20.3 C
Bangalore
Sunday, December 15, 2019

ಬ್ಯಾಂಕ್ ಕಟ್ಟಿದ ಹಣದಲ್ಲೇ ನಕಲಿ ನೋಟುಗಳು!

Latest News

ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು (ಭಾನುವಾರ) ಆಸ್ಪತ್ರೆಯಿಂದ ಬಿಡುಗೆಯಾಗಿ ಮನೆಗೆ ತೆರಳಲಿದ್ದಾರೆ.ಸ್ಟಂಟ್​ನಲ್ಲಿ...

ಜೆಡಿಎಸ್ ಜನ್ಮ ಜಾಲಾಟ, ವರಿಷ್ಠರಿಗೆ ಪೀಕಲಾಟ

ಬೆಂಗಳೂರು: ಸಾಲು ಸಾಲು ಸೋಲಿನಿಂದ ದಳಪತಿಗಳು ಕಂಗೆಟ್ಟಿದ್ದಾರೆ. ಲೋಕಸಭಾ ಚುನಾವಣೆ ಸೋಲಿ ನಿಂದ ಬೇಗುದಿ ಹೆಚ್ಚುತ್ತಿದ್ದು, ಮೈತ್ರಿ ಸರ್ಕಾರ ಪತನ, ಉಪಚುನಾವಣೆಯ ಹೀನಾಯ...

ಮೊದಲ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

ಪರ್ತ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆ ಕಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿನ ತನ್ನ...

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ ಹಾವು: ವಿಡಿಯೋ ಬಗ್ಗೆ ಬಿಸಿಸಿಐ ಹೇಳಿದ್ದೇನು?

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ...

ವಿದೇಶಿ ಮಹಿಳೆಯಿಂದ ಪಿಂಡಪ್ರದಾನ

ಹೊಸಪೇಟೆ (ಬಳ್ಳಾರಿ): ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ತಾಯಿಯ ಆತ್ಮಕ್ಕೆ ಶಾಂತಿ, ಸದ್ಗತಿ ದೊರೆಯಲೆಂದು ಶನಿವಾರ ಹಂಪಿ ನದಿ ತೀರದಲ್ಲಿ ಪುರೋಹಿತರ ನೇತೃತ್ವದಲ್ಲಿ ಹಿಂದು ಧಾರ್ವಿುಕ ವಿಧಿವಿಧಾನಗಳಂತೆ...

ಬೆಂಗಳೂರು: ನಕಲಿ ನೋಟು ತಡೆಗೆ ಅಮಾನೀಕರಣ ಮತ್ತು ಆಧುನಿಕ ಮಿಷನ್​ಗಳನ್ನು ಬ್ಯಾಂಕ್​ಗಳಿಗೆ ಪೂರೈಕೆ ಮಾಡಲಾಗಿದೆ. ಆದರೂ ಬ್ಯಾಂಕ್ ಅಧಿಕಾರಿಗಳ ಕಣ್ತಪ್ಪಿ ನಕಲಿ ನೋಟುಗಳು ಆರ್​ಬಿಐ ಸೇರುತ್ತಿವೆ. ಮಷಿನ್​ನಲ್ಲಿ ದೋಷವೋ ಅಥವಾ ಅಧಿಕಾರಿಗಳ ನಿರ್ಲಕ್ಷ್ಯವೋ ಎಂಬುದು ಯಕ್ಷಪ್ರಶ್ನೆಯಾಗಿದೆ.

ಆರ್​ಬಿಐ ಪ್ರಾದೇಶಿಕ ಕಚೇರಿಗೆ ಎಸ್​ಬಿಐ ಬ್ಯಾಂಕ್ ಅಧಿಕಾರಿಗಳು ಜಮೆ ಮಾಡಿದ ಹಣದಲ್ಲೇ 32,800 ರೂ. ಖೋಟಾ ನೋಟು ಪತ್ತೆಯಾಗಿದೆ. ಈ ಸಂಬಂಧ ನೃಪತುಂಗ ರಸ್ತೆ ಆರ್​ಬಿಐ ಪ್ರಾದೇಶಿಕ ಕಚೇರಿ ಅಧಿಕಾರಿ ಲಕ್ಷ್ಮೀ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಎಸ್​ಬಿಐ ಮಲ್ಲೇಶ್ವರ ಶಾಖೆ ಮತ್ತು ಇತರ ಕರೆನ್ಸಿ ಚೆಸ್ಟ್ ವ್ಯವಸ್ಥಾಪಕರು, ಸಿಬ್ಬಂದಿ ವಿರುದ್ಧ ಹಲಸೂರು ಗೇಟ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಾ. 1ರಿಂದ 31ರ ನಡುವೆ ಎಸ್​ಬಿಐ ಮಲ್ಲೇಶ್ವರ ಶಾಖೆ ಮತ್ತು ಇತರ ಕರೆನ್ಸಿ ಚೆಸ್ಟ್​ಗಳಲ್ಲಿ ಸಂಗ್ರಹವಾಗಿರುವ ಹಣವನ್ನು ಅಧಿಕಾರಿಗಳು ಆರ್​ಬಿಐಗೆ ಜಮೆ ಮಾಡಿದ್ದಾರೆ. ಈ ಹಣವನ್ನು ಖೋಟಾ ನೋಟು ಪತ್ತೆಹಚ್ಚುವ ವಿಶೇಷ ಯಂತ್ರದಲ್ಲಿ ಆರ್​ಬಿಐ ಕಚೇರಿ ಸಿಬ್ಬಂದಿ ಪರಿಶೀಲನೆ ನಡೆಸಿದಾಗ 100 ರೂ. ಮುಖಬೆಲೆಯ 328 ಖೋಟಾ ನೋಟುಗಳು ಪತ್ತೆಯಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಆರ್​ಬಿಐ ಅಧಿಕಾರಿ ಲಕ್ಷ್ಮೀ, ಮೇಲಧಿಕಾರಿಗಳ ಗಮನಕ್ಕೆ ತಂದು ಬಳಿಕ ಹಲಸೂರು ಗೇಟ್ ಠಾಣೆಗೆ ದೂರು ನೀಡಿ ನಕಲಿ ನೋಟು ತನಿಖಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಈ ನಕಲಿ ನೋಟುಗಳನ್ನು ತಯಾರಿಸಿ ಬ್ಯಾಂಕ್​ಗೆ ಜಮೆ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹಳೆಯ 100 ರೂ. ನೋಟುಗಳು: 1 ಸಾವಿರ ಮತ್ತು 500 ರೂ. ಮುಖಬೆಲೆ ನೋಟುಗಳನ್ನು ಮಾತ್ರ ಅಮಾನ್ಯೀಕರಣ ಮಾಡಲಾಗಿತ್ತು. ಬಳಿಕ 500 ರೂ. ಮುಖಬೆಲೆಯ ಹೊಸ ನೋಟುಗಳನ್ನು ಮುದ್ರಿಸಲಾಗಿದೆ. ಹಳೆಯ 100 ರೂ. ನೋಟುಗಳು ಇನ್ನೂ ಚಲಾವಣೆಯಲ್ಲಿವೆ. ಈಗಾಗಲೇ ಸಾರ್ವಜನಿಕರ ಕೈ ಸೇರಿರುವ ನೂರು ರೂ. ಖೋಟಾನೋಟು ಪತ್ತೆ ಮಾಡುವುದು ಕಷ್ಟವಾಗಿದ್ದು, ಇವನ್ನೇ ಹೆಚ್ಚಾಗಿ ಕಿಡಿಗೇಡಿಗಳು ಚಲಾವಣೆ ಮಾಡುತ್ತಾರೆ.

ಇನ್ನೂ ಬೇಕು ಸುರಕ್ಷಿತ ಕ್ರಮಗಳು: ಗ್ರಾಹಕರು ನೀಡುವ ನೋಟುಗಳನ್ನು ತರಾತುರಿಯಲ್ಲಿ ಕೆಲವೊಮ್ಮೆ ಮಷಿನ್​ನಲ್ಲಿ ಎಣಿಸದೆ ಕ್ಯಾಷ್ ಬಾಕ್ಸ್​ಗೆ ಹಾಕಿಕೊಳ್ಳುವುದು ಅಥವಾ ಮಷಿನ್​ನಲ್ಲಿ ತಾಂತ್ರಿಕ ದೋಷ ಇದ್ದಾಗ ನಕಲಿ ನೋಟುಗಳು ಬ್ಯಾಂಕ್ ಒಳಗೆ ಸೇರುತ್ತವೆ. ಕೋಟ್ಯಂತರ ರೂ. ವ್ಯವಹಾರ ನಡೆಸುವಾಗ ಕಣ್ತಪ್ಪಿ ಸಾವಿರಗಟ್ಟಲೆ ಬರುವುದು ಸಾಮಾನ್ಯವಾಗಿದೆ. ನಕಲಿ ನೋಟುಗಳ ಕಡಿವಾಣಕ್ಕಾಗಿಯೇ ಹಳೆಯ ನೋಟುಗಳನ್ನು ಸ್ವೀಕರಿಸಿ ಹೆಚ್ಚಾಗಿ ಹೊಸ ನೋಟುಗಳನ್ನು ಚಲಾವಣೆಗೆ ಬಿಡಲಾಗುತ್ತಿದೆ. ಕಳ್ಳ ದಂಧೆ ತಡೆಗೆ ಸಾಕಷ್ಟು ಸುರಕ್ಷಿತ ಕ್ರಮಗಳು ಅಗತ್ಯ ಇರುವುದಾಗಿ ಎಂದು ಬ್ಯಾಂಕ್ ಅಧಿಕಾರಿಗಳ ಅಭಿಪ್ರಾಯವಾಗಿದೆ.

 

Stay connected

278,754FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...