‘ನವಜಾತ’ನ ಆಗಮನವನ್ನು ಸಂಭ್ರಮಿಸಿದ ದಂಪತಿ, ಕೆಲವೇ ನಿಮಿಷಗಳಲ್ಲಿ ಅದನ್ನು ಕತ್ತರಿಸಿ, ಬೇಯಿಸಿ ತಿಂದರು!

ನವದೆಹಲಿ: ಅದು ಯಾವುದೇ ದೇಶವಾಗಿರಲಿ. ನವಜಾತ ಶಿಶುವಿನ ಆಗಮನ ಒಂದು ಸಂಭ್ರಮವನ್ನು ಮೂಡಿಸುವುದು ಸುಳ್ಳಲ್ಲ. ಅದರಂತೆ ಈ ದಂಪತಿ ಕೂಡ ನವಜಾತನ ಆಗಮನವನ್ನು ಸಂಭ್ರಮಿಸಿದರು. ಫೋಟೋಶೂಟ್​ ಅನ್ನೂ ಮಾಡಿದರು. ಬಳಿಕ ಅದನ್ನು ಕತ್ತರಿಸಿ, ಬೇಯಿಸಿ ತಿಂದರು!

ಹೌದು. ನಾವಿಲ್ಲಿ ಮಾತನಾಡುತ್ತಿರುವುದು ನವಜಾತ ಮಗು ಅಥವಾ ಯಾವುದಾದರೂ ಪ್ರಾಣಿಯ ಮರಿ ಬಗ್ಗೆ ಅಲ್ಲ. ಬದಲಿಗೆ ಸೌತೆಕಾಯಿಯನ್ನು ಹೋಲುವ ಜುಕಿನಿ ಎಂಬ ತರಕಾರಿಯ ಬಗ್ಗೆ!

ವಿದೇಶದಲ್ಲಿ ಅತಿಹೆಚ್ಚು ಕಂಡುಬರುವ ಜುಕಿನಿಯನ್ನು ಜೆನ್​ ಸ್ಪೇನ್​ ಮತ್ತಾಕೆಯ ಪತಿ ತಮ್ಮ ಕೈತೋಟದಲ್ಲಿ ಬೆಳೆದಿದ್ದರು. ಜುಕಿನಿ ಸಾಮಾನ್ಸಾಯವಾಗಿ ಅರ್ಧ ಕೆಜಿ ಬೆಳೆಯುತ್ತದೆ. ಆದರೆ, ಜೆನ್​ ಸ್ಪೇನ್​ ಅವರ ಕೈತೋಟದಲ್ಲಿ ಬೆಳೆದಿದ್ದ ಜುಕಿನಿ 2 ಕೆಜಿ ಇತ್ತು. ನೋಡಲು ಅದು ನವಜಾತ ಶಿಶುವಿನ ಗಾತ್ರದಲ್ಲಿತ್ತು.

ತಕ್ಷಣವೇ ದಂಪತಿಯ ಮನದಲ್ಲಿ ನವಜಾತಶಿಶು ಜನಿಸಿದ ಸಂದರ್ಭದಲ್ಲಿ ಮಾಡಲಾಗುವ ಫೋಟೋಶೂಟ್​ ನೆನಪಾಗಿ, ಜುಕಿನಿಗೂ ಫೋಟೋಶೂಟ್​ ಮಾಡಲು ನಿರ್ಧರಿಸಿದರು. ಅದರಂತೆ ಶಿಶುವಿನ ಬ್ಲಾಂಕ್ಲೆಟ್​ ನಲ್ಲಿ ಅದನ್ನು ಇರಿಸಿ, ನವಜಾತಶಿಶುವಿನ ರೀತಿಯನ್ನು ಅದನ್ನು ಎದೆಗವಚಿಕೊಂಡ ಜೆನ್​, ಫೋಟೋಶೂಟ್​ ಮಾಡಿಸಿಕೊಂಡರು. ಬಳಿಕ ಜುಕಿನಿಯನ್ನು ಸಣ್ಣದಾಗಿ ಕತ್ತರಿಸಿ, ಬೇಯಿಸಿಕೊಂಡು ಹೊಟ್ಟೆ ತುಂಬಿಸಿಕೊಂಡರು.
ಈ ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

ಈ ಪೋಸ್ಟ್​ ಅನ್ನು ನೋಡಿದವರೆಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗುತ್ತಾ, ತಾವೂ ಶೇರ್​ ಮಾಡುತ್ತಿದ್ದಾರೆ.
ಜುಕಿನಿ ಎಂಬುದು ಬೇಸಿಗೆಯ ಕಾಲದಲ್ಲಿ ಅತಿಹೆಚ್ಚು ಕಂಡುಬರುವ ತರಕಾರಿ. ಗಾಢ ಹಸಿರು ಬಣ್ಣ ಹೊಂದಿರುವ ಇದು ನೋಡಲು ಸೌತೆಕಾಯಿಯಂತೆ ಕಾಣುತ್ತದೆ. ಆದರೆ ಸೌತೆಕಾಯಿಯ ರೀತಿ ಹಸಿಯಾಗಿ ತಿನ್ನಲಾಗದು. ಅದನ್ನು ಕತ್ತರಿಸಿ, ಬೇಯಿಸಿಕೊಂಡು ತಿನ್ನುತ್ತಾರೆ. ತುಂಬಾ ಮೃದುವಾಗಿ, ಸಿಹಿಯಾಗಿರುವ ಇದು ತುಂಬಾ ಬೇಗನೆ ಬೆಂದುಬಿಡುತ್ತದೆ. ಇದನ್ನು ಬಳಸಿ ಉಪ್ಪಿನಕಾಯಿಯನ್ನೂ ಹಾಕುತ್ತಾರಂತೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *