ದಂಪತಿ, ಪುತ್ರಿಯನ್ನು ಇರಿದು ಕೊಲೆ; ಗಾಯಾಳು ಮಗನ ವಿಚಾರಣೆ

ನವದೆಹಲಿ: ಒಂದೇ ಕುಟುಂಬದ ಮೂವರನ್ನು ಚಾಕು ಇರಿದು ಕೊಲೆ ಮಾಡಿರುವ ಘಟನೆ ದಕ್ಷಿಣ ದೆಹಲಿಯ ವಸಂತದದ ಕುಂಜ್​ನಲ್ಲಿ ನಡೆದಿದೆ.

ಬುಧವಾರ ಬೆಳಗ್ಗೆ 40 ವರ್ಷದ ಮಿಥಿಲೇಶ್, ಸಿಯಾ ದಂಪತಿ ಮತ್ತು ಇವರ 16 ವರ್ಷದ ಮಗಳು ನೇಹಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಆದರೆ, 19 ವರ್ಷದ ಪುತ್ರನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಮೃತ ಮಿಥಿಲೇಶ್​ ಉತ್ತರ ಪ್ರದೇಶದವರಾಗಿದ್ದು, ಕಂಟ್ರಾಕ್ಟರ್​ ಆಗಿ ಕೆಲಸ ಮಾಡುತ್ತಿದ್ದರು. ಆರು ತಿಂಗಳ ಹಿಂದೆ ಅವರ ಪುತ್ರ ಅಪಹೃತಗೊಂಡಿದ್ದ ಎಂದು ಮೃತ ಸಿಯಾಳ ಸೋದರ ತಿಳಿಸಿದ್ದಾರೆ.

ಮೂವರೂ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಮೃತಪಟ್ಟಿದ್ದಾರೆ. ದೆಹಲಿ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ಗಾಯಗೊಂಡ ಪುತ್ರನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ಬೆನಿಟ ಮೇರಿ ಜೈಕರ್​ ತಿಳಿಸಿದ್ದಾರೆ. (ಏಜೆನ್ಸೀಸ್​)