COVID19 ಚಿಕಿತ್ಸೆ: ಆಸ್ಪತ್ರೆಗಳ ವಿವರ ಇನ್ನು ವೆಬ್​ಸೈಟ್​ನಲ್ಲಿ ಲಭ್ಯ

ಬೆಂಗಳೂರು: ಮುಖ್ಯಮಂತ್ರಿ ತರಾಟೆ ನಂತರ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು, ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆಗಾಗಿ ಮೀಸಲಿಟ್ಟಿರುವ ಹಾಸಿಗೆಗಳ ವಿವರ ಪ್ರಕಟಿಸಿದ್ದಾರೆ. ಅದರಂತೆ ಒಟ್ಟು 5,859 ವಿವಿಧ ಬಗೆಯ ಹಾಸಿಗೆಗಳನ್ನು ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಆದರೆ, ಈವರೆಗೆ ಖಾಸಗಿ ಆಸ್ಪತ್ರೆಗಳು ಎಷ್ಟು ಹಾಸಿಗೆಗಳನ್ನು ಸೋಂಕಿತರಿಗೆ ಚಿಕಿತ್ಸೆ ನೀಡಲು ಕಾಯ್ದಿರಿಸಿವೆ ಎಂಬ ಸಮರ್ಪಕ ಮಾಹಿತಿ ದೊರೆತಿರಲಿಲ್ಲ. … Continue reading COVID19 ಚಿಕಿತ್ಸೆ: ಆಸ್ಪತ್ರೆಗಳ ವಿವರ ಇನ್ನು ವೆಬ್​ಸೈಟ್​ನಲ್ಲಿ ಲಭ್ಯ