More

    ಮದುವೆಯಾಗದೆ ವರ್ಷಗಟ್ಟಲೆ ಒಟ್ಟಿಗೇ ಇದ್ರು, ಪರಸ್ಪರ ದೂರ ದೂರವಿದ್ದು ಅಧಿಕೃತ ಮದುವೆಯಾದ್ರು… ಹೀಗೂ ಆಗತ್ತೆ ವಿವಾಹ ನೋಡಿ!

    ನ್ಯೂಯಾರ್ಕ್​: ಲಾಕ್​ಡೌನ್​ ಅದೆಷ್ಟೋ ವಧು-ವರರ ಕನಸುಗಳನ್ನು ಕಸಿದುಕೊಂಡುಬಿಟ್ಟಿದೆ. ಏಕೆಂದರೆ ಈ ಅವಧಿಯಲ್ಲಿ ನಿಗದಿಯಾದ ಹಲವಾರು ಮದುವೆಗಳು ಪೋಸ್ಟ್​ಪೋನ್​ ಆಗಿವೆ. ಲಾಕ್​ಡೌನ್​ ಇದ್ದರೂ ಕೇರೇ ಮಾಡದೇ ಮದುವೆಯಾಗುವ ಧೈರ್ಯ ತೋರಿರುವ ಕೆಲವು ಮಂದಿ ಪೊಲೀಸರ ಅತಿಥಿಯಾಗಿದ್ದಾರೆ! ಇನ್ನು ಕೆಲವೆಡೆ ಲಾಕ್​ಡೌನ್​ ನಿಯಮ ಅನುಸರಿಸಿ, ಪೊಲೀಸರ ಒಪ್ಪಿಗೆ ಪಡೆದು ಸರಳ ವಿವಾಹವಾದವರೂ ಇದ್ದಾರೆ.

    ಇವೆಲ್ಲವುಗಳ ನಡುವೆ ಇನ್ನೊಂದು ರೀತಿಯ ವಿವಾಹ ಲಾಕ್​ಡೌನ್​ ಟ್ರೆಂಡ್​ ಆಗಿದೆ. ಅದೇ ಡಿಜಿಟಲ್​ ಯುಗದ ವೈಶಿಷ್ಟ್ಯ. ಇಂಟರ್​ನೆಟ್​ ವಿವಾಹ ಇದೀಗ ಹಲವು ಕಡೆಗಳಲ್ಲಿ ನಡೆದಿವೆ. ಇಟ್ಟ ಮುಹೂರ್ತದಲ್ಲಿಯೇ ಮದುವೆಯಾಗಲು ಇಂಟರ್​ನೆಟ್​ ಮೊರೆ ಹೋಗಿದ್ದಾರೆ ಹಲವರು. ವಧು ಒಂದೆಡೆ, ವರ ಇನ್ನೊಂದೆಡೆ ನಡುವೆ ಕಂಪ್ಯೂಟರ್​. ಇದಕ್ಕಾಗಿಯೇ ವಿವಾಹ ಆ್ಯಪ್​ಗಳೂ ಸಾಕಷ್ಟು ಲಗ್ಗೆ ಇಟ್ಟುಬಿಟ್ಟಿವೆ.

    ಅಂಥದ್ದೇ ಒಂದು ವಿವಾಹ ಆಗಿದ್ದಾರೆ ನ್ಯೂಯಾರ್ಕ್​ನ ಯುವಕ-ಯುವತಿ. ಇವರು ಆಯ್ದುಕೊಂಡದ್ದು ಝೂಮ್​ ಆ್ಯಪ್. ಈ ಆ್ಯಪ್​ ಬಗ್ಗೆ ಈಗಾಗಲೇ ಸಾಕಷ್ಟು ವಿವಾದ ಎದ್ದಿದ್ದು, ಇದನ್ನು ಬಳಕೆ ಮಾಡದಂತೆ ಭಾರತ ಸೇರಿದಂತೆ ಹಲವಾರು ಕಡೆಗಳಲ್ಲಿ ಸುದ್ದಿಗಳು ಬರುತ್ತಲೇ ಇವೆ. ಆದರೆ ಬಳಸಲು ತುಂಬಾ ಸಲೀಸಾಗಿರುವ ಕಾರಣದಿಂದ ಇದರ ಮೊರೆ ಹೋಗುತ್ತಿರುವವರು ಹಲವಾರು ಮಂದಿ. ಅದೇ ರೀತಿ ನ್ಯೂಯಾರ್ಕ್​ನ ಈ ಜೋಡಿ ಕೂಡ ಝೂಮ್​ ಆ್ಯಪ್​ ಮೂಲಕ ಮದುವೆಯಾಗಿದ್ದಾರೆ.

    ವಧುವಿನ ಹೆಸರು ಸಯಕಾ ಫುಕುಡಾ ಮತ್ತು ವರ ಜೇಮ್ಸ್​ ಸ್ಟೋರ್​ ಬ್ರೌನ್​. ಇವರು ಝೂಮ್​ ಆ್ಯಪ್​ನಲ್ಲಿ ಮದುವೆಯಾಗಿದ್ದರೆ ಅದೇನು ಅಷ್ಟು ದೊಡ್ಡ ವಿಶೇಷ ಸುದ್ದಿಯಾಗುತ್ತಿರಲಿಲ್ಲ. ಇದು ಬಹಳ ಸುದ್ದಿಯಾಗಲು ಕಾರಣ ಎಂದರೆ ಈ ಜೋಡಿ ಮೂರೂವರೆ ವರ್ಷ ಒಂದೇ ಮನೆಯಲ್ಲಿ, ಒಟ್ಟಿಗೇ ವಾಸವಾಗಿದ್ದರು. ಅವರಿಗೆ ಅಧಿಕೃತವಾಗಿ ಮದುವೆ ಆಗಬೇಕು ಎಂದು ಎನ್ನಿಸಿತ್ತಂತೆ. ಅದಕ್ಕಾಗಿ ಅವರು ಏಪ್ರಿಲ್​ ತಿಂಗಳ ದಿನವನ್ನು ಆಯ್ದುಕೊಂಡಿದ್ದರು. ಈ ಸಮಯದಲ್ಲಿ ಫುಕುಡಾ ತನ್ನ ತವರಿಗೆ ವಾಪಸ್​ ಆಗಿದ್ದಳು.

    ಮದುವೆ, ಹನಿಮೂನ್​ ಎಲ್ಲದರ ಮುಹೂರ್ತ ಫಿಕ್ಸ್​ ಆಗಿತ್ತು. ಆದರೆ ಏಪ್ರಿಲ್​ನಲ್ಲಿ ಅಧಿಕೃತ ಮದುವೆಯ ಕನಸು ಕಾಣುತ್ತಿದ್ದ ಈ ಜೋಡಿಗೆ ಲಾಕ್​ಡೌನ್​ ನಿರಾಸೆ ಮೂಡಿಸಿಬಿಟ್ಟಿತು. ಆದರೆ ಅಂದೇ ಮದುವೆಯಾಗುವ ಆಸೆ ಮೂಡಿತು. ಅದಕ್ಕಾಗಿ ಇಬ್ಬರೂ ಝೂಮ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡರು. ಅವಳು ಅಲ್ಲಿ, ಇವನು ಇಲ್ಲಿ ನಡುವೆ ಝೂಮ್​ ಆ್ಯಪ್​. ನಂತರ ಇಬ್ಬರೂ ಶಾಸ್ತ್ರೋಕ್ತವಾಗಿ ಮದುವೆಯಾದರು. ಸ್ನೇಹಿತರು, ಬಂಧು-ಬಳಗದವರು ನಿಂತಲ್ಲಿಯೇ ಆ್ಯಪ್​ನಲ್ಲಿ ಶುಭ ಹಾರೈಸಿದರು. ಅಂತೂ ಇವರ ಮದುವೆಗೆ ಅಧಿಕೃತ ಮುದ್ರ ಬಿತ್ತು!

    ಅದು ಹೇಗೆಂದರೆ ಅಮೆರಿಕದಲ್ಲಿ ಇಂಟರ್​ನೆಟ್​ ವಿವಾಹಕ್ಕೆ ಮಾನ್ಯತೆ ನೀಡಲಾಗಿದೆ. ಆದ್ದರಿಂದ ಮೂರೂವರೆ ವರ್ಷ ಒಟ್ಟಿಗೆ ಇದ್ದ ಈ ಜೋಡಿ ಈಗ ದೂರ ದೂರವಾಗಿ ಅಧಿಕೃತ ವಿವಾಹವಾಗಿದೆ. ಲಾಕ್​ಡೌನ್​ ಮುಗಿದ ಮೇಲೆ ಹನಿಮೂನ್​ಗೆ ಹೋಗುವುದಾಗಿ ದಂಪತಿ ಹೇಳಿದ್ದಾರೆ! (ಏಜೆನ್ಸಿಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts