More

  ಐದು ಮಕ್ಕಳಲ್ಲಿ ಒಬ್ಬಳನ್ನು ರೈಲಲ್ಲೇ ಬಿಟ್ಟುಹೋದ ದಂಪತಿ; ಆಮೇಲೇನಾಯಿತು?!

  ಬೆಂಗಳೂರು: ಐವರು ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಮಗಳೊಬ್ಬಳನ್ನು ಹಾಗೇ ಬಿಟ್ಟು ಇಳಿದುಹೋಗಿದ್ದು, ಒಂದಷ್ಟು ಕಾಲ ಆತಂಕದ ವಾತಾವರಣ ಸೃಷ್ಟಿಯಾಗಲು ಕಾರಣವಾಗಿತ್ತು. ಬೀದರ್​-ಯಶವಂತಪುರ ಎಕ್ಸ್​ಪ್ರೆಸ್​​ನಲ್ಲಿ ಗುರುವಾರ ರಾತ್ರಿ ಇಂಥದ್ದೊಂದು ಪ್ರಕರಣ ಸಂಭವಿಸಿದೆ.

  ಬೀದರ್​-ಯಶವಂತಪುರ ಎಕ್ಸ್​ಪ್ರೆಸ್​ ಟ್ರೇನ್​ ನಂ. 06272ನಲ್ಲಿ ಸಂಗಪ್ಪ ಎಂಬವರು ತಮ್ಮ ಪತ್ನಿ ಮತ್ತು ಐವರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಆದರೆ ರಾಜಾನುಕುಂಟೆ ಸಿಗ್ನಲ್ ಕ್ಲಿಯರೆನ್ಸ್​ ಬಳಿ ಇಳಿಯುವಾಗ ಅಲ್ಲಿ ನಿದ್ರಿಸುತ್ತಿದ್ದ ತಮ್ಮ ಪುತ್ರಿ ಭೂಮಿಕಾಳನ್ನು ಜತೆ ಕರೆದೊಯ್ಯಲು ಮರೆತೇ ಹೋಗಿದ್ದರು.

  ರೈಲಿನಿಂದ ಇಳಿದು ಬಂದ ಸ್ವಲ್ಪ ಹೊತ್ತಿನಲ್ಲಿ ಮಕ್ಕಳಲ್ಲಿ ಪುತ್ರಿಯೊಬ್ಬಳು ಇಲ್ಲದಿರುವುದು ಗೊತ್ತಾಗಿ ತೀವ್ರ ಗಾಬರಿ ಹಾಗೂ ಚಿಂತೆಗೆ ಒಳಗಾಗಿದ್ದರು. ಈ ಬಗ್ಗೆ 7 ಗಂಟೆ ಸುಮಾರಿಗೆ ರೈಲ್ವೆ ಸ್ಟೇಷನ್​ ಮಾಸ್ಟರ್​ ಗಮನಕ್ಕೆ ತಂದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸ್ಟೇಷನ್​ ಮಾಸ್ಟರ್​ ಅವರು ಸೆಕ್ಯುರಿಟಿ ಕಂಟ್ರೋಲ್​ಗೆ ಮಾಹಿತಿ ರವಾನಿಸಿದ್ದು, ಎಲ್ಲೆಡೆ ಹುಡುಕಾಟ ನಡೆಸುವಂತೆ ಆರ್​ಪಿಎಫ್​ಗೆ ಸೂಚಿಸಿದ್ದರು.

  ಅಷ್ಟರಲ್ಲಿ ಬೀದರ್-ಯಶವಂತಪುರ ಎಕ್ಸ್​ಪ್ರೆಸ್​ 7.30ರ ಸುಮಾರಿಗೆ ಯಶವಂತಪುರ ಸ್ಟೇಷನ್​ ತಲುಪಿತ್ತು. ಅಲ್ಲಿ ಕೋಚ್​ ನಂಬರ್ ಎಸ್​ಡಬ್ಲ್ಯುಆರ್​ ಎಸ್​ಸಿಎನ್​ 201586/Cನ ಸೀಟ್​ ನಂಬರ್ 3ರಲ್ಲಿ ಭೂಮಿಕಾ ಮಲಗೇ ಇದ್ದಿದ್ದು, ರೈಲ್ವೆ ಸಿಬ್ಬಂದಿಯ ಕಣ್ಣಿಗೆ ಬಿದ್ದಿತ್ತು. ಬಳಿಕ ದಂಪತಿಯನ್ನು ಯಶವಂತಪುರಕ್ಕೆ ಕರೆಸಿ ಬಾಲಕಿಯನ್ನು ಹಸ್ತಾಂತರಿಸಲಾಗಿದೆ. ರೈಲ್ವೆ ಪ್ರೊಟೆಕ್ಷನ್​ ಫೋರ್ಸ್​ನ ತ್ವರಿತ ಕಾರ್ಯಾಚರಣೆ ಕುರಿತು ಡಿವಿಷನಲ್ ರೈಲ್ವೇ ಮ್ಯಾನೇಜರ್ ಅಶೋಕ್​ ಕುಮಾರ್ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ನೀವು ವಾಟ್ಸ್​ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಇದನ್ನು ಓದಿ.. ಗಮನದಲ್ಲಿರಲಿ…

  ಅಪ್ಪ ಮಟನ್​ ಕರಿಯಲ್ಲಿ ಪೀಸ್​ ಇಲ್ಲ ಎಂದ; ಮಕ್ಕಳು ಚಚ್ಚಿ ಕೊಚ್ಚಿ ಸಾಯಿಸಿದ್ರು…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts