Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಎರಡು ಆಯೋಗಗಳಲ್ಲಿ ರಾಜ್ಯಕ್ಕೆ ಅನುದಾನದ ಸುರಿಮಳೆ

Tuesday, 13.02.2018, 3:05 AM       No Comments

| ರಮೇಶ ದೊಡ್ಡಪುರ ಬೆಂಗಳೂರು

ರಾಜ್ಯದಲ್ಲಿ 2013ರಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ 14ನೇ ಹಣಕಾಸು ಆಯೋಗದಲ್ಲಿ ಹೆಚ್ಚಿನ ಅನುದಾನ ಪಡೆದು ಬಜೆಟ್ ಗಾತ್ರ ಹಿಗ್ಗಿಸಿಕೊಂಡಿದೆ. ನೋಟು ಅಮಾನ್ಯೀಕರಣ ಹಾಗೂ ಜಿಎಸ್​ಟಿ ಜಾರಿ ಸಮಸ್ಯೆಗಳ ನಡುವೆಯೂ ಆರ್ಥಿಕತೆ ಸದೃಢವಾಗಿ ಮುಂದುವರಿದಿದೆ.

14ನೇ ಆಯೋಗದ ಯೋಗ: ಅಧಿಕಾರಕ್ಕೆ ಬಂದ ಎರಡು ವರ್ಷ 13ನೇ ಹಾಗೂ ನಂತರದ ಮೂರು ವರ್ಷ 14ನೇ ಹಣಕಾಸು ಆಯೋಗದ ಅನುದಾನ ರಾಜ್ಯಕ್ಕೆ ಲಭಿಸಿದೆ. ಇದೇ ಅವಧಿಯಲ್ಲಿ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ದೇಶಾದ್ಯಂತ ಸಮಾನವಾಗಿ ನೀಡುತ್ತಿದ್ದ ಅನುದಾನ ಕಡಿತಗೊಳಿಸಲಾಗಿತ್ತು. ರಾಜ್ಯದ ಅವಶ್ಯಕತೆಗಳಿಗೆ ಅನುಗುಣವಾಗಿ ಹಣ ಬಳಸಿಕೊಳ್ಳಲಿ ಎಂದು ತೆರಿಗೆ ಪಾಲನ್ನು ಹೆಚ್ಚಿಸಲಾಗಿತ್ತು. ಸಂಗ್ರಹವಾಗುವ ತೆರಿಗೆ ಪಾಲಿನಲ್ಲಿ ಶೇ.32 ಇದ್ದ ರಾಜ್ಯದ ಪಾಲನ್ನು 14ನೇ ಆಯೋಗ ಶೇ.10 ಹೆಚ್ಚಿಸಿತು ಇದರಿಂದ ರಾಜ್ಯ ಸರ್ಕಾರಗಳು ಹೆಚ್ಚಿನ ವಿವೇಚನಾಧಿಕಾರ ಬಳಸಿ ಯೋಜನೆಗಳಿಗೆ ವೆಚ್ಚ ಮಾಡುವ ಸ್ವಾತಂತ್ರ್ಯವನ್ನೂ ಪಡೆದಿದ್ದವು. 13ನೇ ಆಯೋಗದ ಕೊನೆಯ ವರ್ಷ(2014-15) ಕೇಂದ್ರದಿಂದ 15.41 ಸಾವಿರ ಕೋಟಿ ರೂ. ಲಭಿಸಿದ್ದ ತೆರಿಗೆ ಪಾಲು, 14ನೇ ಆಯೋಗದ ಮೊದಲ ವರ್ಷ(2015-16) ಇದ್ದಕ್ಕಿದ್ದಂತೆ 23.98 ಸಾವಿರ ಕೋಟಿ ರೂ.ಗೆ ಜಿಗಿದಿತ್ತು. ರಾಜ್ಯದ ಯೋಜನಾ ಕಾರ್ಯಕ್ರಮಗಳಿಗೆ ಲಭಿಸುವ ಅನುದಾನ 4.09 ಸಾವಿರ ಕೋಟಿ ರೂ.ನಿಂದ ದಿಢೀರನೆ 9.06 ಸಾವಿರ ಕೋಟಿ ರೂ.ಗೆ ಜಿಗಿದಿತ್ತು. ಇದಕ್ಕನುಗುಣವಾಗಿ ರಾಜ್ಯದಲ್ಲಿ ಸಂಗ್ರಹ ವಾಗುವ ತೆರಿಗೆ ಪ್ರಮಾಣವೂ 2014-15ರಲ್ಲಿದ್ದ 68.55 ಸಾವಿರ ಕೋಟಿ ರೂ.ನಿಂದ 75.56 ಸಾವಿರ ಕೋಟಿ ರೂ. ಏರಿಕೆಯಾಗಿತ್ತು.

ಜಿಎಸ್​ಟಿ ಸಮತೋಲನಕ್ಕೆ ಸರ್ಕಸ್

ದಶಕದಿಂದಲೂ ಚರ್ಚೆಯಾಗುತ್ತ, ಚರ್ಚೆಯಲ್ಲೇ ಮುಂದುವರಿಯುತ್ತಿದ್ದ ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್​ಟಿ) 2017ರ ಜು.1ರಂದು ಜಾರಿ ಭಾಗ್ಯ ಸಿಕ್ಕಿತು. ಈ ಹಿಂದಿನ ತೆರಿಗೆ ಪದ್ಧತಿಗಳಿಂದ ಉತ್ಪನ್ನ ಉತ್ಪಾದನೆಯಾದ ಸ್ಥಳಕ್ಕೆ ಲಾಭವಾಗುತ್ತಿದ್ದರೆ, ಜಿಎಸ್​ಟಿ ಉತ್ಪನ್ನ ಬಳಕೆಯಾಗುವ ಸ್ಥಳಕ್ಕೆ ಲಾಭ ತಂದುಕೊಡುತ್ತದೆ. ಕರ್ನಾಟಕ ಬಳಕೆದಾರ ರಾಜ್ಯವಾಗಿರುವುದರಿಂದ ಅನುಕೂಲವಾಗುತ್ತದೆ ಎಂದು ಅಂದಾಜಿಸಲಾಗಿದೆ. ಜಿಎಸ್​ಟಿ ಜಾರಿಯಾದ 5 ವರ್ಷ ನಷ್ಟ ಭರಿಸಿಕೊಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಇದಕ್ಕೆ ಸರಿಯೆನ್ನುವಂತೆ 2016-17ರಲ್ಲಿ ಶೇ.13.3 ಸಂಗ್ರಹವಾಗಿದ್ದ ವಾಣಿಜ್ಯ ತೆರಿಗೆ ಶೇ.8ಕ್ಕೆ ಇಳಿದಿತ್ತು. ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ 4,100 ಕೋಟಿ ರೂ. ರಾಜ್ಯ ಜಿಎಸ್​ಟಿ ತೆರಿಗೆ ಹಾಗೂ 1,470 ಕೋಟಿ ರೂ. ಕೇಂದ್ರ ಜಿಎಸ್​ಟಿ ತೆರಿಗೆ ಸೇರಿ ಒಟ್ಟು 5,710 ಕೋಟಿ ರೂ.ರಾಜ್ಯಕ್ಕೆ ಲಭಿಸಿತ್ತು. 2016-17ರ ಇದೇ ಅವಧಿಗೆ ರಾಜ್ಯಕ್ಕೆ 6,190 ಕೋಟಿ ರೂ. ತೆರಿಗೆ ಪಾವತಿಯಾಗಿತ್ತು. ಜಿಎಸ್​ಟಿಯಿಂದಾಗಬಹುದಾದ ಕೊರತೆ ನೀಗಿಸಲು ಸೆಪ್ಟೆಂಬರ್​ನಲ್ಲಿ ರಾಜ್ಯ ಸರ್ಕಾರ 1,500 ಕೋಟಿ ರೂ. ಸಾಲ ಪಡೆದಿತ್ತು. ಒಪ್ಪಂದದಂತೆ, ಪ್ರತಿ ವರ್ಷ ತೆರಿಗೆ ಆದಾಯ ಶೇ.14ಕ್ಕಿಂತ ಕಡಿಮೆಯಾಗಿದ್ದರೆ ಅದರ ನಷ್ಟವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಇದರ ಪ್ರಕಾರ 450 ಕೋಟಿ ರೂ. ರಾಜ್ಯಕ್ಕೆ ಲಭಿಸಬೇಕಿದೆ.

ಸರಿದ ಅಮಾನ್ಯೀಕರಣ ಕಾಮೋಡ

2016ರ ನ.8ರಂದು ಪ್ರಧಾನಿ ಮೋದಿ ನೋಟು ಅಮಾನ್ಯೀಕರಣ ಮಾಡಿದ್ದರಿಂದ ರಾಜ್ಯದ ಬೊಕ್ಕಸಕ್ಕೆ 1 ಸಾವಿರ ಕೋಟಿ ರೂ. ನಷ್ಟವಾಗಬಹುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ದಾಖಲೆಯಲ್ಲೇ ಅಧಿಕೃತವಾಗಿ ನಮೂದಿಸಿದ್ದರು. ಉದ್ಯಮ, ರಿಯಲ್ ಎಸ್ಟೇಟ್ ಸೇರಿ ಕೆಲ ಕ್ಷೇತ್ರಗಳು ಪ್ರಾರಂಭದಲ್ಲಿ ಕುಸಿತ ಕಂಡವಾದರೂ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಮತ್ತೆ ಚೇತರಿಸಿತು. 2015 ಹಾಗೂ 2016ರಲ್ಲಿ ಶೇ. 42.9 ಬಂದಿದ್ದ ತೆರಿಗೆ ಪಾಲು ಈ ಬಾರಿ ನಗಣ್ಯ ಎನ್ನಬಹುದಾದ ಶೇ. 0.1 ಕಡಿಮೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಯಾವುದೇ ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹವಾಗಿಲ್ಲ. ಕಳೆದ ವರ್ಷ ಸೆಪ್ಟೆಂಬರ್ ವೇಳೆಗೆ ವಾರ್ಷಿಕ ಗುರಿಯ ಶೇ.44 ಸಂಗ್ರಹವಾಗಿದ್ದರೆ, ಈ ವರ್ಷ ಬಹುತೇಕ ಶೇ.2 ಹೆಚ್ಚಳ ಅಂದರೆ ಶೇ. 45.9 ಮುದ್ರಾಂಕ ಮತ್ತು ನೋಂದಣಿ ಶುಲ್ಕ ಲಭಿಸಿದೆ. ನೋಟು ಅಮಾನ್ಯೀಕರಣದಂಥ ನಿರ್ಧಾರವೊಂದರಿಂದಲೇ ಅಲುಗಾಡುವಷ್ಟು ಭಾರತದ ಆರ್ಥಿಕತೆ ದುರ್ಬ ಲವಲ್ಲ. ನೂರಾರು ಅಂಶಗಳನ್ನು ಅದು ಅವಲಂಬಿಸಿದೆ. ಸಣ್ಣ ಪ್ರಮಾಣದಲ್ಲಿ ಆತಂಕ ಮೂಡಿಸಬಹುದು ಎಂಬ ಆರ್ಥಿಕ ತಜ್ಞರ ಅನಿಸಿಕೆಯಂತೆಯೇ, ಆರ್ಥಿಕತೆ ಮೇಲೆ 2016-17ರಲ್ಲಿ ಕವಿದಿದ್ದ ಕಾರ್ವೇಡ 2017-18ರ ವೇಳೆಗೆ ಬಹುತೇಕ ಮರೆಯಾಗಿದೆ.

 

Leave a Reply

Your email address will not be published. Required fields are marked *

Back To Top