿದರೆ, ಪ್ಲೆಸಿಸ್ 3ನೇ ಅರ್ಧಶತಕ ಗಳಿಸಿದರು. ಸೆಮೀಸ್ ರೇಸ್​ನಿಂದ ಹೊರಬಿದ್ದ ನೋವಿನಲ್ಲೂ ದಕ್ಷಿಣ ಆಫ್ರಿಕಾ ಗೆಲುವಿನ ನಗೆ ಬೀರಿತು.

ಡ್ವೈನ್ ಪ್ರಿಟೋರಿಯಸ್ ಟೂರ್ನಿಯಲ್ಲಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್​ಗಳ ಪೈಕಿ ಜೇಸನ್ ಹೋಲ್ಡರ್ ಜತೆಗೂಡಿ ಜಂಟಿ ಅಗ್ರಸ್ಥಾನ ಪಡೆದರು. ಜೇಮ್ಸ್‌ ನೀಶಾಮ್ (45) ಎರಡನೇ ಸ್ಥಾನದಲ್ಲಿದ್ದಾರೆ.

ಶ್ರೀಲಂಕಾ ತಂಡ 11 ರಿಂದ 40 ಓವರ್​ಗಳ ಒಳಗೆ ಟೂರ್ನಿಯಲ್ಲಿ ಕಡಿಮೆ ಮೊತ್ತ ದಾಖಲಿಸಿದ ತಂಡ ಎನಿಸಿಕೊಂಡಿತು. ಬರ್ವಿುಂಗ್​ಹ್ಯಾಂನಲ್ಲಿ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ಎದುರು 2 ವಿಕೆಟ್​ಗೆ 108 ರನ್​ಗಳಿಸಿದ್ದು, ಇದುವರೆಗಿನ ಕಡಿಮೆ ಮೊತ್ತವಾಗಿತ್ತು.

ದಿಮುತ್ ಕರುಣರತ್ನೆ ವಿಶ್ವಕಪ್ ಟೂರ್ನಿಯಲ್ಲಿ ಇನಿಂಗ್ಸ್​ನ ಮೊದಲ ಎಸೆತದಲ್ಲೇ ಔಟಾದ 5ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು. ಇದಕ್ಕೂ ಮೊದಲು ಬಾಂಗ್ಲಾದೇಶದ ಹನ್ನಾನ್ ಸರ್ಕಾರ್ (2003), ಜಿಂಬಾಬ್ವೆಯ ಬ್ರೆಂಡನ್ ಟೇಲರ್ (2011), ಮಾರ್ಟಿನ್ ಗುಪ್ಟಿಲ್ (2019) ಜಾನ್ ರೈಟ್ (1992) ಈ ಅನಪೇಕ್ಷಿತ ದಾಖಲೆಗೆ ಗುರಿಯಾಗಿದ್ದಾರೆ.

ವೇಗಿಗಳ ದಾಳಿಗೆ ಲಂಕಾ ಕುಸಿತ

ಹಿಂದಿನ ಪಂದ್ಯದಲ್ಲಿ ಬಲಿಷ್ಠ ನಿರ್ವಹಣೆಯೊಂದಿಗೆ ಆತಿಥೇಯ ಇಂಗ್ಲೆಂಡ್ ಮಣಿಸಿದ ವಿಶ್ವಾಸದೊಂದಿಗೆ ಕಣಕ್ಕಿಳಿದ ಲಂಕಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ದಿಮುತ್ ಕರುಣರತ್ನೆ, ಕಗಿಸೊ ರಬಾಡ ಎಸೆದ ಇನಿಂಗ್ಸ್

ನ ಮೊದಲ ಎಸೆತದಲ್ಲಿಯೇ ಫಾಫ್ ಡು ಪ್ಲೆಸಿಸ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಿರ್ಣಾಯಕ ಪಂದ್ಯದಲ್ಲಿ ಲಂಕಾ ತಂಡ ಆರಂಭದಲ್ಲೇ ಆಘಾತ ಎದುರಿಸಿತು. ಬಳಿಕ ಜತೆಯಾದ ಕುಸಲ್ ಪೆರೇರಾ (30) ಹಾಗೂ ಅವಿಷ್ಕಾ ಫೆರ್ನಾಂಡೊ (30) ಜೋಡಿ ಕೆಲಕಾಲ ವಿಕೆಟ್ ಕಾಯ್ದುಕೊಳ್ಳಲು ಯತ್ನಿಸಿತು. ಟೂರ್ನಿಯಲ್ಲಿ 2ನೇ ಪಂದ್ಯವಾಡಿದ ಅವಿಷ್ಕಾ ಕೆಲಕಾಲ ಬಿರುಸಿನ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಪರ ಮೊದಲ ಪಂದ್ಯವಾಡಿದ ಡ್ವೈನ್ ಪ್ರಿಟೋರಿಯಸ್ ಈ ಜೋಡಿಗೆ ಬ್ರೇಕ್ ಹಾಕಿದರು. 2ನೇ ವಿಕೆಟ್​ಗೆ ಉಪಯುಕ್ತ 67 ರನ್ ಕಲೆಹಾಕಿದ ಈ ಜೋಡಿ ಪ್ರಿಟೋರಿಯಸ್​ಗೆ ವಿಕೆಟ್ ನೀಡಿತು. ಬಳಿಕ ಬಂದ ಕುಸಲ್ ಮೆಂಡಿಸ್ (23), ಮಾಜಿ ನಾಯಕ ಏಂಜೆಲೋ ಮ್ಯಾಥ್ಯೂಸ್ (11) ಹಾಗೂ ಧನಂಜಯ ಡಿ ಸಿಲ್ವಾ (24) ಮಧ್ಯಮ ಕ್ರಮಾಂಕದಲ್ಲಿ ರನ್​ಗಳಿಸಲು ವಿಫಲರಾದರು. ಇದರೊಂದಿಗೆ ಲಂಕಾ ತಂಡ ಕನಿಷ್ಠ 150ರ ಗಡಿ ದಾಟುವುದು ದುಸ್ತರ ಎನಿಸಿತು. ಅಂತಿಮ ಹಂತದಲ್ಲಿ ಜೀವನ್ ಮೆಂಡಿಸ್ (18) ಹಾಗೂ ಥಿಸ್ಸರ ಪೆರೇರಾ (21) ಕೆಲಕಾಲ ಕ್ರೀಸ್​ನಲ್ಲಿ ನಿಂತ ಫಲವಾಗಿ ತಂಡದ ಮೊತ್ತ 200ರ ಗಡಿ ದಾಟಿತು.

ಲಂಕಾ ಮುಂದಿನ ಹಾದಿ

ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ತಂಡದ ಸೋಲಿನಿಂದಾಗಿ ಮುಂದಿನ ಹಾದಿ ಕಠಿಣವಾಗಿದೆ. ಮುಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಭಾರತ ತಂಡದ ವಿರುದ್ಧ ಶ್ರೀಲಂಕಾ ಜಯ ಕಂಡರೂ, ಇಂಗ್ಲೆಂಡ್ ತಂಡ ಮುಂದಿನ ಒಂದು ಪಂದ್ಯದಲ್ಲಿ ಜಯಿಸಿದರೆ, ಟೂರ್ನಿಯಿಂದ ಲಂಕಾ ಹೊರಬೀಳಲಿದೆ.

ಲಂಕಾಗೆ ಅದೃಷ್ಟ ತರದ ಹಳದಿ ಜೆರ್ಸಿ

ಇಂಗ್ಲೆಂಡ್ ತಂಡವನ್ನು ಹಳದಿ ಜೆರ್ಸಿ ತೊಟ್ಟು ಮಣಿಸಿದ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಉಳಿದ ಪಂದ್ಯಗಳಿಗೂ ಇದೇ ಬಣ್ಣದ ಜೆರ್ಸಿ ತೊಟ್ಟು ಆಡಲು ಐಸಿಸಿಯಿಂದ ಅನುಮತಿ ಪಡೆದು ಕಣಕ್ಕಿಳಿದಿದ್ದ ಲಂಕಾ ನಿರಾಸೆ ಕಂಡಿತು. ಹಳದಿ ಬಣ್ಣದ ಜೆರ್ಸಿ ಅದೃಷ್ಟ ತರಬಹುದು ಎಂದು ತಂಡದ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಜತೆಗೆ ಸೆಮಿಫೈನಲ್​ಗೇರಲು ಉಳಿದಿರುವ 2 ಪಂದ್ಯಗಳಲ್ಲೂ ಮಾಡು ಇಲ್ಲವೇ ಮಡಿ ಹೋರಾಟ ನಡೆಸಬೇಕಿದೆ.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...