ಕೇರಳ: ಖ್ಯಾತ ನಟಿ ಹನಿ ರೋಸ್ ನೀಡಿದ(ಲೈಂಗಿಕ ಕಿರುಕುಳ ಕೇಸ್) ದೂರಿನ ಮೇರೆಗೆ ಬಂಧಿತರಾಗಿದ್ದ ಕೇರಳದ ಬ್ಯೂಸಿನೆಸ್ಮ್ಯಾನ್ ಬಾಬಿ ಚೆಮ್ಮನೂರ್ಗೆ ಇಲ್ಲಿನ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕುಂಇಕೃಷ್ಣನ್ ಅವರಿದ್ದ ಪೀಠ, ಜಾಮೀನು ಮಂಜೂರು ಮಾಡುವ ವೇಳೆ ಬಾಡಿ ಶೇಮಿಂಗ್(ಯಾರನ್ನಾದರೂ ಅವರ ದೈಹಿಕ ವೈಶಿಷ್ಟ್ಯಗಳಿಗಾಗಿ ಅವಮಾನ ಮತ್ತು ಟೀಕೆಗೆ ಒಳಪಡಿಸುವ ಕ್ರಿಯೆ) ವಿರುದ್ಧ ತೀವ್ರವಾಗಿ ಟೀಕೆ ಮಾಡಿದೆ.
ಇದನ್ನೂ ಓದಿ: CNG Gas Vehicle Overturns | ಬಾಗಲಕೋಟೆ ಜಿಲ್ಲೆಯ ಆಸಂಗಿ ಕ್ರಾಸ್ ಬಳಿ ಸಿಎನ್‌ಜಿ ಗ್ಯಾಸ್ ವಾಹನ ಪಲ್ಟಿ..!
” ಬಾಡಿ ಶೇಮಿಂಗ್ ನಮ್ಮ ದೇಶದಲ್ಲಿ ಸ್ವೀಕಾರಾರ್ಹ ಅಲ್ಲ. ವ್ಯಕ್ತಿಯ ದೇಹವನ್ನು ತುಂಬಾ ದಪ್ಪಗೆ, ತೆಳ್ಳಗೆ, ಎತ್ತರ, ಕಪ್ಪು, ಉದ್ದ ಇತ್ಯಾದಿ ಕಾಮೆಂಟ್ಗಳನ್ನು ಮಾಡಬಾರದು. ಮನುಷ್ಯನ ಜೀವನದಲ್ಲಿ ಪ್ರತಿ ಸಾರಿ ಏನೊಬೇಕೋ ಎಂದು ಅನಿಸುತ್ತಲೇ ಇರುತ್ತದೆ. ಇದಕ್ಕೆ ಕೊನೆ ಇಲ್ಲ. ಇದು ಜೀವನ. ನಮ್ಮ ಮನಸ್ಸು, ದೇಹ ಬದಲಾಣೆ ಆಗುತ್ತದೆ. ಇದನ್ನು ಎಲ್ಲರೂ ತಿಳಿಯಬೇಕು ಇಂತಹ ದೈಹಿಕದ ಬಗ್ಗೆ ಕಾಮೆಂಟ್ಗಳನ್ನು ತಪ್ಪಿಸಬೇಕು” ಎಂದು ಈಪ್ರಕರಣದಲ್ಲಿ ಕೋರ್ಟ್ ಬಾಡಿ ಶೇಮಿಂಗ್ ಬಗ್ಗೆ ಟೀಕೆ ಮಾಡಿದೆ.
ಆರೋಪ ಒಪ್ಪಿಕೊಂಡರೂ ಜಾಮೀನು ನೀಡಿದ ಕೋರ್ಟ್
ಇನ್ನು ಚೆಮ್ಮನೂರ್ ಬಳಸಿರುವ ಪದಗಳು ‘ಡಬಲ್ ಮಿನಿಂಗ್’ ಎಂದು ಎಂತವರಿಗೂ ಗೊತ್ತಾಗುತ್ತದೆ. ಪಥಮ ಮಾಹಿತಿ ಹೇಳಿಕೆಗಳನ್ನು ಯಾರದರೂ ಓದಿದರೆ ಅವರಿಗೆ ತಕ್ಷಣ ಗೊತ್ತಾಗುತ್ತೆ ಇದು ಡಬಲ್ ಮಿನಿಂಗ್ ವರ್ಡ್ಸ್ ಎಂದು ಕೋರ್ಟ್ ಹೇಳಿದೆ. ಆದರೆ, ಇಂತಹ ಅಪರಾಧಗಳಿಗೆ ಗರಿಷ್ಠ ಮೂರು ವರ್ಷಗಳ ಶಿಕ್ಷೆ ಇದೆ. ಸುಪ್ರೀಂಕೋರ್ಟ್ ಮಾರ್ಗ ಸೂಚಿಗಳ ಪ್ರಕಾರ ಸಾಕಷ್ಟು ಕಾರಣಗಳಿಲ್ಲದೆ ಆರೋಪಿಗಳನ್ನು ಬಂಧಿಸಲಾಗುವುದಿಲ್ಲ. ಅಲ್ಲದೆ, ‘ಜಾಮಿನು ನಿಯಮ ಮತ್ತು ಜೈಲು ವಿನಾಯಿತಿ’ ತತ್ವದ ಅಡಿಯಲ್ಲಿ ಜಾಮೀನು ಮಂಜೂರು ಮಾಡಲಾಗಿದೆ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ಉತ್ತಮ ಆಲೋಚನೆಗಳು ವ್ಯಕ್ತಿತ್ವ ರೂಪಿಸುತ್ತವೆ
ಪ್ರಕರಣ ಹಿನ್ನೆಲೆ..
ಹನಿ ರೋಸ್ ನೀಡಿದ ದೂರಿನ ಮೇರೆಗೆ ಕೊಚ್ಚಿ ಪೊಲೀಸರು ಬಾಬಿ ಚೆಮ್ಮನೂರ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಬಳಿಕ ವಯನಾಡಿನಲ್ಲಿ ಉದ್ಯಮಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಉದ್ಯಮಿ ಬಾಬಿ ಚೆಮ್ಮನ್ನೂರ್ ವಿರುದ್ಧ ಹನಿ ರೋಸ್ ದೂರು ದಾಖಲಿಸಿದ್ದು, ಸಾಮಾಜಿಕ ಜಾಲತಾಣಗಳು ಹಾಗೂ ಇತರೆ ವೇದಿಕಗಳಲ್ಲಿ ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ನಿಂದಿಸಿದ್ದಾರೆ ಎಂದು ಹನಿ ರೋಸ್ ಆರೋಪಿಸಿದ್ದರು. ಬಾಬಿ ಚೆಮ್ಮನೂರ್ ಅವರೇ ನನ್ನ ವಿರುದ್ಧ ನೀವು ಮಾಡಿದ ನಿರಂತರ ಅಶ್ಲೀಲ ನಿಂದನೆಗಳ ವಿರುದ್ಧ ನಾನು ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನಿಮ್ಮಂತೆಯೇ ಮಾನಸಿಕ ಸ್ಥಿತಿ ಹೊಂದಿರುವ ನಿಮ್ಮ ಸಹಚರರ ವಿರುದ್ದವೂ ದೂರುಗಳು ದಾಖಲಾಗಿವೆ. ನೀವು ನಿಮ್ಮ ಹಣವನ್ನು ನಂಬುತ್ತೀರಿ, ಆದರೆ, ನಾನು ಭಾರತದಲ್ಲಿನ ಕಾನೂನು ವ್ಯವಸ್ಥೆಯನ್ನು ನಂಬುತ್ತೇನೆ ಎಂದು ಹನಿ ರೋಸ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ: ಪರ್ಫ್ಯೂಮ್ ಬಳಸುವುದರಿಂದ ಉಸಿರಾಟ ಸಮಸ್ಯೆ ಉಂಟಾಗುತ್ತದೆ ಹುಷಾರ್!..Perfume Harmful Effects
ಇದೇ ವೇಳೆ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಬಿ ಚೆಮ್ಮನೂರು, ಹನಿ ರೋಸ್ ವಿರುದ್ದ ಯಾವುದೇ ಡಬಲ್ ಮೀನಿಂಗ್ ಅಥವಾ ದುರುದ್ದೇಶಪೂರಿತ ಭಾಷಣವನ್ನು ಮಾಡಿಲ್ಲ. ನಾನು ಹೇಳಿದನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿರುಚಲಾಗಿದೆ ಎಂದು ಹೇಳಿದ್ದಾರೆ.(ಏಜೆನೀಸ್)
ಊಟದಲ್ಲಿ ಟೊಮ್ಯಾಟೋ, ಸೌತೇಕಾಯಿಗಿಲ್ಲ ಜಾಗ: ಇದೇ ನೋಡಿ ನಟಿ ರಶ್ಮಿಕಾ ಬ್ಯೂಟಿ ಹಿಂದಿನ ರಹಸ್ಯ! Rashmika Mandanna