More

    ಅಂಗಾಂಗ ದಾನ ಅರಿವು ಮೂಡಿಸಲು 43 ದೇಶ ಸುತ್ತಿದ ದಂಪತಿ

    ವಾಷಿಂಗ್ಟನ್ : ಭಾರತ ಮೂಲದ ಅಮೆರಿಕ ಉದ್ಯಮಿ ಹಾಗೂ ಅವರ ಪತ್ನಿ ಬರೋಬ್ಬರಿ 43 ದೇಶಗಳನ್ನು ಸುತ್ತಿ ಅಂಗಾಗ ದಾನದ ಬಗ್ಗೆ ಅರಿವು ಮೂಡಿಸಿ ವಿಶೇಷ ಸಾಹಸ ತೋರಿದ್ದಾರೆ.

    2014ರಲ್ಲಿ ತಮ್ಮ ಸಹೋದರನಿಗೆ ಕಿಡ್ನಿ ದಾನ ಮಾಡಿದ್ದ ಅನಿಲ್ ಶ್ರೀವತ್ಸ, ತಮ್ಮ ಪತ್ನಿ ದೀಪಾಲಿ ಜತೆ ಸೇರಿ 43 ದೇಶಗಳನ್ನು ಸುತ್ತಿ ಅಂಗಾಗ ದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಶ್ರೀವತ್ಸ ದಂಪತಿ ಒಟ್ಟು 400 ದಿನಗಳನ್ನು ಪ್ರಯಾಣದಲ್ಲಿ ಕಳೆದಿದ್ದು, ಸುಮಾರು 1 ಲಕ್ಷ ಕಿ.ಮೀ. ಹಾದಿ ಕ್ರಮಿಸಿದ್ದಾರೆ. ಈ ಸಂದರ್ಭದಲ್ಲಿ 73 ಸಾವಿರಕ್ಕೂ ಹೆಚ್ಚು ಜನರನ್ನು ಭೇಟಿಯಾಗಿದ್ದಾರೆ.

    ‘ಅಂಗಾಗ ದಾನ ಮಾಡುವುದು ಅಥವಾ ಅಗತ್ಯವಿರುವ ಅಪರಿಚಿತರಿಗೆ ಸಹಾಯ ಮಾಡಲು ಇರುವ ಏಕೈಕ ಕಾರಣವೆಂದರೆ ಪ್ರೀತಿ ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ‘ಗಿಫ್ಟ್ ಆಫ್ ಲೈಫ್ ಅಡ್ವೆಂಚರ್’ ಮೂಲಕ ಅಂಗಾಗ ದಾನದ ಅರಿವು ಮೂಡಿಸುವ ಕಾರ್ಯಕ್ರಮ ಪ್ರಾರಂಭಿಸಿದೆ’ ಎಂದು ಶ್ರೀವತ್ಸ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts