ಮಾರ್ಯಾದೆಗೆ ಹೆದರಿ ದಂಪತಿ ಆತ್ಮಹತ್ಯೆ: ರೊಚ್ಚಿಗೆದ್ದ ಗ್ರಾಮಸ್ಥರಿಂದ ಶಂಕಾಸ್ಪದನ ಮನೆಗೆ ಬೆಂಕಿ

ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿಯಲ್ಲಿ ಮರ್ಯಾದೆಗೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಗೆ ತ್ಯಾಗರಾಜ ಎಂಬಾತನ ಪ್ರಚೋದನೆ ಕಾರಣ ಎಂದು ಆರೋಪಿಸಿ ಆತನ ಮನೆಗೆ ಗ್ರಾಮಸ್ಥರು ಬೆಂಕಿ ಹಚ್ಚಿದ್ದಾರೆ.

ಲೋಕೇಶ್, ಕೌಸಲ್ಯಾ ಆತ್ಮಹತ್ಯೆ ಮಾಡಿಕೊಂಡವರು. ತ್ಯಾಗರಾಜ ಎಂಬಾತನೊಂದಿಗೆ ಕೌಸಲ್ಯಾ ಕೆಲದಿನಗಳ ಹಿಂದೆ ಮನೆಬಿಟ್ಟು ಹೋಗಿದ್ದರು. ಮಂಗಳವಾರ ಆಕೆ ಪುನಃ ಮನೆಗೆ ಮರಳಿದ್ದಳು. ಆದರೆ ಈಕೆ ಮನೆ ಬಿಟ್ಟು ಹೋದ ವಿಷಯ ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದರಿಂದ ಲೋಕೇಶ್​ಗೆ ಅವಮಾನವಾದಂತೆ ಆಗಿತ್ತು.

ತಾನು ಕೌಸಲ್ಯಾ ಜತೆ ಇದ್ದ ಫೋಟೋಗಳನ್ನು ಲೋಕೇಶ್ ಮೊಬೈಲ್​ಗೆ ತ್ಯಾಗರಾಜ ಕಳುಹಿಸಿದ್ದ ಎನ್ನಲಾಗಿದೆ. ಇದರಿಂದಾಗಿ ಮರ್ಯಾದೆ ಹೋಯಿತೆಂದು ಮನನೊಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ತ್ಯಾಗರಾಜ ಎಂಬ ವ್ಯಕ್ತಿಯ ಮನೆ, ಎರಡು ಕಾರು, ಒಂದು ಟ್ರ್ಯಾಕ್ಟರ್​ಗೆ ಬೆಂಕಿ ಹಚ್ಚಿದ್ದು ಸುಟ್ಟು ಭಸ್ಮವಾಗಿವೆ. ಅಕ್ಕೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *