ಮಗನನ್ನು ನೋಡಲು ಹೊರಟು ಹೋಳಿ ಹಬ್ಬದಂದೇ ಹೆಣವಾದ ಗಂಡ – ಹೆಂಡತಿ

ಶಿವಮೊಗ್ಗ: ಮಗನನ್ನು ನೋಡಲು ಆನವಟ್ಟಿಗೆ ಹೊರಟಿದ್ದ ದಂಪತಿ ಪ್ರಯಾಣಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಶಿಕಾರಿಪುರ ತಾಲೂಕಿನ ಭದ್ರಾಪುರ ತಾಂಡದಲ್ಲಿ ಭೀಕರ ಅಪಘಾತ ನಡೆದಿದ್ದು, ಮೂಲತಃ ಮಲೆಬೆನ್ನೂರಿನವರಾದ ಮಂಜುನಾಥ್(53) ಹಾಗೂ ಪತ್ನಿ ವಸಂತಾ(44) ಮೃತರು.

ಅಪಘಾತದ ರಭಸಕ್ಕೆ ಇಂಡಿಕಾ ವಿಸ್ತಾ ನುಜ್ಜುಗುಜ್ಜಾಗಿದ್ದು, ಲಾರಿ ಡ್ರೈವರ್ ಹಾಗೂ ಮೃತರನ್ನು ಶಿರಾಳಕೊಪ್ಪ ಆಸ್ಪತ್ರೆಗೆ ರವಾನಿಸಲಾಗಿದೆ.

ಶಿರಾಳಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)