ಬಿದ್ದು ಒದ್ದಾಡುತ್ತಿದ್ದ ಹದ್ದಿನ ರಕ್ಷಣೆ

ಅಂಕೋಲಾ: ಸಾರ್ವಜನಿಕರು ಬಳಸುತ್ತಿದ್ದ ಕುಡಿಯುವ ನೀರಿನ ಬಾವಿಗೆ ಅಸ್ವಸ್ಥಗೊಂಡು ಬಿದ್ದು ಒದ್ದಾಡುತ್ತಿದ್ದ ಹದ್ದನ್ನು ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಸೇರಿ ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದ ಘಟನೆ ತಾಲೂಕಿನ ಸುಂಕಸಾಳ ಗ್ರಾ.ಪಂ ವ್ಯಾಪ್ತಿಯ ರಾಮನಗುಳಿ ಬಳಿ ಸೋಮವಾರ ಸಂಜೆ ನಡೆದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕಾಗಮಿಸಿದ ಉಪವಲಯ ಅರಣ್ಯಾಧಿಕಾರಿ ಹಜರತ್ ಅಲಿ ಕುಂದಗೋಳ ಹಾಗೂ ತಂಡ ಬಾವಿಯಲ್ಲಿ ಬಿದ್ದ ಹದ್ದನ್ನು ಎತ್ತುವ ಕಾರ್ಯಕ್ಕೆ ಮುಂದಾದರು‌. ಬುಟ್ಟಿಗೆ ಹಗ್ಗ ಕಟ್ಟಿ ಬಾವಿಗೆ ಬಿಟ್ಟು ಹದ್ದನ್ನು ಸ್ಥಳೀಯರ ಸಹಕಾರದಿಂದ ಸುರಕ್ಷಿತವಾಗಿ ಮೇಲೆತ್ತಿ ಹದ್ದನ್ನು ಉಪಚರಿಸಿದರು‌‌. ಹದ್ದು ತೀವ್ರ ಅಸ್ವಸ್ಥಗೊಂಡಂತೆ ಕಂಡುಬಂದಿದ್ದು ಹತ್ತಿರದ ಮರದ ಮೇಲೆ ಕುಳಿತಿದ್ದಾಗ ಮಂಗಗಳು ದಾಳಿ ಮಾಡಿ ಸಂಘರ್ಷ ಉಂಟಾಗಿದ್ದರಿಂದ ಹದ್ದು ಬಳಲಿ ಹಾರಲು ಸಾಧ್ಯವಾಗದೆ ಆಯತಪ್ಪಿ ಬಾವಿಗೆ ಬಿದ್ದಿದೆ ಎಂದು ಶಂಕಿಸಲಾಗಿದೆ‌‌. ಅರಣ್ಯ ಅಧಿಕಾರಿಗಳು ಹದ್ದನ್ನು ಉಪಚರಿಸಿದ ಬಳಿಕ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದರು. ಹದ್ದನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಆರ್.ಎಫ್.ಓ ಸುರೇಶ ನಾಯ್ಕ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಹಜರತ ಅಲಿ, ಬಸವರಾಜ ಜಂಬಗಿ, ರಿತೀಶ್ ಹಾಗೂ ಸ್ಥಳೀಯರಾದ ರಾಘವೇಂದ್ರ ಶೆಟ್ಟಿ, ತುಕಾರಾಮ ಹರಿಕಂತ್ರ, ರಾಮು ನಾಯ್ಕ, ಕಿರಣ್, ಲೋಕೇಶ, ಗಣೇಶ ಮುಂತಾದವರು ಇದ್ದರು.


Share This Article

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…