ಧಾರವಾಡ ಕಟ್ಟಡ ಕುಸಿತ: ನಾಲ್ಕು ದಿನಗಳ ಬಳಿಕ ಅವಶೇಷಗಳಡಿ ಸಿಲುಕಿದ್ದ ದಂಪತಿ ರಕ್ಷಣೆ

ಧಾರವಾಡ: ಕಳೆದ ಮಂಗಳವಾರ ಕುಸಿದಿದ್ದ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ದಂಪತಿಯನ್ನು ಸತತ ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ.

ಶುಕ್ರವಾರ ಬೆಳಗ್ಗೆ ದಿಲೀಪ್​ ಮತ್ತು ಸಂಗೀತಾ ದಂಪತಿ ಸಿಲುಕಿರುವ ಜಾಗ ಪತ್ತೆಯಾಗಿತ್ತು. ಆದರೆ ಅವರು ಇರುವ ಜಾಗದಲ್ಲಿ ಅಲುಗಾಡಲೂ ಸ್ಥಳವಿರಲಿಲ್ಲ ಮತ್ತು ಗೋಡೆ ಅಡ್ಡ ಇತ್ತು. ಹಾಗಾಗಿ ಅವರಿಗೆ ಆಮ್ಲಜನಕವನ್ನು ಪೂರೈಕೆ ಮಾಡಿ ಗೋಡೆ ಒಡೆಯುವ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು.

ಅಗ್ನಿಶಾಮಕ ದಳ ಮತ್ತು ಎನ್​ಡಿಆರ್​ಎಫ್​ ಸಿಬ್ಬಂದಿ ಸತತ 5 ಗಂಟೆ ಕಾರ್ಯಾಚರಣೆ ನಡೆಸಿ ದಂಪತಿಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.