ಇರ್ಫಾನ್ ದಾರಿ ತಪ್ಪಿಸಿದ ಬಿಸಿಸಿಐ?

ಮುಂಬೈ: ಬಿಸಿಸಿಐ ನಿಯಮದ ಪ್ರಕಾರ, ಭಾರತದ ಆಟಗಾರರು ನಿವೃತ್ತಿಯಾಗದೆ ವಿದೇಶಿ ಟಿ20 ಲೀಗ್​ಗಳಲ್ಲಿ ಆಡುವಂತಿಲ್ಲ. ಆದರೆ ಮುಂಬರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ನ (ಸಿಪಿಎಲ್) ಆಟಗಾರರ ಡ್ರಾಫ್ಟ್ ಪಟ್ಟಿಯಲ್ಲಿ ಭಾರತದ ಆಲ್ರೌಂಡರ್ ಇರ್ಫಾನ್ ಪಠಾಣ್ ಹೆಸರು ಕಾಣಿಸಿಕೊಂಡಿದೆ. ಅವರಿನ್ನೂ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್​ಗೆ ನಿವೃತ್ತಿ ಪ್ರಕಟಿಸಿಲ್ಲ.

ಹೀಗಾಗಿ ಇದು ಬಿಸಿಸಿಐ ನಿಯಮದ ಉಲ್ಲಂಘನೆ ಆಗಿದ್ದು, ಇದರಿಂದ ಇರ್ಫಾನ್ ಶಿಸ್ತುಕ್ರಮ ಎದುರಿಸಬೇಕಾಗಬಹುದು. ಆದರೆ ಬಿಸಿಸಿಐ ಅಧಿಕಾರಿಯೊಬ್ಬರು ನೀಡಿದ ತಪು್ಪ ಮಾಹಿತಿಯಿಂದಾಗಿಯೇ ಇರ್ಫಾನ್, ಸಿಪಿಎಲ್ ಆಡಲು ಮುಂದಾದರು ಎನ್ನಲಾಗಿದೆ. ಬರೋಡದ 34 ವರ್ಷದ ಇರ್ಫಾನ್ ಕಳೆದ ಐಪಿಎಲ್ ಹರಾಜಿನಲ್ಲಿ ಯಾವುದೇ ತಂಡಕ್ಕೆ ಬಿಕರಿಯಾಗಿರಲಿಲ್ಲ.

Leave a Reply

Your email address will not be published. Required fields are marked *