ಬಿಜೆಪಿಯಿಂದ ಬೈಕ್ ರ‌್ಯಾಲಿ

ನಿಡಗುಂದಿ: ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೆ ಗುರುವಾರ ಮಧ್ಯಾಹ್ನದಿಂದಲೇ ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗಿ ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು.
ಮಧ್ಯಾಹ್ನ ಗ್ರಾಮದೇವತೆ ದೇವಸ್ಥಾನದಿಂದ ಬಿಜೆಪಿ ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶಿವಾನಂದ ಮುಚ್ಚಂಡಿ, ಪ್ರಹ್ಲಾದ್ ಪತ್ತಾರ ಮಾತನಾಡಿದರು.
ಪಪಂ ಸದಸ್ಯ ಶಂಕರ ರೇವಡಿ, ಸಿದ್ರಾಮೇಶ ಅರಮನಿ, ಬಸವರಾಜ ಗೌರಿ, ಮುದ್ದಪ್ಪ ಯಳ್ಳಿಗುತ್ತಿ, ಶೇಖರ ದೊಡಮನಿ, ಡಾ. ಸಂಗಮೇಶ ಗೂಗಿಹಾಳ, ಹನುಮಂತ ಸುನಗದ ವಿಜಯಕುಮಾರ ಮೋಟಗಿ, ಅವ್ವಣ್ಣ ನಾಯಕ, ಸಂತೋಷ ಕಡಿ, ಸೋಮು ಗಣಿ, ಗೌರಿಶಂಕರ ಹೆಂಡಿ ಮತ್ತಿತರರಿದ್ದರು.