ಫೆಡರರ್​ ಗೋಮಾತೆ ಪ್ರೇಮ- ಸೆಹವಾಗ್ ಟ್ವಿಟ್ಟರ್​ನಲ್ಲಿ ಬಹಿರಂಗ!

ಮುಂಬೈ: ಇತ್ತ ಭಾರತದಲ್ಲಂತೂ ಇತ್ತೀಚೆಗೆ ಗೋಮಾತೆ/ ಗೋಹತ್ಯೆ ವಿಚಾರ ಪ್ರಮುಖವಾಗಿದೆ. ಅದರ ಸುತ್ತನೇ ವಿಚಾರ/ವಿಕಾರಗಳು ಜೋರಾಗಿ ಹರಿದಾಡುತ್ತಿವೆ. ಈ ಮಧ್ಯೆ, ಗೋ ಪ್ರೇಮಿಗಳಿಗೆ ಇಂಬು ಕೊಡುವಂತೆ ಟೆನಿಸ್​ ಲೋಕದ ದಿಗ್ಗಜ ರೋಜರ್​ ಫೆಡರರ್​​ ಕಡೆಯಿಂದ ಸುವಾರ್ತೆಯೊಂದು ಹರಿದುಬಂದಿದೆ.

ಫೆಡರರ್​ ಗೋ ಪ್ರೇಮಕ್ಕೆ ನಮೋ ನಮಃ

ಟೆನಿಸ್​​ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ದಾಖಲೆಯ 19ನೇ ಗ್ರ್ಯಾಂಡ್​​ ಸ್ಲಾಮ್​ ಹಾಗೂ 8ನೇ ವಿಂಬಲ್ಡನ್​ ಪ್ರಶಸ್ತಿ ಮುಡಿಗೇರಿಸಿಕೊಂಡು ರೋಜರ್​ ಫೆಡರರ್ ತನ್ನ ನೆಚ್ಚಿನ ಗೋ ಮಾತೆಯೊಂದಿಗೆ ಸಂಭ್ರಮಿಸುತ್ತಿರುವ ಚಿತ್ರವನ್ನು ವಿರೇಂದ್ರ ಸೆಹ್ವಾಗ್​ ಟ್ವೀಟ್ ಮಾಡಿದ್ದಾರೆ.

ಪ್ರತಿ ಬಾರಿಯೂ ತನ್ನ ಗೆಲುವಿನ ನಂತರ ಈ ಎರಡು ಮುದ್ದಾದ ಹಸುಗಳೊಂದಿಗೆ ರೋಜರ್​​ ಸಂಭ್ರಮಿಸುವುದು ರೂಢಿಯಂತೆ. ಈ ಸಂಭ್ರಮದಲ್ಲಿ ನಾವೂ ಭಾಗಿ ಎಂಬಂತೆ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ.

2003ರಲ್ಲಿ ಸ್ವಿಸ್​ ಓಪನ್​ ಟೆನಿಸ್​ನಲ್ಲಿ ಗೆಲುವು ದಾಖಲಿಸಿದಕ್ಕಾಗಿ ಇವರಿಗೆ ಎರಡು ಹಸುಗಳನ್ನು ನೀಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಅವರು ಈ ಹಸುಗಳೊಂದಿಗೆ ಬಾಂಧವ್ಯ ಹೊಂದಿದ್ದಾರೆ.

ಸೆಹ್ವಾಗ್​ ಟ್ವೀಟ್ ಅರ್ಥಗರ್ಭಿತ:

ಇತ್ತೀಚೆಗೆ ನಮ್ಮ ದೇಶದಲ್ಲಿ ಗೋ ಹತ್ಯಾ ನಿಷೇಧ ಕಾನೂನಿಗೆ ಕೆಲವರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಉತ್ತರವೆಂಬಂತೆ ಸೆಹ್ವಾಗ್​ ಟ್ವೀಟ್ ಮಾಡಿರುವುದು ಅರ್ಥಗರ್ಭಿತವಾಗಿದೆ. ಗೋವಿಗೆ ಭಾರತದಲ್ಲಿ ಪೂಜ್ಯನೀಯ ಸ್ಥಾನವಿದೆ ಎಂದು ಗೋ ಹಂತಕರತ್ತ ಚಾಟಿ ಬೀಸಿದ್ದಾರೆ.

ಇದೇ ವೇಳೆ ಇನ್ನೂ ಅನೇಕರು ಸೆಹ್ವಾಗ್​ ಟ್ವೀಟ್/ ಫೆಡರರ್ ಗೋ ಪ್ರೇಮದ ಬಗ್ಗೆ ಅರ್ಥವತ್ತಾದ ಟ್ವೀಟ್​ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಏನೇ ಆದರೂ ದೂರದ ಫೆಡರರ್​ ಅವರ ಹಸು ಪ್ರೇಮ ನಮೋ ನಮಃ ಅನ್ನುವಂತಹದೇ ಸರಿ.

 

https://twitter.com/AaliaAilaa/status/887317193481789441

Leave a Reply

Your email address will not be published. Required fields are marked *