More

    ಸಿಡಿಎಸ್​ ಹುದ್ದೆಯನ್ನು ಸಾಂಸ್ಥಿಕ ಗೊಳಿಸುವುದು, ಡಿಪಾರ್ಟ್​ಮೆಂಟ್​ ಆಫ್ ಮಿಲಿಟರಿ ಅಫೇರ್ಸ್ ರಚನೆ ಎಲ್ಲವೂ ಸುಧಾರಣೆಯ ಕ್ರಮಗಳು ಎಂದ ಪ್ರಧಾನಿ ನರೇಂದ್ರ ಮೋದಿ

    ನವದೆಹಲಿ: ಡಿಪಾರ್ಟ್​ಮೆಂಟ್ ಆಫ್​ ಮಿಲಿಟರಿ ಅಫೇರ್ಸ್​ ಸ್ಥಾಪನೆ ಮತ್ತು ಚೀಫ್ ಆಫ್​ ಡಿಫೆನ್ಸ್​ ಸ್ಟಾಫ್​(ಸಿಡಿಎಸ್​) ಹುದ್ದೆಯನ್ನು ಸಾಂಸ್ಥಿಕಗೊಳಿಸಿದ್ದು ಸುಧಾರಣೆಯ ಕ್ರಮಗಳು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಟ್ವೀಟ್​ ಮಾಡಿದ್ದಾರೆ.

    ದೇಶದ ಮೊದಲ ಸಿಡಿಎಸ್ ಆಗಿ ನೇಮಕವಾಗಿರುವ ಜನರಲ್ ಬಿಪಿನ್ ರಾವತ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಆಧುನಿಕ ಸಮರ ನೀತಿಗೆ ತಕ್ಕಂತೆ ಇಂದಿನ ಜಾಗತಿಕ ಅಗತ್ಯಕ್ಕೆ ತಕ್ಕಂತೆ ಸೇನೆಯಲ್ಲೂ ಸುಧಾರಣೆಗಳು ಆಗಬೇಕಾಗಿವೆ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ದೇಶದ ಸೇನಾ ಪಡೆಯನ್ನು ಆಧುನೀಕರಣಗೊಳಿಸುವ ಮಹತ್ವದ ಹೊಣೆಗಾರಿಕೆ ಸಿಡಿಎಸ್ ಮೇಲಿದೆ. ಅಲ್ಲದೆ, 130 ಕೋಟಿ ದೇಶವಾಸಿಗಳ ನಿರೀಕ್ಷೆಯೂ ಅವರ ಹೆಗಲೇರಿದೆ.ಭಾರತೀಯ ಸೇನೆಯ ಮಟ್ಟಿಗೆ ಇದೊಂದು ಐತಿಹಾಸಿಕ ದಿನ. ಅದರ ಸುಧಾರಣೆಗೆ ಇದು ಆರಂಭ ಎಂದು ಹೇಳಿದ್ದಾರೆ.

    ಜನರಲ್ ರಾವತ್ ಅವರು ಬುಧವಾರ ಸಿಡಿಎಸ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.ಅವರ ಸೇವಾವಧಿಯನ್ನು ಮೂರು ವರ್ಷ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸಿಡಿಎಸ್ ಹುದ್ದೆಯ ಹೊಣೆಗಾರಿಕೆ ನಿಭಾಯಿಸುವ ಸಲುವಾಗಿಯೇ ಕೇಂದ್ರ ಸರ್ಕಾರ ಈ ಸೇವಾವಧಿ ವಿಸ್ತರಣೆ ಮಾಡಿರುವಂಥದ್ದು.

    ಜನರಲ್ ರಾವತ್ ಅವರನ್ನು ಸಿಡಿಎಸ್ ಆಗಿ ನೇಮಕ ಮಾಡಿರುವ ಸರ್ಕಾರದ ಕ್ರಮವನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸಿವೆ. ವಿಶೇಷವಾಗಿ ಕಾಂಗ್ರೆಸ್​ ಪಕ್ಷ ಇದನ್ನು ಕಟುವಾಗಿ ಟೀಕಿಸಿದ್ದು, ಸರ್ಕಾರ ತಪ್ಪು ಹೆಜ್ಜೆ ಇರಿಸಿದೆ ಎಂದು ಹೇಳಿದೆ.

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts