ನವದೆಹಲಿ: ಈಗಾಗಲೇ ಕೆಲವು ಷರತ್ತುಗಳ ಮೇಲೆ ನೀಡಲಾಗುತ್ತಿದ್ದ ಕೋವಿಡ್ ಬೂಸ್ಟರ್ ಡೋಸ್ ಇನ್ನುಮುಂದೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಭ್ಯವಾಗಲಿದೆ. ಈ ಕುರಿತು ಕೇಂದ್ರ ಸರ್ಕಾರ ಶುಕ್ರವಾರ ಮಾಹಿತಿ ನೀಡಿದೆ.
ಹೊಸ ವೇರಿಯಂಟ್ ಎಕ್ಸ್ಇ ಯುಕೆನಲ್ಲಿ ಹೆಚ್ಚಾಗಿದ್ದು, ಭಾರತದಲ್ಲೂ ವರದಿಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಕೋವಿಡ್ ಬೂಸ್ಟರ್ ಡೋಸ್ ವಯಸ್ಕರೆಲ್ಲರಿಗೂ ಕೊಡಲು ತೀರ್ಮಾನಿಸಿದೆ.
ಒಮಿಕ್ರಾನ್ ವೇರಿಯಂಟ್ ಕಾಣಿಸಿಕೊಂಡ ಬಳಿಕ ಬೂಸ್ಟರ್ ಡೋಸ್ ನೀಡಲು ಆರಂಭಿಸಲಾಗಿತ್ತು. ಆದರೆ ಅದು ಆರೋಗ್ಯ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರಿಗೆ ಮಾತ್ರ ಸೀಮಿತವಾಗಿತ್ತು. ಇದುವರೆಗೆ ಒಟ್ಟು 2.4 ಕೋಟಿಗೂ ಅಧಿಕ ಬೂಸ್ಟರ್ ಡೋಸ್ ನೀಡಲಾಗಿದೆ. ಇದೀಗ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ಕೊಡಲು ನಿರ್ಧರಿಸಲಾಗಿದ್ದು, ಏ.10ರಿಂದ ಬೂಸ್ಟರ್ ಡೋಸ್ ಲಸಿಕೀಕರಣ ಆರಂಭವಾಗಲಿದೆ.
ಅಡವಿಟ್ಟ ಚಿನ್ನ ಕೊಡಲ್ಲ ಎಂದ ಅಧಿಕಾರಿ; ಬ್ಯಾಂಕ್ ಎದುರೇ ವಿಷ ಕುಡಿಯಲು ಮುಂದಾದ ರೈತ
ಭೀಕರ ಅಪಘಾತ; ಮಗುಚಿ ಬಿದ್ದ ಲಾರಿ, ಒಬ್ಬ ಸ್ಥಳದಲ್ಲೇ ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ..