ಮದುವೆಗೆ ತೆರಳುತ್ತಿದ್ದ ದಂಪತಿ ಸಾವು, ಶವದ ಮುಂದೆ ಕೂತ ಕಂದಮ್ಮನ ಮನಕರಗುವ ದೃಶ್ಯ!

ಚಾಮರಾಜನಗರ: ಬೈಕ್ ಸವಾರನಿಗೆ ಟೆಂಪೋ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮಗ ಮಾತ್ರ ಬಚಾವಾಗಿರುವ ಘಟನೆ ನಡೆದಿದೆ.

ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮದ ನಿವಾಸಿಗಳಾದ ಮಾದೇಶ್ ಮತ್ತು ಮಣಿ ಮೃತ ದುರ್ದೈವಿಗಳು.

ಮದುವೆಗೆಂದು ನಂಜನಗೂಡಿಗೆ ಹೋಗುತ್ತಿದ್ದ ವೇಳೆ ಚಾಮರಾಜನಗರ ತಾಲೂಕಿನ ಮುತ್ತಿಗೆ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪಾರಾದ ಮಗ ಪಾಲಕರ ಮುಂದೆ ಕುಳಿತು ಕಣ್ಣೀರು ಇಡುತ್ತಿರುವ ದೃಶ್ಯ ಮನಕಲಕುವಂತಿತ್ತು.

ಚಾಮರಾಜನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *