ಕಲಾದಗಿ: ದೇಶದ ಗಡಿ ಕಾಯವ ಸೈನಿಕರು, ಅನ್ನ ಹಾಕುವ ರೈತರು ಮಾಡುವ ಸೇವೆಯಷ್ಟೇ ವಿವಿಧ ವಲಯಗಳಲ್ಲಿ ಕಾಯಕ ಮಾಡುವ ಕಾರ್ಮಿಕರ ಸೇವೆಯೂ ಮುಖ್ಯವಾಗಿದೆ ಎಂದು ಸ್ಥಳೀಯ ಕಲೆ ಮತ್ತು ಸಾಂಸ್ಕೃತಿಕ ರಕ್ಷಣಾ ವೇದಿಕೆ ಅಧ್ಯಕ್ಷ ಮಲ್ಲಪ್ಪ ಜಮಖಂಡಿ ಹೇಳಿದರು.

ಗ್ರಾಮದ ಬಯಲು ರಂಗಮಂದಿರದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಸ್ಥಳೀಯ ಕಟ್ಟಡ ಕಾರ್ಮಿಕರ ಸಂಘ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕರು ಕೆಟ್ಟ ಚಟಗಳಿಗೆ ಬಲಿಯಾಗದೆ ಜೀವನವನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು. ಮುಖ್ಯವಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸರ್ಕಾರ ನೀಡಿರುವ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ಶಂಕರ ರಾಠೋಡ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಮೆಹಬೂಬ ನದಾಫ್, ಉಪಾಧ್ಯಕ್ಷ ಮಂಜುನಾಥ ಪಾತ್ರೋಟ, ಮಲ್ಲಿಕಸಾಬ ರಾಜಪಗೋಳ, ಕಾರ್ಯದರ್ಶಿ ವೆಂಕಟೇಶ ಪಾತ್ರೋಟ, ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಉಪಾಧ್ಯಕ್ಷ ರಮೇಶ ಮಾದರ, ಹನುಮಂತದ ಗದ್ದನಕೇರಿ, ಬುಡ್ಡೇಸಾವ ಜೈನಾಪುರ, ಯಲ್ಲಪ್ಪ ಆಡಗಲ್ ಮತ್ತಿತರರಿದ್ದರು.
TAGGED:ಕಲಾದಗಿ