More

    ‘ಸಾಗರ ಮಾಲಾ’ ಯೋಜನೆಯಡಿ ಕಾರವಾರ ಬಂದರು ಕಾಮಗಾರಿಗೆ ಕೋರ್ಟ್ ತಡೆ 

    ಬೆಂಗಳೂರು: ‘ಸಾಗರ ಮಾಲಾ’ ಯೋಜನೆಯಡಿ ಕಾರವಾರ ಬಂದರಿನ 2ನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಮಧ್ಯಂತರ ತಡೆ ನೀಡಿರುವ ಹೈಕೋರ್ಟ್, ಕಡಲತೀರದ ಮಧ್ಯೆ ನಿರ್ವಿುಸಿರುವ ದಾರಿ ಹಾಗೂ ಇತರ ನಿರ್ಮಾಣ ನೆಲಸಮಗೊಳಿಸಿ ಬಂದರು ಪ್ರದೇಶವನ್ನು ಮೊದಲಿನ ಸ್ಥಿತಿಗೆ ತರುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

    ಉತ್ತರ ಕನ್ನಡ ಜಿಲ್ಲೆಯ ‘ಬೈತಖೋಲ ಬಂದರು ನಿರಾಶ್ರಿತರ ಯಾಂತ್ರಿಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆಐ

    ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು. ಕೆಲಕಾಲ ವಾದ ಆಲಿಸಿದ ಪೀಠ, ಕಾಮಗಾರಿಗೆ ಮಧ್ಯಂತರ ತಡೆಯಾಜ್ಞೆ ನೀಡಿತಲ್ಲದೆ, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಕಡಲತೀರದ (ಬೀಚ್) ಮಧ್ಯೆ ನಿರ್ವಿುಸಿರುವ ದಾರಿ ಹಾಗೂ ಇತರ ನಿರ್ವಣವನ್ನು ನೆಲಸಮಗೊಳಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು.

    ಪ್ರತಿವಾದಿಗಳಾದ ಕರ್ನಾಟಕ ಕಡಲ ಮಂಡಳಿಯ ಸಿಇಒ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ನಿರ್ದೇಶಕ, ಉತ್ತರ ಕನ್ನಡ ಜಿಲ್ಲಾಧಿಕಾರಿ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಖಾಸಗಿ ಸಂಸ್ಥೆಯಾದ ಡಿವಿಪಿ ಇನ್ಪ್ರಾ ಪ್ರಾಜೆಕ್ಟ್ಸ್ ಪ್ರೖೆವೇಟ್ ಲಿಮಿಟೆಡ್​ಗೆ ನೋಟಿಸ್ ಜಾರಿಗೊಳಿಸಿದ ಪೀಠ, ವಿಚಾರಣೆಯನ್ನು ಫೆ.26ಕ್ಕೆ ಮುಂದೂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts