ಶಿವಮೊಗ್ಗ: ಮಕ್ಕಳೆದೆಯಲ್ಲಿ ಸಂಸ್ಕಾರದಿಂದ ಹದಮಾಡಿ ಅಕ್ಷರವನ್ನು ಬಿತ್ತಿ ಸಾಕ್ಷರರನ್ನಾಗಿಸಿ. ಶಿಕ್ಷಣಕ್ಕೆ ನಮ್ಮ ಮೊದಲ ಆದ್ಯತೆಯಿದೆ. ನಮ್ಮ ಅರಿವೇ ನಮಗೆ ಗುರುವಾಗುವುದು ಎಂದು ಮಳೆಹಿರೇಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಶಿರಾಳಕೊಪ್ಪದ ಎಸ್‌ಜೆಪಿ ಗುರುಕುಲದ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ದೇಶದ ಪ್ರಗತಿಗೆ ಶಿಕ್ಷಣ ಪೂರಕ. ನಮ್ಮ ಮಕ್ಕಳು ಮುಂದಿನ ಭವಿಷ್ಯದ ರೂವಾರಿಗಳು. ಅವರಿಗೆ ಪ್ರಾಥಮಿಕ ಶಿಕ್ಷಣದಿಂದಲೇ ನಾವು ರಾಷ್ಟ್ರೀಯತೆ, ಸಾಮಾಜಿಕ ಕಳಕಳಿ ಮತ್ತು ಸಮಾಜಮುಖಿ ಬದುಕನ್ನು ಕಲಿಸಬೇಕು ಎಂದರು.
ಪ್ರತಿ ಮಗುವಿನಲ್ಲೂ ಗ್ರಹಿಸುವ ಅಂತಃಶಕ್ತಿಯಿದೆ. ಒಂದೊಂದು ಮಗುವಿನಲ್ಲೂ ಸುಪ್ತ ಪ್ರತಿಭೆ ಇರುತ್ತದೆ. ಅವರಲ್ಲಿ ಅಡಗಿದ ಪ್ರತಿಭೆ ಶಿಕ್ಷಕರು, ಪಾಲಕರ ಪರಿಶ್ರಮದಿಂದ ಅನಾವರಣವಾಗಬೇಕು. ಯಾವ ಮಗುವನ್ನೂ ನಾವು ಉಪೇಕ್ಷೆ ಮಾಡಬಾರದು. ಕೆಲಸಕ್ಕೆ ಬಾರದವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಆದರೆ ಅವರ ಸಾಮರ್ಥ್ಯ ಗುರುತಿಸಿ, ಬಳಸಿಕೊಳ್ಳುವವರ ಅಗತ್ಯವಿದೆ ಎಂದು ಹೇಳಿದರು.
ಕೇವಲ ಪಠ್ಯವೇ ಶಿಕ್ಷಣವಲ್ಲ. ಮಕ್ಕಳಿಗೆ ನಾವು ಪಠ್ಯದಾಚೆಗಿನ ಜಗತ್ತನ್ನು ಪರಿಚಯಿಸಬೇಕು. ಈ ಮಣ್ಣಿನ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಆಚಾರ, ವಿಚಾರಗಳು, ಸಂಪ್ರದಾಯಗಳು ಜಗಮಾನ್ಯವಾಗಿವೆ. ಅವುಗಳನ್ನು ನಮ್ಮ ಮಕ್ಕಳಿಗೆ ನಾವು ಪರಿಚಯಿಸಬೇಕು. ಪರಿಶುದ್ಧವಾದ ಮನಸು ಮಕ್ಕಳದಾಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರಬೇಕು ಎಂದರು.
ನೂರು ಬಾರಿ ರಕ್ತದಾನ ಮಾಡಿ ಪುರಸ್ಕೃತರಾದ ಮಧುರಾ ಅಶೋಕ್‌ಕುಮಾರ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಜೆಪಿ ಪಾಲಿಟೆಕ್ನಿಕ್ ಸಂಸ್ಥೆ ಕಾರ್ಯದರ್ಶಿ ಡಾ. ಮುರುಘರಾಜ್, ಶಾಲೆ ವ್ಯವಸ್ಥಾಪಕಿ ಸುಮಾವಾಣಿ, ನಿರ್ದೇಶಕರಾದ ಗಂಗಮ್ಮ, ನಿವೇದಿತಾ ರಾಜು, ಸುನಂದಮ್ಮ, ಲತಾ ಯೋಗಿರಾಜ್, ಪುಟ್ಟರಾಜ ಗೌಡ, ಲಿಂಗರಾಜ್, ರಾಮನ ಗೌಡ, ಐಟಿಐ ಪ್ರಾಚಾರ್ಯ ವೆಂಕಟೇಶ್, ಶಿವಕುಮಾರ್, ರೋಹಿಣಿ ಇದ್ದರು.
ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ವೇದಿಕೆ ಕಲ್ಪಿಸಿ

You Might Also Like
ಬೇಸಿಗೆಯಲ್ಲಿ ಈ ಜ್ಯೂಸ್ ಕುಡಿದರೆ, ಸುಡುವ ಸೂರ್ಯ ಕೂಡ ನಿಮ್ಮನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ! summer
summer: ಸಾಮಾನ್ಯವಾಗಿ ಮಾರ್ಚ್ ಅಂತ್ಯದಿಂದ ಏಪ್ರಿಲ್, ಮೇ ಮತ್ತು ಜೂನ್ ವರೆಗೆ ಸೂರ್ಯನು ಪ್ರಕಾಶಮಾನವಾಗಿ ಬೆಳಗುತ್ತಾನೆ. …
ಕಾಲುಗಳ ಮಧ್ಯೆ ದಿಂಬು ಇಟ್ಟುಕೊಂಡು ಮಲಗುತ್ತೀರಾ? ಪ್ರಯೋಜನಗಳಿವೆ.. ನೀವು ಟ್ರೈ ಮಾಡಿ ನೋಡಿ.. Sleeping With Pillow Between Legs
Sleeping With Pillow Between Legs : ನಿದ್ದೆ ಮಾಡುವಾಗ ಪ್ರತಿಯೊಬ್ಬರಿಗೂ ವಿಭಿನ್ನ ಅಭ್ಯಾಸಗಳಿರುತ್ತವೆ. ಕೆಲವರು…
ಪ್ರತಿದಿನ ರೇಷನ್ ಅಕ್ಕಿ ತಿಂದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ! Ration Rice
Ration Rice : ಪ್ರತಿ ಕೆಜಿಗೆ ಕೇವಲ ಒಂದು ರೂಪಾಯಿಗೆ ಮಾರಾಟವಾಗುವ ಅಥವಾ ಸರ್ಕಾರ ಉಚಿತವಾಗಿ…