18.5 C
Bangalore
Monday, December 16, 2019

ಬೆಳಗಾವಿ: ದೇಶದಲ್ಲಿರುವುದು ಇಟಲಿ ಕಾಂಗ್ರೆಸ್

Latest News

‘ದಿಶಾ ರೈಡ್ ಆಂಡ್ ವಾಕ್’ ಜಾಗೃತಿ ಜಾಥಾ

ಹುಬ್ಬಳ್ಳಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ತೋಳನಕೆರೆಯಿಂದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ವರೆಗೆ ಭಾನುವಾರ ಬೆಳಗ್ಗೆ ‘ದಿಶಾ ರೈಡ್ ಆಂಡ್ ವಾಕ್’ ಘೋಷಣೆಯೊಂದಿಗೆ...

‘ಆಟೋ ರಿಕ್ಷಾ ರನ್’

ಹುಬ್ಬಳ್ಳಿ: ಕನ್ಯಾಕುಮಾರಿಯಿಂದ ಅಹಮದಾಬಾದ್​ವರೆಗೆ ‘ಆಟೋ ರಿಕ್ಷಾ ರನ್’ ಹಮ್ಮಿಕೊಂಡಿರುವ ಇಂಗ್ಲೆಂಡಿನ ‘ಸೇವಾ ಯುಕೆ’ ಸಂಸ್ಥೆಯ ಅನಿವಾಸಿ ಭಾರತೀಯರು ಭಾನುವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಗೋವಾದ...

ಗೀತೆ ಅಧ್ಯಯನದಿಂದ ಜೀವನ ಸುಖಮಯ

ಧಾರವಾಡ: ಗೀತೆ ದೀಪ ಸ್ವರೂಪ. ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನವನ್ನು ನೀಡುವುದು. ಸತ್ಸಂಗ ಮತ್ತು ಜ್ಯೋತಿ ಎರಡೂ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ...

ಸ್ವಾಮಿಯೇ ಶರಣಂ ಅಯ್ಯಪ್ಪ

ಹುಬ್ಬಳ್ಳಿ: ನಗರದ ಶಿರೂರು ಪಾರ್ಕ್ ಅಯ್ಯಪ್ಪ ಸ್ವಾಮಿ ದೇಗುಲದ ಮಾಲಾಧಾರಿಗಳು ಹಾಗೂ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಅಯ್ಯಪ್ಪ...

ದೇಶದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ ಸಮಸ್ಯೆ

ಮೈಸೂರು: ಬಂಡವಾಳಶಾಯಿಗಳ ಪರ ಆಡಳಿತ ನಡೆಸುತ್ತಿರುವ ಸರ್ಕಾರಗಳು, ದುಡಿಯುವ ವರ್ಗವನ್ನು ಕಡೆಗಣಿಸಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಾರ್ಖಾನೆಗಳು ಬಾಗಿಲು...

ಬೆಳಗಾವಿ: ಒಂದೇ ಭಾರತ, ಒಂದೇ ಕಾನೂನು ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಅಪ್ರತಿಮ ನಾಯಕ ಶ್ಯಾಮಪ್ರಸಾದ ಮುಖರ್ಜಿ ಅವರಿಂದ ದೇಶದ ಪ್ರತಿ ನಾಗರಿಕ ಕಂಡ ಕನಸನ್ನು ಭಂಗಗೊಳಿಸುತ್ತ ಬಂದಿದೆ. ಕಾಂಗ್ರೆಸ್ ಇನ್ನೊಂದು ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಲೇವಡಿ ಮಾಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ 370 ಹಾಗೂ 35ಅ ವಿ ರದ್ದುಪಡಿಸುವ ಮೂಲಕ ಒಂದೇ ಭಾರತ, ಒಂದೇ ಕಾನೂನು ಜಾರಿಗೊಳಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರದ 70 ವರ್ಷಗಳಲ್ಲಿ ಇಂಥದೊಂದು ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಇದು ಮೋದಿ ಸರ್ಕಾರದ ಸಾಧನೆ ಎಂದರು.

ಮೋದಿ ಹಾಗೂ ಅಮಿತ್ ಷಾ ದಿಟ್ಟ ನಡೆಗೆ ಜಗತ್ತೇ ನಿಬ್ಬೆರಗಾಗಿದೆ. ಆದರೆ ಕಾಂಗ್ರೆಸ್ ನಾಯಕರು ಎಲ್ಲವನ್ನೂ ವಿರೋಸುತ್ತಿದ್ದಾರೆ. ಮಹಾತ್ಮ ಗಾಂೀಜಿ ಕಾಲದ ಕಾಂಗ್ರೆಸ್‌ಗೂ ಈಗಿನ ಕಾಂಗ್ರೆಸ್‌ಗೂ ಅಂತರವಿದೆ. ಇದು ಇಟಲಿ ಕಾಂಗ್ರೆಸ್. ಇದು ಇನ್ನೊಂದು ಈಸ್ಟ್ ಇಂಡಿಯಾ ಕಂಪನಿ ಎಂದು ಸಚಿವ ಅಂಗಡಿ ಲೇವಡಿ ಮಾಡಿದರು.

ಡಿ.ಕೆ.ಶಿವಕುಮಾರ್ ಮೇಲಿನ ಐಟಿ ದಾಳಿ ನಂತರದ ಬೆಳವಣಿಗೆ ವಿರೋಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್‌ನವರನ್ನು ಗುರಿ ಮಾಡಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಇದು ಸರಿಯಲ್ಲ. ವಾಜಪೇಯಿ ಸರ್ಕಾರ ಇದ್ದಾಗ ನನ್ನ ಮೇಲೆ ಕೂಡ ಐಟಿ ದಾಳಿ ನಡೆದಿತ್ತು. ಐಟಿ ಇಲಾಖೆ ತನ್ನ ಕೆಲಸ ತಾನು ಮಾಡುತ್ತದೆ. ತನಿಖೆಗೆ ಸಹಕರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನವರು ಪ್ರತಿಭಟನೆ ಹೆಸರಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆಸ್ತಿಗಳಿಗೆ ಹಾನಿ ಮಾಡುತ್ತಿದ್ದಾರೆ. ಮೋದಿ ಹಾಗೂ ಅಮಿತ್ ಷಾ ಅವರ ಭಾವಚಿತ್ರಗಳನ್ನು ಸುಡುತ್ತಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ದೇಶದ ಕಪ್ಪು ಹಣವನ್ನು ವಾಪಸ್ ತರುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿರುವಾಗ, ಕಾಂಗ್ರೆಸ್ ದೇಶದ ಆಸ್ತಿ ಹಾಳು ಮಾಡುವ ಕೆಲಸ ಮಾಡಬಾರದು. ಯಾರು ತಪ್ಪು ಮಾಡಿದರೂ ನೆಲದ ಕಾನೂನಿನಂತೆ ಶಿಕ್ಷೆ ಅನುಭವಿಸಬೇಕಾಗುತ್ತದೆ.

ದೇಶದ ವಿರುದ್ಧ ಘೋಷಣೆ ಕೂಗುವವರಿಗೆ ಗುಂಡಿಕ್ಕಿ ಎಂದು ನಾನು ಹೇಳಿದ್ದೆ. ಆದರೆ ದೇಶದ ವಿರುದ್ಧ ಘೋಷಣೆ ಕೂಗುವವರಿಗೆ ಕಾಂಗ್ರೆಸ್ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿ 16 ರಾಜ್ಯಗಳಲ್ಲಿ ಪ್ರವಾಹ ಉಂಟಾಗಿದೆ. ಹಿಂದೆ ಪ್ರವಾಹ ಉಂಟಾದಾಗ, ಸಂತ್ರಸ್ತ ಪ್ರತಿ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರ 200 ರೂ. ನೀಡಿತ್ತು. ಈಗ ಬಿಜೆಪಿ ಸರ್ಕಾರ 10 ಸಾವಿರ ರೂ. ನೀಡಿದೆ. ಪೂರ್ಣ ಮನೆ ಕಟ್ಟಲು 5 ಲಕ್ಷ ರೂ., ಭಾಗಶಃ ನಿರ್ಮಾಣಕ್ಕೆ 1 ಲಕ್ಷ ರೂ. ಹಾಗೂ ಬಾಡಿಗೆ ನೀಡಲು ಅನುಕೂಲವಾಗುವಂತೆ 50 ಸಾವಿರ ರೂ. ನೀಡುತ್ತಿದೆ ಎಂದರು.

ಶಾಸಕ ಅನಿಲ ಬೆನಕೆ, ಬಿಜೆಪಿ ಬೆಳಗಾವಿ ಮಹಾನಗರ ಅಧ್ಯಕ್ಷ ರಾಜೇಂದ್ರ ಹರಕುಣಿ, ರಾಜ್ಯ ವಕ್ತಾರ ಎಂ. ಬಿ. ಜಿರಲಿ, ಮಾಧ್ಯಮ ವಕ್ತಾರರಾದ ಬಸವರಾಜ ರೊಟ್ಟಿ ಹಾಗೂ ಹನುಮಂತ ಕೊಂಗಳಿ, ಗಿರೀಶ ಧೊಂಗಡಿ ಮತ್ತು ಇತರರು ಉಪಸ್ಥಿತರಿದ್ದರು.

Stay connected

278,753FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...