ನವದೆಹಲಿ: ಲಡಾಖ್ನ ಗಲ್ವಾನ್ ಪ್ರದೇಶದಲ್ಲಿ ಚೀನಿಯರ ಹಿಂಸಾತ್ಮಕ ಘರ್ಷಣೆ ಬಳಿಕ ದೇಶದಲ್ಲಿ ಚೀನಾ ವಿರೋಧಿ ಕೂಗು ಹೆಚ್ಚಾಗಿದೆ. ಚೀನಾ ವಸ್ತುಗಳನ್ನು ಬಹಿಷ್ಕರಿಸಲಾಗುತ್ತಿದೆ. ಇತ್ತ ಸರ್ಕಾರ ಕೂಡ ಚೀನಾ ವಸ್ತುಗಳ ಮೇಲೆ ಮತ್ತಷ್ಟು ನಿಯಂತ್ರಣ ಹೇರಲು ಮುಂದಾಗಿದೆ.
ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತದಲ್ಲಿ ಮಾರಾಟ ಮಾಡಲಾಗುವ ವಸ್ತುವಿನ ಮೇಲೆ ಅದನ್ನು ಯಾವ ದೇಶದಲ್ಲಿ ತಯಾರಿಸಲಾಗಿದೆ ಎಂಬುದನ್ನು ನಮೂದಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.
ಇದನ್ನೂ ಓದಿ; ಚೀನಾ ಸಾಗರ ಗಡಿಯಲ್ಲಿ ಅಮೆರಿಕ ನೌಕೆಗಳ ಸಮರಾಭ್ಯಾಸ; ಡ್ರ್ಯಾಗನ್ ಹಣಿಯಲು ನಡೆದಿದೆ ಸಿದ್ಧತೆ
ವಿದೇಶಿ ಕಂಪನಿಗಳು ಭಾರತದಲ್ಲಿ ವಸ್ತುವಿನ ಮಾರಾಟ ಆರಂಭಿಸುವ ಮುನ್ನ ಅದನ್ನು ಯಾವ ದೇಶದಲ್ಲಿ ತಯಾರಿಸಿದ್ದು ಎಂಬುದನ್ನು ಸರ್ಕಾರಿ ಇ- ಮಾರುಕಟ್ಟೆ ಪೋರ್ಟಲ್ನಲ್ಲಿ ನಮೂದಿಸಬೇಕು. ಈಗಾಗಲೇ ಮಾರಾಟದಲ್ಲಿರುವ ವಸ್ತುಗಳಿಗೂ ಇದು ಅನ್ವಯವಾಗಲಿದೆ.
ಯಾವ ದೇಶದಲ್ಲಿ ತಯಾರಿಸಲಾಗಿದೆ ಎಂಬುದನ್ನು ಆಗಾಗ ಅಪ್ಡೇಟ್ ಮಾಡುತ್ತಲೇ ಇರಬೇಕು ಇದಕ್ಕೆ ತಪ್ಪಿದಲ್ಲಿ ಮಾರಾಟಕ್ಕೆ ಅವಕಾಶ ನಿರಾಕರಿಸಲಾಗುತ್ತದೆ. ಈ ಮೂಲಕ ಚೀನಾದಿಂದ ನೇರವಾಗಿ ಭಾರತಕ್ಕೆ ಬರುವ, ಚೀನಾದಲ್ಲಿ ತಯಾರಿಸಿದ್ದನ್ನು ಬೇರೆ ದೇಶದ ಸಂಸ್ಥೆಗಳು ಭಾರತದಲ್ಲಿ ಮಾರಾಟ ಮಾಡುವುದನ್ನು ಸುಲಭವಾಗಿ ಗುರುತಿಸಬಹುದು.
ಇದನ್ನೂ ಓದಿ; ಸಂಘರ್ಷದ ನಡುವೆ ಸದ್ದಿಲ್ಲದೆ ಚೀನಾಗೆ ಭಾರಿ ತಿರುಗೇಟು ನೀಡಿದೆ ಭಾರತ
ಚೀನಿ ವಸ್ತುಗಳನ್ನು ಬಹಿಷ್ಕರಿಸಲು ಭಾರತದ ಗ್ರಾಹಕರಿಗೆ ಹೆಚ್ಚಿನ ಮಾಹಿತಿ ಹಾಗೂ ಆಯ್ಕೆಗಳನ್ನು ನೀಡಿದಂತಾಗಲಿದೆ. ಇದಷ್ಟೇ ಅಲ್ಲ, ಒಂದು ವಸ್ತುವನ್ನು ಬೇರೆ ಬೇರೆ ದೇಶಗಳಲ್ಲಿ ತಯಾರಿಸಿದ ಬಿಡಿಭಾಗಗಳ ಮೂಲಕ ಸಿದ್ಧಪಡಿಸಿದ್ದರೆ, ಯಾವ ದೇಶದ ಬಿಡಿಭಾಗಗಳು ಎಷ್ಟು ಪ್ರಮಾಣದಲ್ಲಿವೆ ಎಂಬುದರ ವಿವರವನ್ನು ನೀಡಬೇಕಿದೆ. ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿರುವ ಹಲವು ಸಂಘಟನೆಗಳು, ಈ ನಿಯಮವನ್ನು ಎಲ್ಲ ಇ-ಕಾಮರ್ಸ್ ತಾಣಗಳಿಗೂ ವಿಸ್ತರಿಸಬೇಕೆಂದು ಒತ್ತಾಯಿಸಿವೆ.
ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ