ಕುಕ್ಕರಹಳ್ಳಿ ಕೆರೆ ಏರಿಯಲ್ಲಿ ಬಿರುಕು!

ಮೈಸೂರು: ವಾಯುವಿಹಾರಿಗಳ ನೆಚ್ಚಿನ ತಾಣವಾಗಿರುವ ಕುಕ್ಕರಹಳ್ಳಿ ಕೆರೆ ಏರಿಯ ಪಾದಚಾರಿ ಮಾರ್ಗದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಸರ್ಕಾರಿ ಮುದ್ರಣಾಲಯದ ಎದುರಿನ ಕೆರೆಯ ಬೋಟಿಂಗ್ ಪಾಯಿಂಟ್ ಸಮೀಪದ ರಸ್ತೆಯಲ್ಲಿ ಈ ಬಿರುಕು ಕಾಣಿಸಿಕೊಂಡಿದ್ದು, ಸಂಚಾರ ಮಾಡಲು ಭಯದ ವಾತಾವರಣ ಉಂಟಾಗಿದೆ. ಈ ಹಿಂದೆ ಇಲ್ಲಿ ದೊಡ್ಡ ಪೈಪ್‌ಲೈನ್‌ಗಾಗಿ ರಸ್ತೆ ಅಗೆದಿದ್ದು, ಎರಡು, ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಮಣ್ಣು ಕುಸಿದಿದೆ. ಸುಮಾರು ಮುಕ್ಕಾಲು ಅಡಿಯಷ್ಟು ಅಗಲ, ಎರಡರಿಂದ ಮೂರು ಅಡ್ಡಿಯಷ್ಟು ಆಳಕ್ಕೆ ಮಣ್ಣು ಕುಸಿದಿದೆ.

ಇದನ್ನು ಹೀಗೆಯೇ ಬಿಟ್ಟರೆ ಕೆರೆ ಏರಿಗೆ ಅಪಾಯವಾಗುವ ಸಾಧ್ಯತೆ ಇರುವುದರಿಂದ ತಕ್ಷಣವೇ ಮೈಸೂರು ವಿಶ್ವವಿದ್ಯಾಲಯ ಇತ್ತ ಗಮನ ಹರಿಸಿ ದುರಸ್ತಿಗೊಳಿಸಬೇಕು ಎಂದು ವಾಯು ವಿಹಾರಿಗಳು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *