ಕರೊನಾ ಸೋಂಕಿಗೆ ಕಲಬುರಗಿಯಲ್ಲಿ ಮತ್ತೊಂದು ಬಲಿ: ರಾಜ್ಯದಲ್ಲಿ 7ಕ್ಕೆ ಏರಿದ ಸಾವಿನ ಸಂಖ್ಯೆ

ಬೆಂಗಳೂರು: ಕರೊನಾ ಸೋಂಕಿಗೆ ತುತ್ತಾಗಿ ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.  ಇವರ ಸಾವಿನಿಂದ ಕಲಬುರಗಿ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಸೋಂಕಿಗೆ ತುತ್ತಾಗಿದ್ದ 55 ವರ್ಷದ ಬಟ್ಟೆ ವ್ಯಾಪಾರಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಶರತ್​ ತಿಳಿಸಿದ್ದಾರೆ. 205ನೇ ಸಂಖ್ಯೆಯ ರೋಗಿಯಾಗಿ ಕಲಬುರಗಿ ಇಎಎಸ್​ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಕಲಬುರಗಿಯ ಮೋಮಿನ್​ ಪುರದಲ್ಲಿ ವಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಸೋಂಕಿಗೆ ಇಲ್ಲಿವರೆಗೆ 7 ಮಂದಿ ಮೃತಪಟ್ಟಿದ್ದಾರೆ. ಭಾನುವಾರ ಸಂಜೆಯಿಂದ ಸೋಮವಾರ ಬೆಳಗಿನವರೆಗೆ … Continue reading ಕರೊನಾ ಸೋಂಕಿಗೆ ಕಲಬುರಗಿಯಲ್ಲಿ ಮತ್ತೊಂದು ಬಲಿ: ರಾಜ್ಯದಲ್ಲಿ 7ಕ್ಕೆ ಏರಿದ ಸಾವಿನ ಸಂಖ್ಯೆ